Viral Video ಕೆಲಸ ಮುಗಿಸಿ ಪ್ರತಿ ದಿನ 10 ಕಿ.ಮೀ ಓಡುತ್ತಲೇ ಮನೆ ಸೇರೋ ಯುವಕ, ಕಾರಣ ತಿಳಿದು ದೇಶವೇ ಹೇಳುತ್ತಿದೆ ಸಲ್ಯೂಟ್!

Published : Mar 20, 2022, 11:13 PM IST
Viral Video ಕೆಲಸ ಮುಗಿಸಿ ಪ್ರತಿ ದಿನ 10 ಕಿ.ಮೀ ಓಡುತ್ತಲೇ ಮನೆ ಸೇರೋ ಯುವಕ, ಕಾರಣ ತಿಳಿದು ದೇಶವೇ ಹೇಳುತ್ತಿದೆ ಸಲ್ಯೂಟ್!

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಪ್ರದೀಪ್ ಮೆಹ್ರಾ ವಿಡಿಯೋ ವೈರಲ್ ಪ್ರತಿ ದಿನ 10 ಕಿ.ಮೀ ಓಡುತ್ತಲೇ ಮನೆಗೆ ತೆರಳುವ ಯುವಕ ಈ ಓಟದ ಹಿಂದಿದೆ ದೇಶಕ್ಕೆ ಸ್ಪೂರ್ತಿ ನೀಡುವ ಉದ್ದೇಶ  

ದೆಹಲಿ(ಮಾ.20): ಮಧ್ಯರಾತ್ರಿ ಪ್ರತಿ ದಿನ 10 ಕಿ.ಮೀ ಓಟ, ಬಳಿಕ ಅಡುಗೆ ಮಾಡಿ ಸಹೋದರನ ಜೊತೆ ಊಟ..ಮನೆಯಲ್ಲಿ ತಾಯಿ ಅನಾರೋಗ್ಯ, ಬದುಕ ಸಾಗಿಸಬೇಕು, ಬಹುದೊಡ್ಡ ಕನಸು ಈಡೇರಿಸಬೇಕು. ಇದಕ್ಕಾಗಿ ಈ ಓಟ. ಅರೇ ಇದೇನು ಅಂತಾ ಕನ್ಫ್ಯೂಸ್ ಆಗಬೇಡಿ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರದೀಪ್ ಮೆಹ್ರಾ ಜೀವನ ಓಟದ ನೈಜ ಕತೆ.

ಸಾಮಾಜಿಕ ಜಾಲತಾಣದಲ್ಲಿ ಪ್ರದೀಪ್ ಮೆಹ್ರಾ ಯುವಕನ ವಿಡಿಯೋ ಭಾರಿ ವೈರಲ್ ಆಗಿದೆ. ಇದ್ದಕ್ಕಿದ್ದಂತೆ 19ರ ಹರೆಯದ ಈ ಪ್ರದೀಪ್ ಮೆಹ್ರಾ ದೇಶದ ಸ್ಪೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ. ಸೆಲೆಬ್ರೆಟಿಗಳು, ರಾಜಕಾರಣಿಗಳು ಸೇರಿದಂತೆ ಬಹುತೇಕರು ಪ್ರದೀಪ್ ಮೆಹ್ರಾ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.  ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುವ ಪ್ರದೀಪ್ ಮೆಹ್ರಾ ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಮನೆ ಸೇರುತ್ತಾನೆ. ಇದಕ್ಕೆ ಕಾರಣ, ಭಾರತೀಯ ಸೇನೆ ಸೇರಿಕೊಳ್ಳಲು ಈತ ನಡೆಸುವ ಕಠಿಣ ಅಭ್ಯಾಸ ಇದಾಗಿದೆ.

ಬೆಂಕಿ : ಪ್ರಾಣ ಉಳಿಸಲು ಮಗುವನ್ನು ಕಟ್ಟಡದಿಂದ ಕೆಳಗೆಸೆದ ಅಪ್ಪ, ವಿಡಿಯೋ

ಬರೋಲಾದಲ್ಲಿ ಸಹೋದರನ ಜೊತೆ ವಾಸವಿರುವ ಪ್ರದೀಪ್ ಮೆಹ್ರ, ಕೆಲಸ ಮುಗಿಸಿ ಅದಷ್ಟು ಬೇಗ ಮನೆ ಸೇರಿಕೊಂಡು ಅಡುಗೆ ಮಾಡಿ ಸಹೋದರನಿಗೆ ನೀಡುತ್ತಾನೆ. ಅತ್ತ ಸಹೋದರನಿಗೆ ರಾತ್ರಿ ಪಾಳಿಯಲ್ಲಿ ಕೆಲಸ. ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಇಡೀ ಕಟುಂಬದ ಜವಾಬ್ದಾರಿ ಈ ಪ್ರದೀಪ್ ಮೆಹ್ರಾ ಹಾಗೂ ಸಹೋದರನ ಮೇಲಿದೆ. 

ಭಾರತೀಯ ಸೇನೆ ಸೇರಲು ಫಿಟ್ನೆಸ್ ಇರಲೇಬೇಕು. ಇದಕ್ಕಾಗಿ ಜಿಮ್, ಬೆಳಗ್ಗೆ ವ್ಯಾಯಾಮ, ಜಾಗಿಂಗ್ ಹೋಗಲು ಸಮಯವಿಲ್ಲ. ಕಾರಣ ಮಧ್ಯರಾತ್ರಿ ವರೆಗೂ ಕೆಲಸ, ಬೆಳಗ್ಗೆ ಬೇಗನ ಮತ್ತೆ ಹೆಚ್ಚುವರಿ ಸಮಯದ ಕೆಲಸ. ಈ ಮೂಲಕ ಸಿಗುವ ವೇತನದಲ್ಲಿ ತಾಯಿ ಆರೋಗ್ಯ ನೋಡಿಕೊಳ್ಳುಬೇಕು, ಮನೆ ಖರ್ಚು ಎಲ್ಲವೂ ಸಾಗಬೇಕು. ಇದಕ್ಕಾಗಿ ಕೆಲಸ ಮುಗಿಸಿ ಮನೆಗೆ ಓಡುತ್ತಲೇ ಹಿಂತಿರುಗುತ್ತಾನೆ. ನಗರದ ರಸ್ತಗಳಲ್ಲಿ 10 ಕಿ.ಮೀ ಓಡುತ್ತಲೇ ಭಾರತೀಯ ಸೇನೆ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.

 

 

ಪ್ರದೀಪ್ ಮೆಹ್ರಾ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಕಾರಿನಲ್ಲಿ ಬಂದ ದಾರಿಹೋಕರು, ಈತನ ಪ್ರಶ್ನಿಸಿದ್ದಾರೆ. ಈ ರೀತಿ ಓಡುತ್ತಿರುವುದು ಯಾಕೆ? ಕಾರಿನಲ್ಲಿ ಮನೆಗೆ ಬಿಡುವುದಾಗಿ ಹಲವು ಬಾರಿ ವಿನಂತಿಸಿದ್ದಾರೆ. ಆದರೆ ಇದು ನನ್ನ ಅಭ್ಯಾಸ, ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ಅಭ್ಯಾಸವಾಗಿದೆ. ಇದಕ್ಕಾಗಿ ಬೇರೆ ಸಮಯ ನನ್ನ ಬಳಿ ಇಲ್ಲ ಎಂದು ಉತ್ತರಿಸಿದ್ದಾನೆ. ಓಡುತ್ತಲೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ.

ಪಂದ್ಯ ಗೆದ್ದ ಬಳಿಕ ಪಾಕ್ ನಾಯಕಿ ಮುದ್ದು ಕಂದನ ಜೊತೆ ಭಾರತ ಮಹಿಳಾ ಕ್ರಿಕೆಟಿಗರ ಮಧುರ ಕ್ಷಣ ವಿಡಿಯೋ ವೈರಲ್!

ಮೂಲತಃ ಉತ್ತರಖಂಡದ ಅಲ್ಮೋರಾದ ಪ್ರದೀಪ್ ಮೆಹ್ರಾ ಅತೀ ದೊಡ್ಡ ಕನಸು ಇಟ್ಟುಕೊಂಡಿದ್ದಾನೆ. ಈ ವೇಳೆ ನನ್ನ ಮನಗೆ ತೆರಳಿ ಆಹಾರ ಸೇವಿಸೋಣ ಬಳಿಕ ಕಾರಿನಲ್ಲಿ ಮನಗೆ ಬಿಡುವುದಾಗಿ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರದೀಪ್ ಮೆಹ್ರಾ, ನನ್ನ ಸಹೋದರ ಮನೆಯಲ್ಲಿದ್ದಾನೆ. ಆತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾನೆ. ಹೀಗಾಗಿ ನಾನು ಮನೆಗೆ ತೆರಳಬೇಕಿದೆ ಎಂದಿದ್ದಾನೆ. ಇಷ್ಟೇ ಅಲ್ಲ ಈ ವಿಡಿಯೋ ವೈರಲ್ ಆಗಲಿದೆ ಎಂದಾಗ, ಆಗಲಿ ನಾನೇನು ತಪ್ಪ ಮಾಡುತ್ತಿಲ್ಲ ಎಂದು ಉತ್ತರಿಸಿದ್ದಾನೆ.

ನಾನು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ ತಕ್ಷಣವೇ ಸಾಧ್ಯವಿಲ್ಲ, ಇದು ನನ್ನ ಪ್ರತಿ ದಿನದ ಅಭ್ಯಾಸವಾಗಿದೆ. ಇಂದು ಕಾರಿನಲ್ಲಿ ತೆರಳಿದರೆ ಅಭ್ಯಾಸ ಮೊಟಕಾಗಲಿದೆ. ಸೇನೆ ಸೇರಿಕೊಳ್ಳುವುದು ಕಷ್ಟವಾಗಲಿದೆ ಎಂದು ಉತ್ತರಿಸಿದ್ದಾನೆ. ಈ ವಿಡಿಯೋವನ್ನು ಇದೀಗ ಬಹುತೇಕರು ಹಂಚಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್ ಕೂಡ ಈ ವಿಡಿಯೋ ಹಂಚಿಕೊಂಡಿದ್ದು, ದೇಶಕ್ಕೆ ಸ್ಪೂರ್ತಿ ಎಂದಿದ್ದಾರೆ. ಈ ವಿಡಿಯೋ ಕೇವಲ 4 ಗಂಟೆಯಲ್ಲಿ 13 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?
ಅಜ್ಜ ಅಜ್ಜಿಯ ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮೊಮ್ಮಗ : ವೀಡಿಯೋ ಭಾರಿ ವೈರಲ್