ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 12 ರೀತಿ ವಿಚಿತ್ರ ಕಾರ್‍ಯದರ್ಶಿಗಳು, ವರ್ತನೆ ಸುಧಾರಣೆಗೆ ಸಂಪುಟ ಸೆಕ್ರೆಟರಿ ಕ್ರಮ

Gowthami K   | Kannada Prabha
Published : Oct 29, 2026, 11:18 AM IST
TV Somanathan

ಸಾರಾಂಶ

ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು 12 ಬಗೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ವಿವರಿಸುವ ಪಟ್ಟಿಯನ್ನು ಪ್ರಸ್ತುತಪಡಿಸಿದರು. ಕಡತ ವಿಳಂಬ, ಅನಗತ್ಯ ಸಭೆ ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವ ಅಧಿಕಾರಿಗಳಿಗೆ ಕಾರ್ಟೂನ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಕಚೇರಿ ಸಂಸ್ಕೃತಿ ಸುಧಾರಿಸಲು ಈ ವಿನೂತನ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ: ಇತ್ತೀಚೆಗೆ ನಡೆದ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಕಾರ್ಯಕ್ಷಮತೆ ಪರಿಶೀಲನಾ ಸಭೆಯಲ್ಲಿ, ಸಚಿವ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಹಾಸ್ಯಭರಿತವಾದ ಆದರೆ ಗಂಭೀರ ಸಂದೇಶವಿರುವ ಪ್ರಸ್ತುತಿಯೊಂದನ್ನು ತೋರಿಸಿ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಈ ಸಭೆಯಲ್ಲಿ ಅವರು ಹಿರಿಯ ಅಧಿಕಾರಿಗಳ ವಿವಿಧ ಕಾರ್ಯವೈಖರಿಯನ್ನು ವಿವರಿಸುತ್ತಾ ಒಟ್ಟು 12 ಬಗೆಯ ಕಾರ್ಯದರ್ಶಿಗಳ ಪಟ್ಟಿಯನ್ನು ಪರಿಚಯಿಸಿದ್ದಾರೆ.

ಪಟ್ಟಿಯಲ್ಲಿ ವಿವರಣೆ ಏನಿದೆ?

ಈ ಪಟ್ಟಿಯಲ್ಲಿ ಕಡತಗಳನ್ನು ವಿಳಂಬಗೊಳಿಸುವವರು, ಅನಗತ್ಯ ಸಭೆ ಕರೆದು ಸಿಬ್ಬಂದಿಗೆ ಕಾಟ ಕೊಡುವವರು, ತಡವಾಗಿ ಕಚೇರಿಗೆ ಬರುವವರು, ಫೈಲ್‌ಗಳನ್ನು ಎಸೆಯುವವರು, ಕಟುವಾಗಿ ಮಾತಾಡುವವರು ಸೇರಿದಂತೆ 12 ಬಗೆಯ ಕಾರ್ಯದರ್ಶಿಗಳನ್ನು ಪಟ್ಟಿ ಮಾಡಲಾಗಿದೆ. ತಮ್ಮ ಹಂತದಲ್ಲೇ ಕೈಗೊಳ್ಳಬೇಕಾದ ನಿರ್ಧಾರಗಳನ್ನೂ ಸಚಿವರಿಗೆ ಅಥವಾ ಮೇಲಧಿಕಾರಿಗಳಿಗೆ ಕಳುಹಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವವರು, ಸಂಜೆ 7 ಗಂಟೆ ನಂತರ ಅನಗತ್ಯ ಸಭೆ ಕರೆಯುವವರು, ರಜಾ ದಿನಗಳಲ್ಲಿಯೂ ಸಿಬ್ಬಂದಿಯನ್ನು ಬಲವಂತವಾಗಿ ಕೆಲಸಕ್ಕೆ ಕರೆಸಿ ತಾವು ಮಾತ್ರ ತಡವಾಗಿ ಬರುವ ಅಧಿಕಾರಿಗಳನ್ನು ಪಟ್ಟಿಯಲ್ಲಿ ವಿವರಿಸಲಾಗಿದೆ. ಕಾರ್ಟೂನ್‌ಗಳ ಮೂಲಕ ಅಂಥ ಅಧಿಕಾರಿಗಳಿಗೆ ಚಾಟಿ ಬೀಸಲಾಗಿದೆ.

ಮಹಿಳಾ ಸಹೋದ್ಯೋಗಿಗಳಿಗೆ ದಾಖಲೆಯೊಂದನ್ನು ತೋರಿಸುವ ನೆಪದಲ್ಲಿ, ಅವರಿಗೆ ಮುಜುಗರ ಉಂಟಾಗುವಷ್ಟು ಹತ್ತಿರಕ್ಕೆ ಬರುವಂತೆ ಕೇಳಿಕೊಳ್ಳುವ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಳ್ಳಲಾಗಿದೆ. ಸೋಮನಾಥನ್ ಅವರ ಈ ಕ್ರಮ ಕೆಲವು ಅಧಿಕಾರಿಗಳನ್ನು ಮುಜುಗರಕ್ಕೆ ದೂಡಿದೆ. ಕಚೇರಿಯ ಕೆಲಸದ ಸಂಸ್ಕೃತಿಯನ್ನು ಸುಧಾರಿಸಲು ಇಂಥ ವಿನೂತನ ಕ್ರಮ ಕೈಗೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸುಪ್ರೀಂ ಕೋರ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರು ಪ್ರಸ್ತಾಪ; ದೆಹಲಿಯ ಈ ಸಮಸ್ಯೆಗೆ ಬಿಗ್ ರಿಲೀಫ್ ಕೊಡ್ತಾರಾ ರನ್ ಮಷಿನ್?
ಪಾಕ್‌ನಲ್ಲಿ ಹಿಂದೂಗಳ ಸಂಖ್ಯೆ ಶೇ. 2ಕ್ಕೆ ಕುಸಿತ, ಹೇಗೆಲ್ಲಾ ಟಾರ್ಗೆಟ್ ಆಗ್ತಿದ್ದಾರೆ ಹೆಣ್ಮಕ್ಕಳು? ಕರಾಳ ಮುಖ ಬಿಚ್ಚಿಟ್ಟ Insight UK