ರೈಲಿಲ್ಲವೆಂದು ಹಳಿ ಮೇಲೆ ಮಲಗಿದ್ದ 17 ಮಂದಿ ರೈಲಿಗೆ ಸಿಲುಕಿ ಸಾವು....

By Suvarna NewsFirst Published May 8, 2020, 8:27 AM IST
Highlights

ಮಹಾರಾಷ್ಟ್ರದಿಂದ ಕಾರ್ಮಿಕರು ಮದ್ಯಪ್ರದೇಶದ ತಮ್ಮೂರಿಗೆ ಊರಿಗೆ ತೆರಳುತ್ತಿದ್ದರು. ರಸ್ತೆಯಲ್ಲಿ ಪೊಲೀಸರಿಂದ ತೊಂದರೆಯಾಗುತ್ತದೆ ಎಂದು ರೈಲ್ವೆ ಹಳಿ ಮೇಲೆ ಚಲಿಸುತ್ತಿದ್ದ ಕಾರ್ಮಿಕರು ರೈಲ್ವೆ ಹಳಿಗೆ ಸಿಲುಕಿ ಸಾವು.

ಔರಂಗಾಬಾದ್ (ಮೇ 8): ಬೆಳಗ್ಗೆ ನಡೆದ ದುರಂತವೊಂದರಲ್ಲಿ ರೈಲು ಹಾಯ್ದು 17 ವಲಸೆ ಕಾರ್ಮಿಕರು ಅಸುನೀಗಿದ್ದಾರೆ. ಮಕ್ಕಳು, ಮರಿಯೊಂದಿಗೆ ಸಾಗುತ್ತಿದ್ದ ಈ ಕಾರ್ಮಿಕರು ರೈಲಿಲ್ಲವೆಂದು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಮೃತಪಟ್ಟವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. 

ಮಹಾರಾಷ್ಟ್ರದಿಂದ ಕಾರ್ಮಿಕರು ಮದ್ಯಪ್ರದೇಶದ ತಮ್ಮೂರಿಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರದ ನಿರೀಕ್ಷೆಯಲ್ಲಿದ್ದೇವೆ. ರಸ್ತೆಯಲ್ಲಿ ಪೊಲೀಸರಿಂದ ತೊಂದರೆಯಾಗುತ್ತದೆ ಎಂದು ರೈಲ್ವೆ ಹಳಿ ಮೇಲೆ ಚಲಿಸುತ್ತಿದ್ದ ಕಾರ್ಮಿಕರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಉಸಿರಾಡೋ ಗಾಳಿಯೇ ವಿಷವಾದಾಗ

ಔರಾಂಗಾಬಾದ್‌ದ ಕರ್ಮಾಡ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೆಲವರು ಟ್ರ್ಯಾಕ್ ಮೇಲೆ ಮಲಗಿದ್ದರು ಎನ್ನಲಾಗುತ್ತಿದೆ. ಕೆಲವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಫತ್ರೆಗೆ ದಾಖಲಿಸಲಾಗಿದೆ.

ಅತ್ತ ಕೊರೋನಾ ಕಾಟ, ಆಂಧ್ರಪ್ರದೇಶದಲ್ಲಿ ವಿಷಾನಿಲ ಸ್ಫೋಟ, ಇತ್ತ ತಮಿಳು ನಾಡಿನಲ್ಲಿ ಬಾಯ್ಲಲ್ ಸ್ಫೋಟ ಈ ಸುದ್ದಿಗಳ ನಡುವೆಯೇ ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ಬಡ ಕೂಲಿ ಕಾರ್ಮಿಕರ ಮುಗ್ಧತೆಯಿಂದ ರೈಲಿಗೆ ಸಿಲುಕಿ ಬಲಿಯಾಗಿದ್ದಾರೆ. 

"

click me!