ದರ ಏರುತ್ತಿದ್ದರೂ ತಿರುಪತಿ ತಿಮ್ಮಪ್ಪನಿಗೆ ಭರ್ಜರಿ 1031 ಕೆಜಿ ಚಿನ್ನ ಕಾಣಿಕೆ..!

By Kannadaprabha NewsFirst Published Apr 21, 2024, 9:32 AM IST
Highlights

2020ರ ಬಳಿಕ ಪ್ರತಿ ವರ್ಷ ದೇಗುಲಕ್ಕೆ ಸರಾಸರಿ 1 ಟನ್‌ನಷ್ಟು ಚಿನ್ನ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗಿದೆ. ಜೊತೆಗೆ ಪ್ರತಿ ವರ್ಷ1600 ಕೋಟಿ ರು.ನಷ್ಟು ಹಣ ಹುಂಡಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ಹಣದ ಪೈಕಿ 19000 ಕೋಟಿ ರು.ಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿಇಡಲಾಗಿದೆ. ಇದಲ್ಲದೇ ದೇಗುಲದ ಹೆಸರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 85000 ಎಕರೆ ಭೂಮಿ ಕೂಡಾ ಇದೆ.

ತಿರುಪತಿ(ಏ.21):  ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ತಿರುಪತಿ ತಿಮ್ಮಪ್ಪನಿಗೆ ಭಕ್ತರು ಚಿನ್ನ ಕಾಣಿಕೆ ನೀಡುವ ಸಂಪ್ರದಾಯಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಕಾರಣ 2023ರಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದರೂ ಭಕ್ತರು ಭರ್ಜರಿ 1031 ಕೆ.ಜಿ. ಚಿನ್ನವನ್ನು ಕಾಣಿಕೆಯಾಗಿ ನೀಡಿದ್ದಾರೆ.

ಇದರೊಂದಿಗೆ ವಿವಿಧ ಬ್ಯಾಂಕ್‌ಗಳಲ್ಲಿ ತಿರುಪತಿ ತಿಮ್ಮಪ್ಪನ ಹೆಸರಲ್ಲಿ ಇರುವ ಚಿನ್ನದ ಪ್ರಮಾಣ 11329 ಕೆ.ಜಿಗೆ ತಲುಪಿದೆ. ಇದರ ಮೌಲ್ಯ ಭರ್ಜರಿ 8496 ಕೋಟಿ ರುಪಾಯಿಗಳು.

ಸತತ 24ನೇ ತಿಂಗಳು ತಿರುಪತಿ ಹುಂಡಿಯಲ್ಲಿ ಶತಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

ಟಿಟಿಡಿ ಬಿಡುಗಡೆ ಮಾಡಿರುವ ಹೊಸ ಮಾಹಿತಿ ಅನ್ವಯ, 2020ರ ಬಳಿಕ ಪ್ರತಿ ವರ್ಷ ದೇಗುಲಕ್ಕೆ ಸರಾಸರಿ 1 ಟನ್‌ನಷ್ಟು ಚಿನ್ನ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗಿದೆ. ಜೊತೆಗೆ ಪ್ರತಿ ವರ್ಷ1600 ಕೋಟಿ ರು.ನಷ್ಟು ಹಣ ಹುಂಡಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ಹಣದ ಪೈಕಿ 19000 ಕೋಟಿ ರು.ಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿಇಡಲಾಗಿದೆ. ಇದಲ್ಲದೇ ದೇಗುಲದ ಹೆಸರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 85000 ಎಕರೆ ಭೂಮಿ ಕೂಡಾ ಇದೆ.

click me!