ಬುಧವಾರ ಮಧ್ಯಾಹ್ನ 12:49 ಕ್ಕೆ ರಾಜ್ ಲೋಧಿ ಇದ್ದಕ್ಕಿದ್ದಂತೆ ನೋವು ಮತ್ತು ಅಸ್ವಸ್ಥತೆಯ ಬಗ್ಗೆ ಹೇಳಿಕೊಂಡಿದ್ದ ಎಂದು ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಶಿಕ್ಷಕರು ಹೇಳಿದ್ದಾರೆ.
ಇಂದೋರ್ (ಜನವರಿ 19, 2024): ಮಧ್ಯ ಪ್ರದೇಶದ ಇಂದೋರ್‌ನ ಕೋಚಿಂಗ್ ಸೆಂಟರ್‌ನಲ್ಲಿ ಉಪನ್ಯಾಸಕ್ಕೆ ಹಾಜರಾಗುತ್ತಿದ್ದಾಗ 18 ವರ್ಷದ ವಿದ್ಯಾರ್ಥಿಯೊಬ್ಬ ಶಂಕಿತ ಹೃದಯ ಸ್ತಂಭನದಿಂದ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ರಾಜ್ ಲೋಧಿ ಇದ್ದಕ್ಕಿದ್ದಂತೆ ತಮ್ಮ ಮೇಜಿನ ಮೇಲೆ ಬಿದ್ದಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ.
ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಮೃತಪಟ್ಟಿದ್ದ ಎಂದು ಘೋಷಿಸಲಾಯಿತು. ರಾಜ್ ಸಾತ್ನಾ ಮೂಲದವನಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಇಂದೋರ್‌ಗೆ 650 ಕಿ.ಮೀ ದೂರದಿಂದ ಬಂದಿದ್ದ ಎಂದು ಭನ್ವಾರ್ಕುವಾನ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜ್‌ಕುಮಾರ್ ಯಾದವ್ ತಿಳಿಸಿದ್ದಾರೆ.
undefined
ಎಕ್ಸಾಂ ಬರೆಯಲು ಹೋಗಿ ಶಾಲೆಯಲ್ಲೇ ಹೃದಯ ಸ್ತಂಭನದಿಂದ ಮೃತಪಟ್ಟ 15 ವರ್ಷದ ಬಾಲಕಿ!
ಬುಧವಾರ ಮಧ್ಯಾಹ್ನ 12:49 ಕ್ಕೆ ರಾಜ್ ಲೋಧಿ ಇದ್ದಕ್ಕಿದ್ದಂತೆ ನೋವು ಮತ್ತು ಅಸ್ವಸ್ಥತೆಯ ಬಗ್ಗೆ ಹೇಳಿಕೊಂಡಿದ್ದ ಎಂದು ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಶಿಕ್ಷಕರು ಹೇಳಿದ್ದಾರೆ. ಅವನು ಕೈ ಜೋಡಿಸಿ ಉಪನ್ಯಾಸವನ್ನು ಕೇಳುತ್ತಿದ್ದ. ಇದ್ದಕ್ಕಿದ್ದಂತೆ ಮೇಜಿನ ಮೇಲೆ ಮುಖ ಮಾಡಿದ. ಮೊದಲಿಗೆ ಅವನು ನಿದ್ದೆ ಮಾಡುತ್ತಿದ್ದಾನೆ ಎಂದು ನಾನು ಭಾವಿಸಿದೆ, ಆದರೆ ಅವನು ನೋವಿನಿಂದ ಬಳಲುತ್ತಿರುವಂತೆ ಅವನ ಮುಖದ ಅಭಿವ್ಯಕ್ತಿಗಳನ್ನು ನಾನು ನೋಡಿದೆ.
ಬಳಿಕ, ನಾನು ಅವನ ಬೆನ್ನು ಉಜ್ಜಲು ಪ್ರಯತ್ನಿಸಿದೆ. ಆದರೆ ಅವನ ದೇಹವು ಗಟ್ಟಿಯಾದಂತೆ ಭಾಸವಾಯಿತು ಮತ್ತು ಅವನು ಬೆಂಚ್‌ನಿಂದ ಬಿದ್ದ ಎಂದು ನಾನು ಭಾವಿಸಿದೆ ಎಂದು ಅವನ ಪಕ್ಕದಲ್ಲಿ ಕುಳಿತಿದ್ದ ಸ್ನೇಹಿತ ರಾಹುಲ್ ಯಾದವ್ ಈ ಘಟನೆ ಬಗ್ಗೆ ವಿವರಿಸಿದ್ದಾನೆ.
ಒಂದೇ ದಿನ ಆರು ಬಾರಿ ಹೃದಯಾಘಾತವಾದ ವಿದ್ಯಾರ್ಥಿಯ ಬದುಕಿಸಿದ ವೈದ್ಯರು
ನಂತರ ಶಿಕ್ಷಕರು ಕೋಚಿಂಗ್ ಮ್ಯಾನೇಜ್‌ಮೆಂಟ್‌ಗೆ ಈ ಬಗ್ಗೆ ಮಾಹಿತಿ ನೀಡಿ ಮತ್ತು ರಾಜ್ ರನ್ನು 5 - 7 ನಿಮಿಷಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಅವರ ಕುಟುಂಬ ಸದಸ್ಯರು ರಾತ್ರಿ ಇಂದೋರ್‌ಗೆ ಬಂದರು. ಗುರುವಾರ ಮರಣೋತ್ತರ ಪರೀಕ್ಷೆಯ ನಂತರ ರಾಜ್ ಮೃತ ದೇಹವನ್ನು ಹಸ್ತಾಂತರಿಸಲಾಯಿತು. ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ತಿಳಿದುಬಂದಿದೆ.
ಹೃದಯ ಸ್ತಂಭನದಿಂದ ಆತ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ, ಆದರೆ ಮರಣೋತ್ತರ ಪರೀಕ್ಷೆ ಮುಗಿದ ನಂತರ ನಿಖರ ಕಾರಣ ಸ್ಪಷ್ಟವಾಗುತ್ತದೆ ಎಂದು ಪ್ರಾಥಮಿಕ ಶವಪರೀಕ್ಷೆ ನಡೆಸಿದ ಡಾ.ಭರತ್ ವಾಜಪೇಯಿ ಮಾಹಿತಿ ನೀಡಿದ್ದಾರೆ.
ಇನ್ನು, ರಾಜ್ ಲೋಧಿ 'ಪ್ರೋಟೀನ್ ಡಯಟ್' ನಲ್ಲಿದ್ದ ಮತ್ತು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಜಿಮ್‌ಗೆ ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಹಾಗೂ, ಕೂದಲು ಉದುರುವಿಕೆ ಸಮಸ್ಯೆಗೆ ಕೆಲವು ಮಾತ್ರೆಗಳನ್ನು ತೆಗೆದುಕೊಂಡಿದ್ದ ಎಂದೂ ಆತನ ಹಿರಿಯ ಸಹೋದರ ಅಕ್ಷಯ್ ಹೇಳಿದ್ದಾನೆ. ಆತನ ತಂದೆ, ಮಾಧವ್ ಲೋಧಿ, PHE ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ ಎಂದು ವರದಿಯಾಗಿದೆ.