ತಿರುಪತಿಯ 15 ಅರ್ಚಕರು ಸೇರಿ 100 ಸಿಬ್ಬಂದಿಗೆ ವೈರಸ್: ಆದರೂ ದೇಗುಲ ಮುಚ್ಚಲ್ಲ

By Kannadaprabha NewsFirst Published Jul 17, 2020, 8:08 AM IST
Highlights

ತಿರುಪತಿ ತಿಮ್ಮಪ್ಪನ ದೇಗುಲದ 50 ಅರ್ಚಕರ ಪೈಕಿ 15ಕ್ಕೂ ಹೆಚ್ಚು ಮಂದಿ ಮತ್ತು 90ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಸೋಂಕಿಗೆ ತುತ್ತಾದ ಹೊರತಾಗಿಯೂ, ದೇಗುಲವನ್ನು ದೇವರ ದರ್ಶನಕ್ಕೆ ಮುಕ್ತವಾಗಿರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ತಿರುಮಲ(ಜು.17): ಇಲ್ಲಿನ ತಿರುಪತಿ ತಿಮ್ಮಪ್ಪನ ದೇಗುಲದ 50 ಅರ್ಚಕರ ಪೈಕಿ 15ಕ್ಕೂ ಹೆಚ್ಚು ಮಂದಿ ಮತ್ತು 90ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಸೋಂಕಿಗೆ ತುತ್ತಾದ ಹೊರತಾಗಿಯೂ, ದೇಗುಲವನ್ನು ದೇವರ ದರ್ಶನಕ್ಕೆ ಮುಕ್ತವಾಗಿರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

25 ಅರ್ಚಕರ ಪರೀಕ್ಷಾ ವರದಿ ಇನ್ನೂ ಬರಬೇಕಿರುವ ಹಿನ್ನೆಲೆಯಲ್ಲಿ ಇನ್ನಷ್ಟುಜನರಿಗೆ ಸೋಂಕು ತಗುಲಿರುವ ಭೀತಿಯೂ ಎದುರಾಗಿದೆ. ಈ ನಡುವೆ ಕೆಲ ದಿನಗಳ ಕಾಲ ದೇಗುಲ ಮುಚ್ಚುವಂತೆ ಮಾಡಿದ್ದ ಸಿಬ್ಬಂದಿ ಮತ್ತು ಅರ್ಚಕರ ಮನವಿಯನ್ನು ಗುರುವಾರ ನಡೆದ ಟಿಟಿಡಿಯ ತುರ್ತು ಸಭೆಯಲ್ಲಿ ತಿರಸ್ಕರಿಸಲಾಗಿದೆ.

ತಿರುಪತಿ ಹುಂಡಿಗೆ 20 ಚಿನ್ನದ ಬಿಸ್ಕತ್ ಹಾಕಿದ ಭಕ್ತ

ತಿರುಪತಿಗೆ ಹೆಚ್ಚಿನ ಆದಾಯ ಬರುವುದು ಇದ್ದಕ್ಕೆ ಕಾರಣ ಎನ್ನಬಹುದು. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ತಿರುಪತಿ ವೆಂಕಟೇಶ್ವರ ದೇವಾಲಯ ಮರು ಆರಂಭವಾಗಿ ಎರಡು ವಾರದಲ್ಲಿಯೇ ದೇವಾಲಯದಲ್ಲಿ ಸುಮಾರು 7.5 ಕೋಟಿ ಆದಾಯ ಸಂಗ್ರಹವಾಗಿತ್ತು.

ಕಳೆದ 14 ದಿನಗಳಲ್ಲಿ ಕೇವಲ ಹುಂಡಿಯಲ್ಲಿ ಮಾತ್ರವೇ 6 ಕೋಟಿ ಸಂಗ್ರಹವಾಗಿದ್ದು, ಆನ್‌ಲೈನ್‌ ದರ್ಶನದಿಂದಾಗಿ 1.5 ಕೋಟಿ ರು. ಸಂಗ್ರಹವಾಗಿದೆ. ಇನ್ನು ಹುಂಡಿಯಲ್ಲಿ ಭಕ್ತರು ಸಮರ್ಪಿಸುವ ಬಂಗಾರ, ಬೆಳ್ಳಿ ಮತ್ತಿತರ ಬೆಲೆಬಾಳುವ ವಸ್ತುಗಳ ಮೌಲ್ಯವನ್ನು ಲೆಕ್ಕ ಹಾಕಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದರು.

click me!