
ಸೋನ್‌ಭದ್ರ[ನ.30]: ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಸರ್ಕಾರ ಮಧ್ಯಾಹ್ನದ ವೇಳೆ ಬಿಸಿಯೂಟ ಯೋಜನೆ ತಂದಿದೆ. ಆದರೆ, ಉತ್ತರಪ್ರದೇಶದಲ್ಲಿ ಮಾತ್ರ ಇದು ಸಾಕಾರ ಕಾಣುತ್ತಿಲ್ಲವಾಗಿದೆ.
ಚೋಪನ್ ಬ್ಲಾಕ್‌ನಲ್ಲಿನ ಸರ್ಕಾರಿ ಶಾಲೆಯೊಂದು 1 ಲೀಟರ್ ಹಾಲನ್ನು, 1 ಬಕೆಟ್ ನೀರಿಗೆ ಬೆರೆಸಿ ಅದನ್ನು 81 ವಿದ್ಯಾರ್ಥಿಗಳಿಗೆ ನೀಡಿ ವಿವಾದಕ್ಕೀಡಾಗಿದೆ. ಮಕ್ಕಳಿಗೆ ‘ನೀರಿನ ಹಾಲು’ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಬಾಣಸಿಗ 1 ಲೀಟರ್ ಹಾಲನ್ನು ಒಂದು ದೊಡ್ಡ ಬಕೆಟ್‌ನಲ್ಲಿನ ನೀರಿನಲ್ಲಿ ಬೆರೆಸಿ ಅದನ್ನು ಶಾಲಾ ಮಕ್ಕಳಿಗೆ ನೀಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿ, ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ರಾಜಲಿಂಗನ್ ಅವರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲು ಆದೇಶಿಸಿದ್ದಾರೆ.
ಅಲ್ಲದೇ, ಓರ್ವ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಈ ಹಿಂದೆ ಮಿರ್ಜಾಪುರ ಜಿಲ್ಲೆಯ ಸಿಯೂರ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸುವಾಗ ಚಪಾತಿ ಜತೆಯಲ್ಲಿ ತರಕಾರಿ(ಪಲ್ಯ) ಬದಲಾಗಿ ‘ಉಪ್ಪು’ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ