ಹಿಂದೂ ವಿದ್ಯಾರ್ಥಿಗಳಿಗೂ ಹಿಜಾಬ್‌ ಕಡ್ಡಾಯಗೊಳಿಸಿದ ಶಾಲೆ

Published : Jun 01, 2023, 06:31 AM ISTUpdated : Jun 01, 2023, 06:39 AM IST
ಹಿಂದೂ ವಿದ್ಯಾರ್ಥಿಗಳಿಗೂ ಹಿಜಾಬ್‌ ಕಡ್ಡಾಯಗೊಳಿಸಿದ ಶಾಲೆ

ಸಾರಾಂಶ

ಮಧ್ಯಪ್ರದೇಶದ ಗಂಗಾ ಜಮುನಾ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೂ ಹಿಜಾಬ್‌ ರೀತಿಯ ವಸ್ತ್ರ ಕಡ್ಡಾಯ ಮಾಡಿದ ವಿವಾದವೊಂದು ಭುಗಿಲೆದ್ದಿದೆ. ಈ ಕುರಿತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ.

ದಮೋಹ್‌: ಇಲ್ಲಿನ ಗಂಗಾ ಜಮುನಾ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೂ ಹಿಜಾಬ್‌ ರೀತಿಯ ವಸ್ತ್ರ ಕಡ್ಡಾಯ ಮಾಡಿದ ವಿವಾದವೊಂದು ಭುಗಿಲೆದ್ದಿದೆ. ಈ ಕುರಿತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ. ಇತ್ತೀಚೆಗೆ ಶಾಲೆಯ ಫಲಿತಾಂಶ ಕುರಿತು ಹಾಕಲಾದ ಬ್ಯಾನರ್‌ನಲ್ಲಿ ಹಲವೂ ಹಿಂದೂ ವಿದ್ಯಾರ್ಥಿನಿಯರೂ ತಲೆಗೆ ಹಿಜಾಬ್‌ ರೀತಿಯ ವಸ್ತ್ರ ಧರಿಸಿದ್ದು ಕಂಡುಬಂದಿದೆ. 

ಮೊದಲಿಗೆ ಈ ಆರೋಪದ ಕುರಿತು ತನಿಖೆ ನಡೆಸಿದ್ದ ಜಿಲ್ಲಾ ಶಿಕ್ಷಣಾಧಿಕಾರಿಗಳು ಈ ಕುರಿತು ಯಾವುದೇ ದೂರು ಬಂದಿಲ್ಲ ಎಂದು ವರದಿ ನೀಡಿದ್ದರು. ಆದರೆ ಪ್ರಕರಣ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಈ ಕುರಿತು ತನಿಖೆ ನಡೆಸಲು ಗೃಹ ಸಚಿವ ನರೋತ್ತಮ ಮಿಶ್ರಾ (Narottam mishra) ಆದೇಶಿಸಿದ್ದಾರೆ. ಈ ನಡುವೆ ಶಾಲೆಯ ಮಾಲೀಕ ಮುಶ್ತಾಖ್‌ ಖಾನ್‌ (Mushtakh Khan) ಪ್ರತಿಕ್ರಿಯೆ ನೀಡಿ, ಹಿಜಾಬ್‌ (Hijab) ರೀತಿಯ ಶಿರವಸ್ತ್ರ ಕೂಡಾ ಶಾಲೆಯ ಸಮವಸ್ತ್ರದ ಭಾಗವಾಗಿದೆ. ಈ ಬಗ್ಗೆ ನಾವು ಯಾರೂ ಮೇಲೂ ಒತ್ತಡ ಹೇರಿಲ್ಲ ಎಂದಿದ್ದಾರೆ.

ಹಿಜಾಬ್​ ಧರಿಸಿಯೇ ಊಟ ಸೇವಿಸಿದ ಬಾಲಿವುಡ್​ ನಟಿ ಝೈರಾ

ದಂಗಲ್' (Dangal) ಖ್ಯಾತಿಯ ಝೈರಾ ವಾಸಿಮ್ ಕೆಲವು ವರ್ಷಗಳ ಹಿಂದೆ ಬಾಲಿವುಡ್ ತೊರೆದು ಧಾರ್ಮಿಕ ಮಾರ್ಗವನ್ನು ಅನುಸರಿಸುತ್ತಿದ್ದರೂ, ಅವರು ವಿವಿಧ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಇವರ ಹೆಸರು ಬಹಳ ಸದ್ದು ಮಾಡಿದ್ದು,  ಕರ್ನಾಟಕದ ಹಿಜಾಬ್ ವಿವಾದ ಭುಗಿಲೆದ್ದ ಸಂದರ್ಭದಲ್ಲಿ. ಶಾಲಾ-ಕಾಲೇಜುಗಳ ತರಗತಿಯಲ್ಲಿ ಹಿಜಾಬ್​ ಧರಿಸಬಾರದು ಎಂದು ಆದೇಶ ಹೊರಡಿಸಿದ್ದಾಗ ಅದರ ವಿರುದ್ಧ ದನಿ ಎತ್ತಿದ್ದರು ಝೈರಾ.  ಶಾಲಾ-ಕಾಲೇಜುಗಳಲ್ಲಿ ಹಿಜಾಬ್ (Hijab) ಅನ್ನು ನಿಷೇಧಿಸಿರುವುದು ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು  ಹೇಳಿದ್ದರು.  ಕರ್ನಾಟಕ ಶಾಲೆಗಳಲ್ಲಿ ಹಿಜಾಬ್ ನಿಷೇಧವನ್ನು ಟೀಕಿಸುವ ಸುದೀರ್ಘ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದರು.  ಫೇಸ್‌ಬುಕ್​ನಲ್ಲಿ ಬರೆದಿದ್ದ ಸುದೀರ್ಘ ಟಿಪ್ಪಣಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವರ್ಷದ ಜನವರಿ 1 ರಂದು ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತಮ್ಮ ಕಾಲೇಜಿಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂಬ ಸುದ್ದಿ ಬಂದಾಗಿನಿಂದಲೂ ಕರ್ನಾಟಕದ ವಿರುದ್ಧ ದನಿ ಎತ್ತಿದ್ದರು ಈ ನಟಿ.

ರಾಜ್ಯದಲ್ಲಿ ಮತ್ತೆ ಕೇಸರಿ ಕದನ: ಬಿಜೆಪಿ ಸರ್ಕಾರದ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಸಮರ

ಹಿಜಾಬ್ ಧರಿಸುವುದನ್ನು "ದೇವರು ತನ್ನ ಮೇಲೆ ವಿಧಿಸಿದ ಬಾಧ್ಯತೆಯನ್ನು ಪೂರೈಸುವುದು" ಎಂದಿದ್ದ ಝೈರಾ (Zaira Wasim),  'ನಾನು, ಹಿಜಾಬ್ ಧರಿಸುವ ಮಹಿಳೆಯ ಪರವಾಗಿ ಇರುತ್ತೇನೆ.  ಮಹಿಳೆಯರನ್ನು ತಡೆಯುವ ಮತ್ತು ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ. ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸುವುದನ್ನು ಬ್ಯಾನ್​ ಮಾಡಿ ಅವರ ಶಿಕ್ಷಣಕ್ಕೆ  ಅನ್ಯಾಯ ಮಾಡಲಾಗುತ್ತಿದೆ.  ಮುಸ್ಲಿಂ ಮಹಿಳೆಯರ ವಿರುದ್ಧ ಈ ಪಕ್ಷಪಾತವನ್ನು ನಾನು ಒಪ್ಪುವುದಿಲ್ಲ' ಎಂದು ಕರ್ನಾಟಕ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು ನಟಿ ಝೈರಾ.

ಇಂತಿಪ್ಪ ಝೈರಾ, ಇದೀಗ ಮತ್ತೆ ಸಾಮಾಜಿಕ ಜಾಲತಾಣದ (Social Media) ಮೂಲಕ ಗಮನ ಸೆಳೆಯುತ್ತಿದ್ದಾರೆ.  ಅವರ ಟ್ವೀಟ್ ಎಲ್ಲರ ಗಮನ ಸೆಳೆದಿದ್ದು, ಚರ್ಚೆಗೆ ಒಳಗಾಗಿದೆ.  ಟ್ವೀಟ್​ನಲ್ಲಿ ಅವರು,  'ಈಗಷ್ಟೇ ಮದುವೆಗೆ ಹಾಜರಾಗಿದ್ದೇನೆ. ಸರಿಯಾಗಿ ತಿಂದೆ. ಸಂಪೂರ್ಣವಾಗಿ ತಿನ್ನುವ ಆಯ್ಕೆ ನನ್ನದು, ಅದನ್ನು ನಾನು ಖುಷಿ ಪಟ್ಟಿದ್ದೇನೆ.  ನನ್ನ ಸುತ್ತಲಿರುವವರೆಲ್ಲರೂ ನಾನು ನಿಖಾಬ್ ತೆಗೆಯುವಂತೆ ನನ್ನನ್ನು  ಕೆಣಕುತ್ತಿದ್ದರು.  ಆದರೆ ನಾನು ಹಾಗೆ ಮಾಡಲಿಲ್ಲ. ನಿಖಾಬ್​ ಜೊತೆಗೇ ಊಟ ಸವಿದೆ. ಇದು ನನ್ನ ಹಕ್ಕು' ಎಂದಿದ್ದಾರೆ. ಈ ರೀತಿ ಮಾಡಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದಿದ್ದಾರೆ.

ಬಜರಂಗದಳ ಬ್ಯಾನ್‌ ಮಾಡ್ತೇವೆ ಎಂದು ಕುಣಿತ್ತಿದ್ದ ಕಾಂಗ್ರೆಸ್ ವರಸೆ ಬದಲಿಸಿದೆ: ಓವೈಸಿ ಗರಂ  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?