INDIA@75 : ಗೋಕಾಕನಲ್ಲಿ ಬೃಹತ್‌ ತಿರಂಗಾ ಯಾತ್ರೆ!

By Kannadaprabha NewsFirst Published Aug 13, 2022, 10:30 AM IST
Highlights

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಬೃಹತ್‌ ತಿರಂಗಾ ಯಾತ್ರೆಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗೀಯ ಸಂಘ ಸಂಚಾಲಕ ಎಂ.ಡಿ. ಚುನಮರಿ ಚಾಲನೆ ನೀಡಿದರು.

ಗೋಕಾಕ (ಆ.13): 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಇಲ್ಲಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಹಾಗೂ ಶೂನ್ಯ ಸಂಪಾದನ ಮಠ ಇವುಗಳ ಸಂಯುಕ್ತಾಶ್ರಯದಲ್ಲಿ ಹರ್‌ಘರ್‌ ತಿರಂಗಾ ಅಭಿಯಾನವನ್ನು ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

India@75: ಇಂಕ್ವಿಲಾಬ್ ಝಿಂದಾಬಾದ್‌ ಘೋಷಣೆಯ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾದ ಹಸ್ರತ್ ಮೊಹಾನಿ

ಬೃಹತ್‌ ತಿರಂಗಾ ಯಾತ್ರೆಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ(RSS)ದ ವಿಭಾಗೀಯ ಸಂಘ ಸಂಚಾಲಕ ಎಂ.ಡಿ. ಚುನಮರಿ(M.D.Chunamari) ಚಾಲನೆ ನೀಡಿದರು. ನಗರದ ಚನ್ನಬಸವೇಶ್ವರ ವಿದ್ಯಾಪೀಠ(Channabasaveshwar Vidyapeeta)ದಿಂದ ಆರಂಭಗೊಂಡ ಬೃಹತ್‌ ತಿರಂಗಾ ಅಭಿಯಾನ(Tiranga Abhiyan) ಹನುಮಂತ ದೇವರ ಗುಡಿ ಮಾರ್ಗವಾಗಿ ಭಾಪನಾ ಕೂಟ್‌, ಶೆಟ್ಟಿಕೂಟ್‌, ಅಪ್ಸರಾ ಕೂಟ್‌, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತದವರೆಗೂ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಭಾರತ್‌ ಮಾತಾ ಕೀ ಜೈ ಎನ್ನುವ ಜಯಘೋಷ ಕೂಗಿ ತಿರಂಗಾ ಯಾತ್ರೆ ಮೆರಗು ಹೆಚ್ಚಿಸಿದರು.

ಇದೇ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರು, ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಗಡಿಕಾಯುವ ಯೋಧರನ್ನು ನಾವು ನಿತ್ಯ ಸ್ಮರಣೆ ಮಾಡಬೇಕು ಎಂದು ಮುರುಘರಾಜೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದಂತೆ ಆ. 13ರಿಂದ 15ರವರೆಗೆ ಪ್ರತಿಮನೆಯಲ್ಲಿ ತಿರಂಗಾ ಧ್ವಜ ಹಾರಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.

India@75: ಕ್ರಾಂತಿವೀರ ರಾಯಣ್ಣ ಸೆರೆಯಾದ ಸ್ಥಳ ಧಾರವಾಡದ ಡೋರಿ ಹಳ್ಳ

ತಿರಂಗಾಯಾತ್ರೆಯಲ್ಲಿ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಬಿಇಒ ಜಿ.ಬಿ. ಬಳಗಾರ, ಪೌರಾಯುಕ್ತ ಶಿವಾನಂದ ಹಿರೇಮಠ, ಲಕ್ಷ್ಮೀ ಎಜುಕೇಶನ್‌ ಟ್ರಸ್ಟ್‌ನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ, ಎಬಿವಿಪಿ ಮುಖಂಡ ಪ್ರಕಾಶ, ಎಂ.ವೈ. ಹಾರುಗೇರಿ, ನಾರಾಯಣ ಮಠಾಧಿಕಾರಿ, ಜಯಾನಂದ ಮುನ್ನವಳ್ಳಿ, ಸದಾಶಿವ ಗುದಗಗೋಳ, ಮಹಾಂತೇಶ ತಾವಂಶಿ, ಭೀಮಶಿ ಭರಮನ್ನವರ, ಬಸವರಾಜ ಖಾನಪ್ಪನವರ, ಮಲ್ಲಿಕಾರ್ಜುನ ಈಟಿ, ಸಾಧೀಕ ಹಲ್ಯಾಳ, ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

click me!