ಗುಮ್ಮಟ ನಗರಿಯಲ್ಲಿ ತಿರಂಗಾ ರಂಗು: ಎತ್ತೆತ್ತ ನೋಡಿದರೆತ್ತ ತ್ರಿವರ್ಣ ಧ್ವಜದ ಹಾರಾಟ

By Govindaraj S  |  First Published Aug 15, 2022, 12:28 AM IST

ನಸುಕಿನಲ್ಲಿ ಸೂರ್ಯರಶ್ಮಿಯ ಕಿರಣಗಳು ಭೂಮಿಗೆ ತಾಕುವ ಸಮಯದಲ್ಲಿ ಎಲ್ಲೆಡೆ ತ್ರಿವರ್ಣ ಧ್ವಜಗಳು ಮನೆ-ಮನೆಯಲ್ಲಿ ಅರಳಿದವು. ಬೆಳಿಗ್ಗೆಯಿಂದಲೇ ಉತ್ಸಾಹದಿಂದ ವಿಜಯಪುರ ನಗರದ ಜನತೆ ತಮ್ಮ ಮನೆಯ ಮಾಳಿಗೆಯ ಮೇಲೆ ಅತ್ಯಂತ ಶ್ರದ್ಧೆ-ಗೌರವದಿಂದ ರಾಷ್ಟ್ರಧ್ವಜ ಅರಳಿಸಿ ದೇಶಾಭಿಮಾನ ಮೆರೆದರು.


ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.15): ನಸುಕಿನಲ್ಲಿ ಸೂರ್ಯರಶ್ಮಿಯ ಕಿರಣಗಳು ಭೂಮಿಗೆ ತಾಕುವ ಸಮಯದಲ್ಲಿ ಎಲ್ಲೆಡೆ ತ್ರಿವರ್ಣ ಧ್ವಜಗಳು ಮನೆ-ಮನೆಯಲ್ಲಿ ಅರಳಿದವು. ಬೆಳಿಗ್ಗೆಯಿಂದಲೇ ಉತ್ಸಾಹದಿಂದ ವಿಜಯಪುರ ನಗರದ ಜನತೆ ತಮ್ಮ ಮನೆಯ ಮಾಳಿಗೆಯ ಮೇಲೆ ಅತ್ಯಂತ ಶ್ರದ್ಧೆ-ಗೌರವದಿಂದ ರಾಷ್ಟ್ರಧ್ವಜ ಅರಳಿಸಿ ದೇಶಾಭಿಮಾನ ಮೆರೆದರು. ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಲಾಗಿತ್ತು. ಈ ಅಭಿಯಾನಕ್ಕೆ ವಿಜಯಪುರ ಜಿಲ್ಲೆಯಾದ್ಯಂತ ವ್ಯಾಪಕ ಸ್ಪಂದನೆ ದೊರಕಿತು. 

Latest Videos

undefined

ಇಂಚಗೇರಿ ಮಠದ ಶಿಖರದ ಮೇಲು ತ್ರಿವರ್ಣ ಧ್ವಜ ಹಾರಾಟ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮೂಲ ಮಠದ ಶಿಖರದ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು. ಬಂದೂಕಿನ ಕಾರ್ಖಾನೆ ತೆರೆದು ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರವಾಗಿ ಮಠದ ಭಕ್ತರನ್ನ ಸೇರಿಸಿಕೊಂಡು ಹೋರಾಟ ನಡೆಸಿದ್ದರು.‌ ಸ್ವಾತಂತ್ರ್ಯ ಹೋರಾಟ ಹಿನ್ನೆಲೆ ಇರುವ ಇಂಚಗೇರಿ ಮಠದ ಮೇಲು ರಾಷ್ಟ್ರಧ್ವಜ ಹಾರಿಸಲಾಗಿದೆ. ಅಷ್ಟೆ ಅಲ್ಲದೆ ಬೆಳಗಾವಿ, ಬಾಗಲಕೋಟೆ, ಕಲಬುರ್ಗಿ, ಧಾರವಾಡ ಜಿಲ್ಲೆಗಳಲ್ಲಿರುವ ಇಂಚಗೇರಿ ಮಠದ ಶಾಖಾ‌ ಮಠಗಳ ಮೇಲು ತ್ರಿವರ್ಣ ಧ್ವಜ ಹಾರಿಸಲಾಗಿದೆ.

ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವೂ ದೊಡ್ಡದಲ್ಲ:  ಬಸನಗೌಡ ಪಾಟೀಲ ಯತ್ನಾಳ

ಇಂಚಗೇರಿ ಶಾಖಾ ಮಠಗಳಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಶಾಖಾ ಮಠಗಳನ್ನ ಹೊಂದಿರುವ ಇಂಚಗೇರಿ ಮಠಗಳಲ್ಲಿ ಸ್ವಾತಂತ್ರ್ಯ‌ ದಿನಾಚರಣೆಗೆ ಸಿದ್ದತೆಗಳು ನಡೆಯುತ್ತಿವೆ. ಆಗಸ್ಟ್‌ 15ರ ಬೆಳಿಗ್ಗೆ ಇಂಚಗೇರಿ ಮಠದಲ್ಲು ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಇಂಚಗೇರಿ ಮಠದ ಭಕ್ತರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ದೇಶಪ್ರೇಮ ಉಕ್ಕೆರುವಂತೆ ಮಾಡಿದೆ..

ವಿಶ್ವ ವಿಖ್ಯಾತ ಗೋಳಗುಮ್ಮಟಕ್ಕೆ ತ್ರಿವರ್ಣ ಸಿಂಗಾರ: ಇನ್ನು ವಿಶ್ವ ವಿಖ್ಯಾತ ಗೋಳಗುಮ್ಮಟಕ್ಕೆ ತ್ರಿವರ್ಣ ದೀಪಾಲಂಕಾರದ ಮೂಲಕ ಸಿಂಗರಿಸಲಾಗಿದೆ. ಇಡೀ ಗೋಳಗುಮ್ಮಟ ತ್ರಿವರ್ಣಗಳಿಂದ ಕಂಗೊಳಿಸುತ್ತಿದೆ. ಜನರು ಗೋಳಗುಮ್ಮಟ ಸಿಂಗಾರ ಕಣ್ತುಂಬಿಕೊಳ್ಳಲು ಮುಗಿ ಬೀಳ್ತಿದ್ದಾರೆ.

ಆಲಮಟ್ಟಿ ಆಣೆಕಟ್ಟಿಗು ತ್ರಿವರ್ಣ ಅಲಂಕಾರ: ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟಿಗು ತ್ರಿವರ್ಣ ದೀಪಾಲಂಕಾರ ಮಾಡಲಾಗಿದೆ. 24 ಕ್ರಸ್ಟ್ ಗೇಟ್‌ಗಳು ಓಪನ್ ಮಾಡಲಾಗಿದ್ದು, ಧುಮ್ಮಿಕ್ಕುತ್ತಿರುವ ನೀರಿನ ಮೇಲೆ ಕೇಸರಿ, ಬಿಳಿ, ಹಸಿರು ಬಣ್ಣಗಳು ಕಂಗೊಳಿಸುತ್ತಿವೆ. 

ಜಿಲ್ಲೆಯ ಮನೆ-ಮನೆಗಳ ಮೇಲು ರಾಷ್ಟ್ರಧ್ವಜ ಹಾರಾಟ: ಪ್ರತಿಯೊಬ್ಬರು ಅಭಿಮಾನದಿಂದ ಮನೆಯ ಮಾಳಿಗೆಯ ಮೇಲೆ ತೆರಳಿ ಸೂರ್ಯ ಉದಯವಾಗುವ ಕ್ಷಣದಲ್ಲಿ ಕುಟುಂಬ ಸದಸ್ಯರೊಂದಿಗೆ ತ್ರಿವರ್ಣ ಧ್ವಜ ಅರಳಿಸಿದರು. ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಿ ಜನಗಣಮನ.... ರಾಷ್ಟ್ರ  ಗೀತೆಯನ್ನು ಹಾಡಿದರು. ಭಾರತ ಮಾತಾ ಕೀ ಜೈ ಹೋ.... ಭಾರತ ಮಾತಾ ಕೀ ಜೈ ಹೋ.... ಎಂಬ ಘೋಷಣೆಗಳನ್ನು ಮೊಳಗಿಸಿದರು.

ರಾಷ್ಟ್ರಧ್ವಜದ ಜೊತೆಗೆ ಸೆಲ್ಪಿ ಕ್ರೇಜ್: ಅನೇಕರು ರಾಷ್ಟ್ರ ಧ್ವಜದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ತೋಡಿಕೊಂಡರು. ಸ್ವಾತಂತ್ರ್ಯಕ್ಕೆ 75ನೇ ವಸಂತ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಗುಮ್ಮಟ ನಗರಿಯಲ್ಲಿ ದೇಶಭಕ್ತಿಯ ರಂಗು ಎಲ್ಲೆಡೆ ಮೊಳಗುತ್ತಿದೆ, ಮನೆ-ಮನೆಯಲ್ಲಿ ತ್ರಿವರ್ಣ ಧ್ವಜ ಹಾರಾಟ ಎಲ್ಲೆಡೆ ಕಂಡು ಬರುತ್ತಿದ್ದರೆ, ವಾಹನಗಳ ಮೇಲೆಯೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. 

12 ಬೇಡಿಕೆಗಳ ತನಿಖೆಗಾಗಿ ಹೋರಾಟ: ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಆಟೋ, ಕಾರ್, ಬೈಕ್‌ಗಳಲ್ಲೂ ತಿರಂಗ ಮೆರಗು: ಅನೇಕರು ತಮ್ಮ ಆಟೋ, ಕಾರ್, ಬೈಕ್‌ಗಳ ಮೇಲೆ ನಿಯಮಾವಳಿ ಅನ್ವಯ ಸರಿಹೊಂದುವ ರಾಷ್ಟ್ರ ಧ್ವಜವನ್ನು ಅಳವಡಿಸಿಕೊಂಡು ಅಭಿಮಾನ ಪ್ರದರ್ಶಿಸುತ್ತಿರುವ ದೃಶ್ಯ ಎಲ್ಲೆಡೆ ಗೋಚರಿಸುತ್ತಿದೆ, ಒಂದು ರೀತಿ ವಿಜಯಪುರಕ್ಕೆ ಸಂಚರಿಸಿದಾಗ ಎಲ್ಲೆಡೆ ತ್ರಿವರ್ಣ ಧ್ವಜ ಕಾಣಿಸಿಗುತ್ತಿದೆ. ಅದೇ ತೆರನಾಗಿ ಎಲ್ಲ ಸರ್ಕಾರಿ ಶಾಲೆ, ಕಾಲೇಜು, ಖಾಸಗಿ ಶಿಕ್ಷಣ ಸಂಸ್ಥೆ, ವಿವಿಧ ಸೇವಾ ಸಂಸ್ಥೆಗಳು ಸಹ ತಮ್ಮ ಕಾರ್ಯಾಲಯದಲ್ಲಿ ರಾಷ್ಟ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಪ್ರಭಾತಪೇರಿ ನಡೆಸಿ ಅಭಿಯಾನದ ಜಾಗೃತಿ ಮೂಡಿಸಿದರು.

click me!