
ಭೋಪಾಲ್: ವಾರ್ಷಿಕ 7 ಲಕ್ಷ ರು. ಆದಾಯ ಹೊಂದಿರುವ ಮಧ್ಯಪ್ರದೇಶದ ಯುವಕನಿಗೆ ಆದಾಯ ತೆರಿಗೆ ಇಲಾಖೆ 113 ಕೋಟಿ ರೂ ದಂಡ ಪಾವತಿಸುವಂತೆ ನೋಟಿಸ್ ನೀಡಿದೆ. ಈತನಿಗೆ ಸ್ವತಃ ಪ್ರಧಾನಿ ಕಾರ್ಯಾಲಯ ಸೂಚನೆ ಅನ್ವಯ ತನಿಖೆ ನಡೆಸಿ ಆರ್‌ಬಿಐ ಕ್ಲೀನ್‌ಚಿಟ್ ಕೊಟ್ಟ ಹೊರತಾಗಿಯೂ ಇಲಾಖೆ ನೋಟಿಸ್ ಜಾರಿ ಮಾಡಿದೆ.
2019ರಲ್ಲಿ ರವಿ ಗುಪ್ತಾಗೆ (Ravi gupta) ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ (Income Tax department) ನೋಟಿಸ್ ನೀಡಿತ್ತು. ಅದರಲ್ಲಿ 2011-12ರಲ್ಲಿ ನೀವು ನಡೆಸಿದ 132 ಕೋಟಿ ವ್ಯವಹಾರ ಸಂಬಂಧ 3.49 ಕೋಟಿ ರು. ತೆರಿಗೆ ಕಟ್ಟುವಂತೆ ಸೂಚಿಸಲಾಗಿತ್ತು. ಆದರೆ ನಾನು ಅಂಥ ಯಾವುದೇ ವ್ಯವಹಾರ ನಡೆಸಿಲ್ಲ. 2011-12ರಲ್ಲಿ ನನ್ನ ಮಾಸಿಕ ಆದಾಯ ಕೇವಲ 9000 ರು. ಇತ್ತು ಎಂದು ಗುಪ್ತಾ ಉತ್ತರ ನೀಡಿದ್ದರು. ಬಳಿಕ ತನ್ನ ಪಾನ್ ಸಂಖ್ಯೆಯನ್ನು (Pan Number) ಬೇರೆ ಯಾರೋ ದುರ್ಬಳಕೆ ಮಾಡಿರಬಹುದು ಎಂಬ ಶಂಕೆ ಮೇಲೆ ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೂ ದೂರು ನೀಡಿದ್ದ. ಆದರೆ ಅವರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ (Prime Minister's Office)ಮನವಿ ಮಾಡಿದ್ದ. ಬಳಿಕ ಪ್ರಧಾನಿ ಕಾರ್ಯಾಲಯದ ಸೂಚನೆ ಅನ್ವಯ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಆರ್‌ಬಿಐ, ಈತ ಅಷ್ಟು ವಹಿವಾಟು ನಡೆಸಿಲ್ಲ ಎಂದು ಹೇಳಿ ಆತನಿಗೆ ಕ್ಲೀನ್ ಚಿಟ್ (clean chit)ನೀಡಿತ್ತು.
ಇದೆಲ್ಲದರ ಹೊರತಾಗಿ ಮತ್ತೆ ಇದೀಗ ರವಿಗೆ ಆದಾಯ ತೆರಿಗೆ ಇಲಾಖೆ ಹಿಂದಿನ ವಹಿವಾಟು ಸಂಬಂಧ 113 ಕೋಟಿ ರು. ದಂಡ ಕಟ್ಟುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದೆ.
ಯಾರೆಲ್ಲ ಐಟಿಆರ್ -1 ಸಹಜ್ ಸಲ್ಲಿಕೆ ಮಾಡ್ಬೇಕು? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ
ತೆರಿಗೆದಾರರು ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆಗೆ ನೀವು ಸಲ್ಲಿಕೆ ಮಾಡುವ ಆದಾಯ ತೆರಿಗೆ ರಿಟರ್ನ್ ಅಥವಾ ಐಟಿಆರ್ ಆ ಹಣಕಾಸು ಸಾಲಿನಲ್ಲಿ ನಿಮ್ಮ ಆದಾಯ, ಕಡಿತಗಳು ಹಾಗೂ ತೆರಿಗೆ ಪಾವತಿ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಐಟಿಆರ್ ಫೈಲ್ ಮಾಡುವ ಪ್ರಕ್ರಿಯೆಯನ್ನು ಆದಾಯ ತೆರಿಗೆ ಫೈಲಿಂಗ್ ಎಂದು ಕೂಡ ಕರೆಯಲಾಗುತ್ತದೆ. ಐಟಿಆರ್ ಸಲ್ಲಿಕೆ ಮಾಡುವ ಮುಖ್ಯ ಉದ್ದೇಶ ಆ ವರ್ಷದ ನಿಮ್ಮ ತೆರಿಗೆ ಪಾವತಿ ಮೊತ್ತ ಎಷ್ಟು, ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದೀರಾ ಅಥವಾ ಹೆಚ್ಚಿನ ತೆರಿಗೆ ಪಾವತಿಸಿದ್ರೆ ರೀಫಂಡ್ ಕ್ಲೇಮ್ ಸಂಬಂಧಿಸಿದ ಮಾಹಿತಿಗಳನ್ನು ಇದರಲ್ಲಿ ಉಲ್ಲೇಖಿಸಬಹುದು. ಐಟಿಆರ್ ಅರ್ಜಿ (ಫಾರ್ಮ್ ) ನಮೂನೆಗಳಲ್ಲಿ ಕೂಡ ವ್ಯತ್ಯಾಸವಿದೆ. ಅಂದರೆ ಎಲ್ಲರಿಗೂ ಒಂದೇ ಮಾದರಿಯ ಅರ್ಜಿ ನಮೂನೆಗಳಿರೋದಿಲ್ಲ. ವೈಯಕ್ತಿಕ, ವೃತ್ತಿ ಹಾಗೂ ಉದ್ಯಮ ವರ್ಗಗಳ ಆಧಾರದಲ್ಲಿ ಐಟಿಆರ್ ಅರ್ಜಿ ನಮೂನೆ ಕೂಡ ಬದಲಾಗುತ್ತದೆ. ಸದ್ಯ ಆದಾಯ ತೆರಿಗೆ ಇಲಾಖೆ 6 ವಿಧದ ಐಟಿಆರ್ ಅರ್ಜಿ ನಮೂನೆ ನೀಡುತ್ತಿದೆ. 2023-24ನೇ ಆರ್ಥಿಕ ಸಾಲಿಗೆ ಈ ಅರ್ಜಿ ನಮೂನೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಫೆ.10ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ನೀವು ಪಿಂಚಣಿ ಪಡಯುತ್ತಿದ್ದೀರಾ? ಹಾಗಾದ್ರೆ ನೀವು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು, ಹೇಗೆ? ಇಲ್ಲಿದೆ ಮಾಹಿತಿ
ಈ ವರ್ಷ ಸಿಬಿಡಿಟಿ ಐಟಿಆರ್ ಅರ್ಜಿಗಳು 1-6, ಐಟಿಆರ್ -V (ಪರಿಶೀಲನಾ ಅರ್ಜಿ) ಹಾಗೂ ಐಟಿಆರ್ ಸ್ವೀಕೃತಿ ಅರ್ಜಿಯನ್ನು ಕೂಡ ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಿದೆ. ಇದು ತೆರಿಗೆದಾರರಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಒದಗಿಸಲು ಸಾಕಷ್ಟು ಸಮಯಾವಕಾಶ ಒದಗಿಸಿದೆ. ಈ ಹಿಂದೆ ಆದಾಯ ತೆರಿಗೆ ಇಲಾಖೆ ಸಂಬಂಧಪಟ್ಟ ಆರ್ಥಿಕ ಸಾಲಿಗೆ ಸಂಬಂಧಿಸಿದ ಐಟಿಆರ್ ಅರ್ಜಿಗಳನ್ನು ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಬಿಡುಗಡೆಗೊಳಿಸುತ್ತಿತ್ತು. ಇನ್ನು ಸಿಬಿಡಿಟಿ ಐಟಿಆರ್ -1 ಅರ್ಜಿಗೆ ಸಂಬಂಧಿಸಿ ಸೆಕ್ಷನ್ 139 (1) ಅಡಿಯಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿದೆ. ವಾರ್ಷಿಕ 2.5ಲಕ್ಷ ರೂ.ಗಿಂತ ಕಡಿಮೆ ತೆರಿಗೆ ವಿಧಿಸಬಲ್ಲ ಆದಾಯ ಹೊಂದಿರೋರು ಐಟಿಆರ್ -1 ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಐಟಿಆರ್ 1 ಸಹಜ್ ಎಂದು ಕೂಡ ಕರೆಯಲಾಗುತ್ತದೆ.
Breaking: ಪಾನ್-ಆಧಾರ್ ಲಿಂಕ್ ಅವಧಿ ವಿಸ್ತರಣೆ, ಜೂನ್ 30 ಅಂತಿಮ ದಿನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ