ದೇಶದಲ್ಲಿ ಕೊರೋನಾಗೆ 1ಲಕ್ಷ ಜನ ಬಲಿ!

By Kannadaprabha NewsFirst Published Oct 3, 2020, 8:50 AM IST
Highlights

ದೇಶದಲ್ಲಿ ಕೊರೋನಾಗೆ 1ಲಕ್ಷ ಜನ ಬಲಿ| ಕೋರೋನಾ ಮರಣ ಮೃದಂಗ| ಲಕ್ಷಕ್ಕಿಂತಲೂ ಹೆಚ್ಚು ಜನ ಮೃತಪಟ್ಟ3ನೇ ದೇಶ ಭಾರತ| ನಂ.1 ಅಮೆರಿಕದಲ್ಲಿ 2.14 ಲಕ್ಷ ಜನ ಸಾವು| ನಂ.2 ಬ್ರೆಜಿಲ್‌ನಲ್ಲಿ 1.44 ಲಕ್ಷ ಮಂದಿ ಸಾವು

ನವದೆಹಲಿ(ಅ.10): ದೇಶದಲ್ಲಿ ಮಾರಕ ಕೊರೋನಾ ವೈರಸ್‌ ರಣಕೇಕೆ ಮುಂದುವರಿದಿದ್ದು, ಏಳು ತಿಂಗಳ ಅವಧಿಯಲ್ಲಿ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ 1 ಲಕ್ಷದ ಗಡಿಯನ್ನು ದಾಟಿದೆ.

ಕೇಂದ್ರ ಆರೋಗ್ಯ ಇಲಾಖೆ ಒದಗಿಸಿದ ಮಾಹಿತಿಯಂತೆ ಶುಕ್ರವಾರ ಮುಂಜಾನೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಕೊರೋನಾಕ್ಕೆ 1,095 ಮಂದಿ ಬಲಿ ಆಗುವುದರೊಂದಿಗೆ ಸಾವಿನ ಸಂಖ್ಯೆ 99,773ಕ್ಕೆ ತಲುಪಿತ್ತು. ಸಂಜೆಯ ವೇಳೆಗೆ ಮಹಾರಾಷ್ಟ್ರ (394 ಮಂದಿ), ಕರ್ನಾಟಕ (125 ಮಂದಿ) ಸೇರಿದಂತೆ ಇತರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಮಂದಿ ಕೊರೋನಾಕ್ಕೆ ಬಲಿ ಆಗಿದ್ದು, ಸಾವಿನ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಈ ಮೂಲಕ ಭಾರತವು ಅಮೆರಿಕ ಮತ್ತು ಬ್ರೆಜಿಲ್‌ ಬಳಿಕ ಕೊರೋನಾಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾದ ವಿಶ್ವದ ಮೂರನೇ ದೇಶ ಎನಿಸಿಕೊಂಡಿದೆ.

ಇದೇ ವೇಳೆ, ಶುಕ್ರವಾರ ಬೆಳಗ್ಗೆವರೆಗೆ ದೇಶದಲ್ಲಿ 81,484 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 63.94 ಲಕ್ಷಕ್ಕೆ ಏರಿಕೆ ಕಂಡಿದೆ. ಈ ಮಧ್ಯೆ ಒಂದೇ ದಿನದಲ್ಲಿ 78,877 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 53 ಲಕ್ಷಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ.83.70ಕ್ಕೆ ಏರಿಕೆ ಆಗಿದೆ. ಸಾವಿನ ಪ್ರಮಾಣ ಶೇ. 1.56ಕ್ಕೆ ಇಳಿಕೆ ಕಂಡಿದೆ. ಸದ್ಯ 9.42 ಲಕ್ಷ ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹೊರತಾಗಿಯೂ ಕಳೆದ 12 ದಿನಗಳಲ್ಲಿ 10 ಲಕ್ಷ ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಸತತ 11ನೇ ದಿನವೂ ಸಕ್ರಿಯ ಪ್ರಕರಣಗಳು 10 ಲಕ್ಷಕ್ಕಿಂತ ಕಡಿಮೆ ದಾಖಲಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕರ್ನಾಟಕ ನಂ.3:

ಇನ್ನು ರಾಜ್ಯವಾರು ಕೊರೋನಾ ಪ್ರಕರಣಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ.

ಸಾವು ದಿನಾಂಕ

1* ಮಾ.12

1000 ಏ.29

10,000 ಜೂ.15

25,000 ಜು.16

50,000 ಆ.15

75,000 ಸೆ.10

1,00,000 ಅ.2

click me!