ದೇಶದಲ್ಲಿ ಮತ್ತೆ 1761 ಸಾವು: 2​0 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ!

Published : Apr 21, 2021, 07:42 AM IST
ದೇಶದಲ್ಲಿ ಮತ್ತೆ 1761 ಸಾವು: 2​0 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ!

ಸಾರಾಂಶ

1761 ಸಾವು: ಮತ್ತೆ ಸಾರ್ವಕಾಲಿಕ ದಾಖಲೆ| ನಿನ್ನೆ 2.59 ಲಕ್ಷ ಹೊಸ ಕೇಸ್‌| 2​0 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ| ಚೇತರಿಕೆ ಪ್ರಮಾಣ ಶೇ.85ಕ್ಕೆ ಕುಸಿತ| 1.53 ಕೋಟಿ ಒಟ್ಟು ಸೋಂಕಿತರು, 1.80 ಲಕ್ಷ ಒಟ್ಟು ಸಾವು| ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೇ.77ರಷ್ಟು ಸೋಂಕು

 

ನವದೆಹಲಿ(ಏ.21): ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 2,59,170 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ದಾಖಲೆಯ 1761 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ತನ್ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.53 ಕೋಟಿಗೆ ಏರಿಕೆಯಾದರೆ, ಒಟ್ಟು ಸಾವಿಗೀಡಾದವರ ಸಂಖ್ಯೆ 1,80,530ಕ್ಕೆ ಏರಿಕೆಯಾಗಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 20.31 ಲಕ್ಷಕ್ಕೆ ಹೆಚ್ಚಿದ್ದು, ಚೇತರಿಕೆ ಪ್ರಮಾಣ ಶೇ.85.56ಕ್ಕೆ ಕುಸಿದಿದೆ.

77% ಸೋಂಕು 10 ರಾಜ್ಯಗಳಲ್ಲಿ!:

ಮಂಗಳವಾರ ದೃಢಪಟ್ಟಹೊಸ ಪ್ರಕರಣಗಳ ಪೈಕಿ ಶೇ.77.67ರಷ್ಟುಸೋಂಕು ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲೇ ಪತ್ತೆಯಾಗಿವೆ. ಇತರ 9 ರಾಜ್ಯಗಳೆಂದರೆ ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್‌ ಮತ್ತು ರಾಜಸ್ಥಾನ. ಮಹಾರಾಷ್ಟ್ರವೊಂದರಲ್ಲೇ 58,924 ಪ್ರಕರಣಗಳು ಪತ್ತೆಯಾಗಿವೆ. ನಂತರದ ಸ್ಥಾನದಲ್ಲಿ ಉತ್ತರಪ್ರದೇಶದಲ್ಲಿ 28,648 ಮತ್ತು ದಿಲ್ಲಿಯಲ್ಲಿ 23,686 ಕೇಸ್‌ ಪತ್ತೆಯಾಗಿವೆ ಎಂದಿದೆ ಕೇಂದ್ರ ಆರೋಗ್ಯ ಇಲಾಖೆಯ ಅಂಕಿಸಂಖ್ಯೆ.

ಇನ್ನು ಭಾರತದ ಶೇ.62.07ರಷ್ಟುಸಕ್ರಿಯ ಕೇಸುಗಳು ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರಪ್ರದೇಶ, ಕರ್ನಾಟಕ ಮತ್ತು ಕೇರಳ ಈ 5 ರಾಜ್ಯಗಳಲ್ಲಿಯೇ ಇವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಹಾಗೆಯೇ ಮಂಗಳವಾರ ಮೃತಪಟ್ಟವರ ಪೈಕಿ ಶೇ.82.74ರಷ್ಟುಸಾವು ಕೇವಲ 10 ರಾಜ್ಯಗಳಲ್ಲಿ ಸಂಭವಿಸಿದೆ. ಮಹಾರಾಷ್ಟ್ರವೊಂದರಲ್ಲಿಯೇ 351 ಮಂದಿ, ದೆಹಲಿಯಲ್ಲಿ 240, ಛತ್ತೀಸ್‌ಗಢದಲ್ಲಿ 175, ಉತ್ತರಪ್ರದೇಶದಲ್ಲಿ 167, ಕರ್ನಾಟಕದಲ್ಲಿ 146, ಗುಜರಾತ್‌ನಲ್ಲಿ 117 ಮಂದಿ ಸಾವಿಗೀಡಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ