ಮೊಬೈಲ್‌ನಲ್ಲಿ ಹೊಸ ಆಪ್ ಡೌನ್‌ಲೋಡ್ ಮಾಡಿದ್ದಕ್ಕೆ ತಂದೆ ಮಗಳಿಗೆ ಬೈದಿದ್ದಾರೆ. ತಂದೆ ಮಾತುಗಳಿಂದ ನೊಂದ ಅಪ್ರಾಪ್ತ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮುಂಬೈ: ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಕಾಣುತ್ತವೆ. ಎರಡರಿಂದ ಮೂರು ವರ್ಷದೊಳಗಿನ ಮಕ್ಕಳು ಮೊಬೈಲ್ ಆಪರೇಟ್ ಮಾಡುತ್ತೇವೆ. ಟೀನೇಜರ್ಸ್ ಅಂತೂ ಮೊಬೈಲ್ ಇಲ್ಲದೇ ಗಳಿಗೆಯೂ ಇರಲ್ಲ ಎಂಬಂತೆ ಅಡಿಕ್ಟ್ ಆಗಿರುತ್ತಾರೆ. ಮನೆಯಲ್ಲಿಯೂ ನಿರಂತರವಾಗಿ ಮಕ್ಕಳು ಮೊಬೈಲ್ ಬಳಸುತ್ತಿದ್ದರೆ ಪೋಷಕರು ಬೈಯೋದು ಸಾಮಾನ್ಯ. ಮೊಬೈಲ್‌ನಲ್ಲಿ ಹೊಸ ಆಪ್ ಡೌನ್‌ಲೋಡ್ ಮಾಡಿದ್ದಕ್ಕೆ ತಂದೆ ಮಗಳಿಗೆ ಬೈದಿದ್ದಾರೆ. ತಂದೆ ಮಾತುಗಳಿಂದ ನೊಂದ ಅಪ್ರಾಪ್ತ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಾಲಿಯಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಮಗಳು ತಂದೆಯ ಮಾತುಗಳಿಂದ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ಮೊಬೈಲ್‌ನಲ್ಲಿ ಸ್ನ್ಯಾಪ್‌ಚಾಟ್ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಳು. ಮೊಬೈಲ್‌ನಲ್ಲಿ ಸ್ನ್ಯಾಪ್‌ಚಾಟ್ ಆಪ್ ನೀಡುತ್ತಿದ್ದಂತೆ ತಂದೆ ಕೋಪಗೊಂಡು ಮಗಳಿಗೆ ಬೈದಿದ್ದಾರೆ. ಹೊಸ ಆಪ್ ಡಿಲೀಟ್ ಮಾಡುವಂತೆ ಹೇಳಿದ್ದಾರೆ. ನಂತರ ಯುವತಿ ತನ್ನ ಕೋಣೆಗೆ ಹೋಗಿದ್ದಾಳೆ.
ಇಂದು ಬೆಳಗ್ಗೆ ಮಗಳ ಕೋಣೆಗೆ ಹೋದಾಗ ಆಕೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣ ಮಗಳನ್ನು ಸಮೀಪದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ವೈದ್ಯರು ಯುವತಿ ಮೃತಪಟ್ಟು ತುಂಬಾ ಸಮಯವಾಗಿದೆ ಎಂದು ದೃಢೀಕರಿಸಿದ್ದಾರೆ. ಆ ಬಳಿಕ ಬಾಲಕಿಯ ತಂದೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಮೊಬೈಲ್‌ನಲ್ಲಿ ಮಾತನಾಡ್ತೀರಾ, ಹಾರ್ಟ್‌ಅಟ್ಯಾಕ್ ಆಗೋದು ಖಂಡಿತ!
ಶೇ.42ರಷ್ಟು ಮಕ್ಕಳಿಂದ ದಿನಕ್ಕೆ 4 ಗಂಟೆ ಮೊಬೈಲ್ ಬಳಕೆ
ಹನ್ನೆರಡರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇ 42ರಷ್ಟು ಮಕ್ಕಳು ದಿನದ ಎರಡರಿಂದ ನಾಲ್ಕು ತಾಸು ತಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಪರದೆಯಲ್ಲೇ ಕಳೆಯುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಮಕ್ಕಳಿಗಾಗಿ ಸುರಕ್ಷಿತ ಅಂತರ್ಜಾಲವನ್ನು ನಿಯಂತ್ರಿಸುವ ಸಂಸ್ಥೆಯಾದ ಹ್ಯಾಪಿನೆಟ್ಜ್ ಈ ಸಮೀಕ್ಷೆ ನಡೆಸಿದ್ದು, 12ಕ್ಕಿಂತ ಹೆಚ್ಚಿನ ವಯೋಮಾನದವರು ದಿನದ ಶೇ 47ರಷ್ಟು ಸಮಯವನ್ನು ಮೊಬೈಲ್ ಪರದೆಯಲ್ಲಿ ಕಳೆಯುತ್ತಾರೆ ಎಂದು ವರದಿ ಹೇಳಿದೆ.
12 ಮತ್ತು ಹೆಚ್ಚಿನ ವಯೋಮಾನದ ಶೇ. 69ರಷ್ಟು ಮಕ್ಕಳು ತಮ್ಮ ಸ್ವಂತ ಸ್ಮಾರ್ಟ್‌ಫೋನ್ (Smart Phone), ಟ್ಯಾಬ್ಲೆಟ್ (Tablet) ಹೊಂದಿದ್ದು ಅದರ ಅಂತರ್ಜಾಲ (Internet) ಬಳಕೆಗೂ ಅನಿರ್ಬಂಧಿತ ಅನುಮತಿ ಪಡೆದಿದ್ದಾರೆ ಎಂದು ಸಂಸ್ಥೆಯು 1,500 ಪೋಷಕರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಾಲನೆ: ಖಾಸಗಿ ಬಸ್ ಚಾಲಕನಿಗೆ ಪಾಠ ಕಲಿಸಿದ ಪ್ರಯಾಣಿಕ!