ಟಿಟಿಡಿ ಸಿಬ್ಬಂದಿಗೆ ಸೋಂಕು ಹಿನ್ನೆಲೆ: ತಿಮ್ಮಪ್ಪನ ದರ್ಶನ 2 ದಿನ ಮುಂದೂಡಿಕೆ| ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಸಂಬಂಧಿಸಿದ ಪುರಾತನ ಶ್ರೀ ಗೋವಿಂದರಾಜ ಸ್ವಾಮಿ ಮಂದಿರದ ಸಿಬ್ಬಂದಿಗೆ ಕೊರೋನಾ
ತಿರುಪತಿ(ಜೂ.13): ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರ ಸಮೂಹವೇ ಹರಿದುಬರುತ್ತಿರುವ ಬೆನ್ನಲ್ಲೇ, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಸಂಬಂಧಿಸಿದ ಪುರಾತನ ಶ್ರೀ ಗೋವಿಂದರಾಜ ಸ್ವಾಮಿ ಮಂದಿರದ ಸಿಬ್ಬಂದಿಯೊಬ್ಬರು ಕೊರೋನಾಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಿರುಪತಿ ವೆಂಕಟೇಶ್ವರ ಮಂದಿರಕ್ಕೆ ಭಕ್ತರ ಪ್ರವೇಶವನ್ನು ಮತ್ತೆರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ.
3 ದಿನಗಳ ದೀರ್ಘಾವಧಿ ಬಳಿಕ ಗುರುವಾರದಿಂದಷ್ಟೇ ತೆರೆಯಲಾಗಿದ್ದ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಭಕ್ತರು ನಿರಾಸೆ ಅನುಭವಿಸಿದ್ದಾರೆ. ಸೋಮವಾರದಿಂದಷ್ಟೇ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಗುರುವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅಸ್ತು ನೀಡಲಾಗಿತ್ತು. ಆದರೆ, ಟಿಟಿಡಿಯ 7000 ಸಾವಿರ ಶಾಶ್ವತ ಹಾಗೂ 12 ಸಾವಿರಕ್ಕೂ ಹೆಚ್ಚು ಗುತ್ತಿಗೆ ನೌಕರರ ಪೈಕಿ ಒಬ್ಬರಿಗೆ ಕೊರೋನಾ ವ್ಯಾಪಿಸಿದೆ. ಹೀಗಾಗಿ, ಭಾನುವಾರದಿಂದ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದಿದೆ ಟಿಟಿಡಿ.
ಏತನ್ಮಧ್ಯೆ, ಈ ನೌಕರನ ಸಂಪರ್ಕಕ್ಕೆ ಬಂದಿದ್ದ ಎಲ್ಲ ಸಿಬ್ಬಂದಿಯನ್ನು ಕೊರೋನಾ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ಹೇಳಿದೆ