ತಾಲಿಬಾನ್‌ ಭೀತಿ ನಡುವೆಯೂ ಏರ್‌ಪೋರ್ಟ್‌ ಕೆಲಸಕ್ಕೆ ಮರಳಿದ 12 ಮಹಿಳೆಯರು!

By Suvarna NewsFirst Published Sep 13, 2021, 8:40 AM IST
Highlights

* ತಮ್ಮ ಸುರಕ್ಷತೆಯ ದೃಷ್ಟಿಯಿಂದಾಗಿ ಮಹಿಳೆಯರು ಮನೆಯಲ್ಲೇ ಇರುವುದು ಒಳಿತು ಎಂದ ತಾಲಿಬಾನ್

* ತಾಲಿಬಾನ್‌ ಭೀತಿ ನಡುವೆಯೂ ಏರ್‌ಪೋರ್ಟ್‌ ಕೆಲಸಕ್ಕೆ ಮರಳಿದ 12 ಮಹಿಳೆಯರು

ಕಾಬೂಲ್‌(ಸೆ.13): ತಮ್ಮ ಸುರಕ್ಷತೆಯ ದೃಷ್ಟಿಯಿಂದಾಗಿ ಮಹಿಳೆಯರು ಮನೆಯಲ್ಲೇ ಇರುವುದು ಒಳಿತು ಎಂಬ ತಾಲಿಬಾನಿ ಉಗ್ರರ ಬೆದರಿಕೆ ಸ್ವರೂಪದ ಎಚ್ಚರಿಕೆ ಹೊರತಾಗಿಯೂ 12 ಮಹಿಳೆಯರು ಕಾಬೂಲ್‌ ವಿಮಾನ ನಿಲ್ದಾಣದ ಕೆಲಸಕ್ಕೆ ಮರಳಿದ್ದಾರೆ.

ಉಗ್ರರು ದೇಶ ವಶಪಡಿಸಿಕೊಳ್ಳುವ ಮುನ್ನ ನಿಲ್ದಾಣದಲ್ಲಿ 80ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಅವರ ಪೈಕಿ 12 ಜನರು ಕೆಲಸಕ್ಕೆ ಮರಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೂರು ಮಕ್ಕಳ ತಾಯಿಯಾಗಿ ಸಂಸಾರ ನಿಭಾಯಿಸುತ್ತಿರುವ ರಬಿಯಾ (35), ‘ನನ್ನ ಕುಟುಂಬ ನಿಭಾಯಿಸಲು ನನಗೆ ಹಣದ ಅವಶ್ಯಕತೆ ಇದೆ. ಮನೆಯಲ್ಲಿರುವುದು ಆತಂಕವನ್ನು ಹೆಚ್ಚು ಮಾಡುತ್ತಿತ್ತು. ಈಗ ಕೆಲಸಕ್ಕೆ ಮರಳಿರುವುದು ಖುಷಿ ನೀಡಿದೆ. ಅಷ್ಘಾನಿಸ್ತಾನದ ಶ್ರೀಮಂತ ಹುಡುಗಿಯಾಗುವುದು ನನ್ನ ಕನಸು, ನಾನು ಅದೃಷ್ಟವಂತೆ ಎನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನು ರಬಿಯಾರ ಸೋದರಿ ಖುದಾಸಿಯಾ ಕೂಡಾ 5 ಮಕ್ಕಳ ತಾಯಿಯಾಗಿದ್ದು, ಕುಟುಂಬ ನಿರ್ವಹಣೆ ನಿಟ್ಟಿನಲ್ಲಿ ನನಗೆ ಉದ್ಯೋಗ ಅನಿವಾರ್ಯ. ಹೀಗಾಗಿ ಕೆಲಸಕ್ಕೆ ಮರಳಿದ್ದೇನೆ ಎಂದಿದ್ದಾರೆ.

click me!