ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ, ರಾಮ ಪರಿವಾರದ 13 ದೇವಸ್ಥಾನಕ್ಕೆ ಅಯೋಧ್ಯೆ ಸಿದ್ಧತೆ!

By Santosh NaikFirst Published Jan 24, 2024, 4:38 PM IST
Highlights

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಆದ ಬಳಿಕ ರಾಮ ಪರಿವಾರದ ಇನ್ನೂ 13 ದೇವಸ್ಥಾನಕ್ಕೆ ಅಯೋಧ್ಯೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.
 

ನವದೆಹಲಿ (ಜ.24): ಐತಿಹಾಸಿಕ ಶ್ರೀ ರಾಮ ಜನ್ಮಭೂಮಿ ದೇವಾಲಯವನ್ನು ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠಾಪನೆ ನಡೆಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ. ಈಗ ಭವ್ಯ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಿದ್ದು, ರಾಮಭಕ್ತರು ಬಾಲಕರಾಮನ ದರ್ಶನಕ್ಕೆ ಉತ್ಸಾಹ ತೋರುತ್ತಿದ್ದಾರೆ. ಈಗ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಸಂಕೀರ್ಣದಲ್ಲಿ ಕನಿಷ್ಠ 13 ದೇವಾಲಯಗಳನ್ನು ನಿರ್ಮಿಸುವ ಯೋಜನೆ ನಡೆಯುತ್ತಿದೆ ಎಂದು ಬಹಿರಂಗಪಡಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಸ್ಟ್‌ನ ಖಜಾಂಚಿ ಗುರುದೇವ್‌ ಗಿರಿಜಿ, ಮುಂದಿನ ದಿನಗಳಲ್ಲಿ ರಾಮ ಮಂದಿರ ಸಂಕೀರ್ಣದಲ್ಲಿ 13 ದೇವಾಲಯಗಳನ್ನು ನಿರ್ಮಾಣ ಮಾಡುವುದು ಹಾಗೂ ಪ್ರಧಾನ ದೇವಸ್ಥಾನದ ಸಣ್ಣಪುಟ್ಟ ಕೆಲಸಗಳನ್ನು ಮುಕ್ತಾಯ ಮಾಡುವುದು ತಮ್ಮ ಗುರಿ ಎಂದು ಹೇಳಿದ್ದಾರೆ. ಪ್ರಧಾನ ದೇವಸ್ಥಾನದಲ್ಲಿ ಬಾಲಕರಾಮ ಪ್ರತಿಷ್ಠಾಪನೆಯಾಗಿರುವ ಮೊದಲನೆ ಮಹಡಿ ಸಂಪೂರ್ಣವಾಗಿ ಮುಕ್ತಾಯವಾಗಿದೆ.

"ಎರಡನೇ ಮಹಡಿಯಲ್ಲಿ ಕೆಲಸ ಪ್ರಗತಿಯಲ್ಲಿದೆ, ನಂತರ ಶಿಖರ ಅಂದರೆ ಕೇಂದ್ರ ಗುಮ್ಮಟ  ಮಾಡಬೇಕಾಗಿದೆ" ಎಂದು ಗಿರಿಜಿ ತಿಳಿಸಿದ್ದಾರೆ. ಪ್ರಧಾನ ದೇವಸ್ಥಾನದ ಎಲ್ಲಾ ಕಾಮಗಾತಿ ಮುಗಿದ ಬಳಿಕ,  "ರಾಮ ಪರಿವಾರ" ಕ್ಕಾಗಿ ಐದು ಪ್ರಮುಖ ದೇವಾಲಯಗಳ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಭಗವಾನ್ ರಾಮನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿರುವುದರಿಂದ, ಮುಖ್ಯ ದೇವಾಲಯದ ನಾಲ್ಕು ಮೂಲೆಗಳಲ್ಲಿ ಗಣಪತಿ, ಶಿವ, ಸೂರ್ಯ ಮತ್ತು ಜಗದಂಬಾ ದೇವಿಗೆ ಸಮರ್ಪಿತವಾದ ದೇವಾಲಯಗಳನ್ನು ರಚಿಸಲಾಗುತ್ತದೆ.

ಇದರೊಂದಿಗೆ, ದಂತಕಥೆಯ ಪ್ರಕಾರ, ರಾಮನ ಅತಿದೊಡ್ಡ ಭಕ್ತನಾದ ಭಗವಾನ್ ಹನುಮಂತನಿಗೆ ಪ್ರತ್ಯೇಕ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಆಗಿರುವ ಗುರುದೇವ್‌ ಗಿರಿಜಿ,  ಸೀತಾ ರಸೋಯಿ ಬಳಿ, ಅನ್ನಪೂರ್ಣ ದೇವಿಗೆ ಸಮರ್ಪಿತವಾದ ದೇವಾಲಯವನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಾಮಮಂದಿರ ಸಂಕೀರ್ಣದ ಹೊರಗೆ ಸಂತ ವಾಲ್ಮೀಕಿ, ವಶಿಷ್ಟ, ವಿಶ್ವಾಮಿತ್ರ, ದೇವಿ ಶವಾರಿ ಮತ್ತು ಬೃಹತ್ ಪಕ್ಷಿ ಜಟಾಯು ದೇವಾಲಯಗಳನ್ನು ಸಹ ಸ್ಥಾಪನೆ ಮಾಡಲಾಗುತ್ತದೆ.

ಅಮೆರಿಕದಲ್ಲಿ ಶ್ರೀರಾಮನ ದರ್ಶನ ಪಡೆದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ..!

Latest Videos

ಅಯೋಧ್ಯೆಯ ರಾಮಮಂದಿರವನ್ನು ಜನವರಿ 23 ರಂದು ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ. ಮೊದಲ ದಿನ, ಸುಮಾರು ಮೂರು ಲಕ್ಷ ಭಕ್ತರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಆ ಮೂಲಕ 550 ವರ್ಷಗಳ ನಂತರ ಭಗವಾನ್ ರಾಮನ ಜನ್ಮಸ್ಥಳಕ್ಕೆ ಹಿಂದಿರುಗುವುದನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

ಅಯೋಧ್ಯೆಯಲ್ಲಿ ವಿರಾಟ್ ಕೊಹ್ಲಿ ಎಂದು ಭಾವಿಸಿ ಆತನ ಡೋಪಲ್ ಗ್ಯಾಂಗರ್‌ಗೆ ಫೋಟೋಗಾಗಿ ಮುತ್ತಿದ ಜನ; ವಿಡಿಯೋ ವೈರಲ್

click me!