ಭಾರತ ನುಸುಳಲು 140 ಉಗ್ರರ ಹೊಂಚು

By Kannadaprabha NewsFirst Published Aug 6, 2021, 8:16 AM IST
Highlights
  • ಭಾರತದ ಗಡಿಯನ್ನು ಅಕ್ರಮವಾಗಿ ನುಸುಳಿ ವಿಧ್ವಂಸಕ ಕೃತ್ಯವೆಸಗಲು ಸಂಚು
  • 140 ಭಯೋತ್ಪಾದಕರು ಜಮ್ಮು-ಕಾಶ್ಮೀರದ ಗಡಿಯಲ್ಲಿರುವ ಲಾಂಚ್‌ಪ್ಯಾಡ್‌ಗಳ ಬಳಿ ಕಾಯುತ್ತಿದ್ದಾರೆ

ಶ್ರೀನಗರ (ಆ.06): ಭಾರತದ ಗಡಿಯನ್ನು ಅಕ್ರಮವಾಗಿ ನುಸುಳಿ ವಿಧ್ವಂಸಕ ಕೃತ್ಯವೆಸಗಲು 140 ಭಯೋತ್ಪಾದಕರು ಜಮ್ಮು-ಕಾಶ್ಮೀರದ ಗಡಿಯಲ್ಲಿರುವ ಲಾಂಚ್‌ಪ್ಯಾಡ್‌ಗಳ ಬಳಿ ಕಾಯುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಜೊತೆಗೆ ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಬದ್ಧರಾಗಿರಲು ಒಪ್ಪಿದ ಹೊರತಾಗಿಯೂ, ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಹಿರಿಯ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುಲ್ವಾಮಾ ದಾಳಿ ಸಂಚುಕೋರನ ಹತ್ಯೆ!

ಈ ಬಗ್ಗೆ ಗುರುವಾರ ಮಾತನಾಡಿದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು, 140 ಉಗ್ರರು ಜಮ್ಮು-ಕಾಶ್ಮೀರದ ಗಡಿಯ ಲಾಂಚ್‌ಪ್ಯಾಡ್‌ಗಳಲ್ಲಿ ಕಾಯುತ್ತಿರುವುದನ್ನು ಸೇನೆ ಪತ್ತೆ ಹಚ್ಚಿದೆ. ಆದರೆ ಅವರು ಭಾರತ ನುಸುಳುವ ಯತ್ನವನ್ನು ಸೇನೆ ಹಿಮ್ಮೆಟ್ಟಿಸಲಿದೆ ಎಂಬ ಕಾರಣಕ್ಕೆ ಅಲ್ಲೇ ಉಳಿದಿದ್ದಾರೆ ಎಂದಿದ್ದಾರೆ.

ಸದ್ಯ ಪಾಕಿಸ್ತಾನ ಹಣಕಾಸು ಕ್ರಿಯಾ ಕಾರ‍್ಯಪಡೆ(ಎಫ್‌ಎಟಿಎಫ್‌)ಯ ಕಂದುಪಟ್ಟಿಯಲ್ಲಿದೆ. ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆಯಲು ಪಾಕಿಸ್ತಾನ ಈ ಪಟ್ಟಿಯಿಂದ ಹೊರಬರಬೇಕಿದೆ. ಈ ನಿಟ್ಟಿನಲ್ಲಿ ಕದನ ವಿರಾಮ ಒಪ್ಪಂದ ಪಾಲನೆ ಪಾಕಿಸ್ತಾನಕ್ಕೆ ಹೆಚ್ಚು ಮಹತ್ವದ್ದಾಗಿದೆ ಎಂದಿದ್ದಾರೆ.

click me!