44 ಅಮರನಾಥ ಯಾತ್ರಿಗಳಿದ್ದ ಬಸ್ ಬ್ರೇಕ್ ಫೇಲ್... ದೇವರಂತೆ ಬಂದು ಕಾಪಾಡಿದ ಯೋಧರು

By Mahmad RafikFirst Published Jul 3, 2024, 12:57 PM IST
Highlights

ಹೆದ್ದಾರಿ ಮಾರ್ಗವಾಗಿ ತೆರಳುತ್ತಿದ್ದ ಬಸ್ ಬ್ರೇಕ್‌ಫೇಲ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡಿತ್ತು. ಕೂಡಲೇ ದೇವರಂತೆ ಆಗಮಿಸಿದ ಸೈನಿಕರು ಎಲ್ಲ ಜೀವವನ್ನು ಉಳಿಸಿದ್ದಾರೆ.

ಜಮ್ಮು: ಅಮರನಾಥ ಯಾತ್ರೆಯಿಂದ (Amaranatha Yatra) ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳ ಬಸ್ ಬ್ರೇಕ್ ಫೇಲ್ (Bus Breakfail) ಆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (video Viral) ಆಗಿದೆ. ಬ್ರೇಕ್‌ಫೇಲ್ ಆದ ಬಸ್‌ನಲ್ಲಿ 44 ಪ್ರಯಾಣಿಕರು (Amarnath yatra pilgrims) ಯಾತ್ರೆಯಿಂದ ಹಿಂದಿ ರುಗುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಭಾರತೀಯ ಸೈನಿಕರು (Indian Army) ಎಲ್ಲಾ ಪ್ರಯಾಣಿಕರ ಪ್ರಾಣವನ್ನು ಉಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ರಾಮಬನ್ ಜಿಲ್ಲೆಯ ಹೆದ್ದಾರಿ ಮಾರ್ಗವಾಗಿ ತೆರಳುತ್ತಿದ್ದ ಬಸ್ ಬ್ರೇಕ್‌ಫೇಲ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡಿತ್ತು. ಕೂಡಲೇ ದೇವರಂತೆ ಆಗಮಿಸಿದ ಸೈನಿಕರು ಎಲ್ಲ ಜೀವವನ್ನು ಉಳಿಸಿದ್ದಾರೆ. ಈ ಬಸ್‌ನಲ್ಲಿದ್ದ ಎಲ್ಲಾ ಯಾತ್ರಾರ್ಥಿಗಳು ಪಂಜಾಬ್ ಮೂಲದವರು ಎಂದು ವರದಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯಾತ್ರಾರ್ಥಿಗಳು ಚಲಿಸುತ್ತಿರುವ ಬಸ್‌ನಿಂದ ಕೆಳಗೆ ಇಳಿಯುತ್ತಿರೋದನ್ನು ಗಮನಿಸಬಹುದು. ಕೆಲವರು ಬಸ್‌ನಿಂದ ಇಳಿಯುತ್ತಿದ್ದಂತೆ ಬ್ಯಾಲೆನ್ಸ್ ಮಾಡಲಾಗದೇ ಕೆಳಗೆ ಬಿದ್ದಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಪ್ರಕಾರ ಬಸ್‌ನಲ್ಲಿ 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. 

ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋದ ಮರಿ ಆನೆ ರಕ್ಷಿಸಿದ ಅರಣ್ಯಾಧಿಕಾರಿ ತಂಡ, ವಿಡಿಯೋ!

ಚಲಿಸುತ್ತಿರುವ ಬಸ್‌ನಿಂದ ಜಿಗಿದರು

ಬನಿಹಾಲ ಸಮೀಪದ ನಚಲಾನಾ ಬಳಿ ಬರುತ್ತಿದ್ದಂತೆ ಬಸ್‌ನ ಬ್ರೇಕ್ ಫೇಲ್ ಆಗಿತ್ತು. ಚಾಲಕ ಬಸ್ ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಬಸ್ ಅಡ್ಡಾದಿಡ್ಡಿಯಾಗಿ ಚಲಿಸಲು ಆರಂಭಿಸಿದೆ. ರಸ್ತೆಯ ಪಕ್ಕದಲ್ಲಿಯೇ ಆಳವಾದ ಕಣಿವೆ ಇರೋ ಕಾರಣ ಕೆಲ ಪ್ರಯಾಣಿಕರು ಚಲಿಸುತ್ತಿರುವ ಬಸ್‌ನಿಂದಲೇ ಕೆಳಗೆ ಇಳಿದಿದ್ದಾರೆ. ಘಟನೆಯಲ್ಲಿ ಆರು ಪುರುಷರು, ಮೂರು ಮಹಿಳೆಯರು ಹಾಗೂ ಒಂದು ಮಗು ಸೇರಿದಂತೆ 10 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರೇಕ್‌ಫೇಲ್ ಆಗಿದ್ದ ಬಸ್ ನಿಲ್ಲಿಸಿದ್ದು ಹೇಗೆ? 

ಬ್ರೇಕ್‌ಫೇಲ್‌ ಆದ ಬಸ್ ಗಮನಿಸಿದ  ಸೈನಿಕರು ಮತ್ತು ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಬಸ್ ಚಕ್ರಕ್ಕೆ ಸಾಧ್ಯವಾದಷ್ಟು ದೊಡ್ಡ ದೊಡ್ಡ ಕಲ್ಲುಗಳನ್ನು ಅಡ್ಡಲಾಗಿ ಹಾಕಿದ್ದಾರೆ. ಈ ಮೂಲಕ ಬಸ್ ನದಿಗೆ ಉರುಳೋದನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಸ್ ಹಿಂದೆ ಸ್ಥಳೀಯರು, ಸೈನಿಕರು ಮತ್ತು ಪೊಲೀಸರು ಓಡಿ ಹೋಗುತ್ತಿರುವ ವಿಡಯೋ ಸಹ ವೈರಲ್ ಆಗಿದೆ. 

ಹಾಥ್ರಸ್ ಕಾಲ್ತುಳಿತ: ಎಲ್ಲೆಂದರಲ್ಲಿ ಹೆಣಗಳು.. ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ

J&K: of carrying pilgrims failed. from the moving bus to save their lives. The stopped the bus by putting up a barrier. This bus was returning from Amarnath to (). … pic.twitter.com/LNeSUJlYi0

— 6 Block South Patel Nagar (NGO REGD)🇮🇳 (@NgoPatelNagar)
click me!