
ನವದೆಹಲಿ(ಏ.21): ರಷ್ಯಾದ ಸ್ಪುಟ್ನಿಕ್-5 ಕೊರೋನಾ ಲಸಿಕೆ ಭಾರತಕ್ಕೆ ಏಪ್ರಿಲ್ ಅಂತ್ಯಕ್ಕೆ ಆಗಮಿಸಲಿದೆ. ಮೇ ಅಂತ್ಯಕ್ಕೆ ಭಾರತದಲ್ಲೇ ಉತ್ಪಾದನೆ ಆಗುವ ನಿರೀಕ್ಷೆ ಇದೆ.
ರಷ್ಯಾದಲ್ಲಿನ ಭಾರತದ ರಾಯಭಾರಿ ಬಾಲ ವೆಂಕಟೇಶ ಶರ್ಮಾ ಮಂಗಳವಾರ ಈ ವಿಷಯಯ ತಿಳಿಸಿದ್ದಾರೆ.
ಇತ್ತೀಚೆಗೆ ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೆ ಭಾರತ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಮೊದಲ ಲಸಿಕೆಯ ಶಿಪ್‌ಮೆಂಟ್ ಈ ತಿಂಗಳ ಅಂತ್ಯಕ್ಕೆ ಆಗಮಿಸಲಿದೆ. ನಂತರ ಮೇನಲ್ಲಿ ಭಾರತದಲ್ಲೇ ಉತ್ಪಾದನೆ ಆಗಲಿದ್ದು ತಿಂಗಳಿಗೆ 50 ದಶಲಕ್ಷ ಡೋಸ್‌ವರೆಗೆ ಉತ್ಪಾದನೆ ಆಗಬಹುದು ಎಂದು ಹೇಳಿದ್ದಾರೆ. ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಡಾ| ರೆಡ್ಡೀಸ್ ಸೇರಿದಂತೆ ವಿವಿಧ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಸುಂಕ ವಿನಾಯಿತಿ:
ವಿದೇಶದಿಂದ ಆಮದದಾಗುವ ಲಸಿಕೆಗಳಿಗೆ ಭಾರತವು ಶೇ.10ರಷ್ಟುಸುಂೆಎಂಕ ವಿನಾಯಿತಿ ನೀಡಿವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ವಿದೇಶದಿಂದ ಆಮದಾಗುವ ವಸ್ತುಗಳಿಗೆ ಸರ್ಕಾರ ಶೇ.10 ಆಮದು ಸುಂಕ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ