
ಅಯೋಧ್ಯೆ: ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ರಾಮಲಲ್ಲಾನನ್ನು ಸ್ವರ್ಣಖಚಿತ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು ಎಂಬ ಸುದ್ದಿಯ ಬೆನ್ನಲ್ಲೇ, ದೇಗುಲದ 3 ಮಹಡಿಯಲ್ಲಿ ಇರುವ ಎಲ್ಲ 18 ಬಾಗಿಲುಗಳಿಗೂ ಕೂಡಾ ಸ್ವರ್ಣ ಲೇಪನ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದು ಬಂದಿದೆ.
ದೆಹಲಿ (delhi) ಮೂಲಕದ ಕುಶಲಕರ್ಮಿಗಳು ಮಹಾರಾಷ್ಟ್ರದ (Maharashtra) ಸಾಗುವಾನಿ ಮರದಿಂದ ತಯಾರಿಸಿರುವ ಬಾಗಿಲುಗಳ ಮೇಲೆ ಆನೆ, ಕಮಲ ಹಾಗೂ ಇತರ ವಿನ್ಯಾಸಗಳನ್ನು ಮಾಡಿದ್ದಾರೆ. ಅವುಗಳಿಗೆ ಮೊದಲು ಕಾಪರ್ ಹೊದಿಕೆ ನೀಡಿ ನಂತರ ಸ್ವರ್ಣ ಲೇಪನ ಮಾಡುವ ಮೂಲಕ ಬಾಳಿಕೆ ಹೆಚ್ಚುವಂತೆ ಮಾಡುವ ಜೊತೆಗೆ ಅದರ ವೈಭೋಗವನ್ನೂ ಇಮ್ಮಡಿಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅದರ ಮೇಲೆ ಸ್ವರ್ಣಲೇಪನ ಮಾಡಲಾಗುತ್ತಿದ್ದು, ಈ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಪೈಕಿ ಅತಿದೊಡ್ಡ ಬಾಗಿಲು ಮಂದಿರದ ಗರ್ಭಗುಡಿಯಲ್ಲಿ ಇರಲಿದೆ.
ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ
ಮುಂದಿನ 18 ತಿಂಗಳು ಏರಿಂಡಿಯಾಗೆ ಪ್ರತಿ 6 ದಿನಕ್ಕೊಂದು ಹೊಸ ವಿಮಾನ
ಸಿಂಗಾಪುರ: ಈಗಾಗಲೇ 470 ವಿಮಾನ ಖರೀದಿಗೆ ಜಾಗತಿಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಏರ್ ಇಂಡಿಯಾ (Air India), ಇದರ ಭಾಗವಾಗಿ ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ ಪ್ರತಿ 6 ದಿನಕ್ಕೆ ಒಂದರಂತೆ ಒಂದು ಹೊಸ ವಿಮಾನಗಳನ್ನು ಪಡೆದುಕೊಳ್ಳಲಿದೆ. ಇವುಗಳನ್ನು ಅಂತಾರಾಷ್ಟ್ರೀಯ ವಿಮಾನಯಾನಕ್ಕಾಗಿ ಬಳಕೆ ಮಾಡಿಕೊಳ್ಳಲಿದ್ದೇವೆ ಎಂದು ಕಂಪನಿ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ (Campbell Wilson) ತಿಳಿಸಿದ್ದಾರೆ.
ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ
ಏರಿಂಡಿಯಾ ಸಂಸ್ಥೆಯ ಒಡೆತನವನ್ನು ಟಾಟಾ ಸಮೂಹ (tata group) ಸರ್ಕಾರದಿಂದ ಪಡೆದುಕೊಂಡ ಬಳಿಕ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಜಾರಿ ಮಾಡಿದ್ದು, ಹೊಸ ವಿಮಾನಗಳ ಖರೀದಿಯನ್ನು ಮಾಡಿತ್ತು.
2 ವರ್ಷದಿಂದ ಬಳಕೆಯಲ್ಲಿಲ್ಲದ Gmail ಖಾತೆ ಡಿಲೀಟ್: ಒಮ್ಮೆ ಲಾಗಿನ್ ಆಗಿ ಖಾತೆ ಉಳಿಸಿಕೊಳ್ಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ