ರೋಟಿಗಿಂತ ಪರೋಟಾಗೆ ಹೆಚ್ಚು ತೆರಿಗೆ, ಶೇ.18 ಜಿಎಸ್‌ಟಿ!

Published : Jun 13, 2020, 09:37 AM ISTUpdated : Jun 13, 2020, 09:50 AM IST
ರೋಟಿಗಿಂತ ಪರೋಟಾಗೆ ಹೆಚ್ಚು ತೆರಿಗೆ, ಶೇ.18 ಜಿಎಸ್‌ಟಿ!

ಸಾರಾಂಶ

ರೋಟಿಗಿಂತ ಪರೋಟಾಗೆ ಹೆಚ್ಚು ತೆರಿಗೆ!\| ರೋಟಿ- ಪರೋಟಾಗೆ ಒಂದೇ ತೆರಿಗೆ ನೀಡುವಂತೆ ಕೇಳಿದ್ದ ಬೆಂಗಳೂರು ಕಂಪನಿ| ಚಪಾತಿ, ರೋಟಿಯನ್ನು ನೇರವಾಗಿ ತಿನ್ನಬಹುದು| ಪರೋಟಾ ಬಿಸಿ ಮಾಡಿ ತಿನ್ನಬೇಕು| ಹೀಗಾಗಿ ಪರೋಟಾಗೆ ಶೇ.18 ಜಿಎಸ್‌ಟಿ| ತೆರಿಗೆ ಪ್ರಾಧಿಕಾರವೊಂದರ ತೀರ್ಪು

 

ನವದೆಹಲಿ(ಜೂ.13): ‘ರೆಡಿ ಟು ಈಟ್‌’ (ಸಿದ್ಧಪಡಿಸಲಾದ) ಪರೋಟಾಗಳು ‘ರೋಟಿ’ಗಳಂತಲ್ಲ. ಹೀಗಾಗಿ ರೋಟಿಗಳಂತೆ ಅವುಗಳಿಗೆ ಶೇ.5 ಜಿಎಸ್‌ಟಿ ಇರಲ್ಲ. ಇದರ ಬದಲಾಗಿ ಶೇ.18 ಜಿಎಸ್‌ಟಿ ಕಟ್ಟಬೇಕು ಎಂದು ತೆರಿಗೆ ಕುರಿತಾದ ಬೆಂಗಳೂರಿನ ಪ್ರಾಧಿಕಾರವೊಂದು ತೀರ್ಪು ನೀಡಿದೆ.

ಮಲಬಾರ್‌ ಪರೋಟಾ ಮತ್ತು ಗೋದಿ ಪರೋಟಾ ಜಿಎಸ್‌ಟಿ ಅಡಿಯ ‘1905ನೇ ಚಾಪ್ಟರ್‌’ (ಶೇ.5ರ ಜಿಎಸ್‌ಟಿ) ಅಡಿ ಬರುತ್ತವೆ. ಹಾಗಿದ್ದಾಗ ಪರೋಟಾಗೆ ಶೇ.18ರ ಜಿಎಸ್‌ಟಿ ಹಾಗೂ ರೋಟಿ/ಚಪಾತಿ/ಖಾಕ್ರಾಗೆ ಶೇ.5ರ ಜಿಎಸ್‌ಟಿ ದರ ಏಕೆ? ರೋಟಿ-ಚಪಾತಿ ಥರ ಪರೋಟಾಗೂ ಒಂದೇ ರೀತಿಯ ಶೇ.5ರ ಜಿಎಸ್‌ಟಿ ದರ ವಿಧಿಸಬೇಕು ಎಂದು ಬೆಂಗಳೂರಿನ ‘ಐಡಿ ಫ್ರೆಶ್‌ಫುಡ್ಸ್‌’ ಕಂಪನಿಯು, ತೆರಿಗೆ ಕುರಿತಾದ ಬೆಂಗಳೂರಿನ ಅಥಾರಿಟಿ ಆಫ್‌ ಅಡ್ವಾನ್ಸ್‌$್ಡ ರೂಲಿಂಗ್‌ (ಎಆರ್‌ಆರ್‌) ಮೊರೆ ಹೋಗಿತ್ತು.

ಇದನ್ನು ಪರಿಶೀಲಿಸಿ ತೀರ್ಪು ಪ್ರಕಟಿಸಿರುವ ಪ್ರಾಧಿಕಾರ, ‘ರೋಟಿ, ಚಪಾತಿ, ಖಾಕ್ರಾಗಳು ಸಂಪೂರ್ಣ ತಿನ್ನಲು ಸಿದ್ಧ ಇರುವ ಉತ್ಪನ್ನಗಳು. ಮನುಷ್ಯರು ತಿನ್ನುವ ಮುನ್ನ ಅವುಗಳ ಸಂಸ್ಕರಣೆ ಅಗತ್ಯವಿಲ್ಲ. ಆದರೆ ಪರೋಟಾ ಹಾಗಲ್ಲ. ಅವನ್ನು ತಿನ್ನುವ ಮೊದಲು ಬಿಸಿ ಮಾಡಲೇಬೇಕು. ಹೀಗಾಗಿ ಇವು 1905ರ ಚಾಪ್ಟರ್‌ (ಶೇ.5 ಜಿಎಸ್‌ಟಿ) ಅಡಿ ಬಾರದೇ, 2016ನೇ ಚಾಪ್ಟರ್‌ (ಶೇ.18 ಜಿಎಸ್‌ಟಿ) ಅಡಿ ಬರುತ್ತವೆ’ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!