
ನವದೆಹಲಿ(ಏ.21): ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಘೇಬ್ರೆಯೇಸಸ್ ಅವರ ಬೇಡಿಕೆಯಂತೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತಿ ಹೆಸರನ್ನು ನಾಮಕರಣ ಮಾಡಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಜಾಗತಿಕ ಆಯುಷ್ ಹೂಡಿಕೆ ಶೃಂಗಸಭೆಯಲ್ಲಿ ಅವರು ಟೆಡ್ರೋಸ್‌ಗೆ ತುಳಸಿ ಭಾಯಿ ಎಂದು ನಾಮಕರಣ ಮಾಡಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ‘ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ನನ್ನ ಳ್ಳೆಯ ಸ್ನೇಹಿತ. ಭಾರತೀಯ ಶಿಕ್ಷಕರು ನನಗೆ ಕಲಿಸಿದ್ದಾರೆ. ಹಾಗಾಗಿ ನಾನು ಇಲ್ಲಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಾರೆ. ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಹೆಸರನ್ನು ನಿರ್ಧರಿಸಿದ್ದೀರ ಎಂದು ಇಂದು ನನ್ನನ್ನು ಅವರು ಕೇಳಿದರು. ಹಾಗಾಗಿ ಅವರಿಗೆ ತುಳಸಿ ಭಾಯಿ ಎಂದು ಗುಜರಾತ್‌ನಲ್ಲಿ ಕರೆಯುತ್ತೇನೆ. ತುಳಸಿ ಸಸ್ಯವನ್ನು ಈ ಆಧುನಿಕ ತಲೆಮಾರು ಮರೆಯುತ್ತಿದೆ. ಹಲವಾರು ತಲೆಮಾರುಗಳಿಂದ ತುಳಸಿ ಗಿಡವನ್ನು ಪೂಜಿಸಿದ್ದೇವೆ. ಇದನ್ನು ಮದುವೆಯಲ್ಲೂ ಬಳಸುತ್ತೇವೆ. ಹಾಗಾಗಿ ನೀವು ನಮ್ಮೊಂದಿಗಿದ್ದೀರಿ ಎಂದು ಹೇಳಿದರು.
ಚಿಕಿತ್ಸೆಗೆ ಭಾರತಕ್ಕೆ ಬರುವವರಿಗಾಗಿ ಆಯುಷ್ ವೀಸಾ!
ಸಾಂಪ್ರದಾಯಿಕ ಔಷಧಗಳ ಬಗ್ಗೆ ಅಧ್ಯಯನ ಮತ್ತು ಚಿಕಿತ್ಸೆ ಪಡೆಯುವುದಕ್ಕೆ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳಿಗಾಗಿ ಭಾರತವು ಶೀಘ್ರವೇ ವಿಶೇಷ ಆಯುಷ್ ವೀಸಾ ವರ್ಗವನ್ನು ಪರಿಚಯಿಸಲಿದೆ ಎಂದು ಪ್ರಧಾನಿ ಮೋದಿ ಬುಧವಾರ ಹೇಳಿದ್ದಾರೆ. ಜಾಗತಿಕ ಆಯುಷ್ ಹೂಡಿಕೆ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಆಯುಷ್ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಆವಿಷ್ಕಾರದ ಸಾಧ್ಯತೆಗಳು ಅಪರಿಮಿತವಾಗಿವೆ.
ನಾವು ಈಗಾಗಲೇ ಆಯುಷ್ ಔಷಧಿಗಳು, ಪೂರಕ ವಸ್ತುಗಳು ಮತ್ತು ಸೌಂಧರ್ಯವರ್ಧಕಗಳಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿದ್ದೇವೆ. ಸಾಂಪ್ರದಾಯಿಕ ಔಷಧವು ಕೇರಳದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಿದೆ. ಭಾರತದ ಪ್ರತಿ ಮೂಲೆಯಲ್ಲಿ ಆಯುರ್ವೇದದ ಶಕ್ತಿ ಇದೆ. ಹಾಗಾಗಿ ಇದು ಈ ದಶಕದ ದೊಡ್ಡ ಬ್ರಾಂಡ್ ಆಗಲಿದೆ ಎಂದು ಅವರು ಹೇಳಿದರು.