ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಯೋಧ ಸಾವು

By Ravi Nayak  |  First Published Aug 15, 2022, 12:51 PM IST

ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಯೋಧ ಸಾವು. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟನೆ. ತೀವ್ರ ಹೃದಯಾಘಾತದಿಂದ ಸಾವು.


ಮಂಗಳೂರು (ಆ.15): ದೇಶಾದ್ಯಂತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸ ಆಚರಿಸುತ್ತಿದೆ. ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ  ದುರಂತವೊಂದು ಸಂಭವಿಸಿದೆ. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜ ವಂದನೆ ಸಲ್ಲಿಸುತ್ತಿದ್ದಂತೆ  ನಿವೃತ್ತ ಯೋಧರೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ

Tap to resize

Latest Videos

undefined

ಇಂದು ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ನಿವೃತ್ತ ಯೋಧ ಗಂಗಾಧರ ಗೌಡ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಬರುವ ಮೊದಲು ಆರೋಗ್ಯವಾಗಿ ಇದ್ದರು. ಎಲ್ಲರೊಂದಿಗೆ ಸಂಭಮದಿಂದ ಮಾತನಾಡಿದ್ದರು. ಆದರೆ ಕಾರ್ಯಕ್ರಮದಲ್ಲಿಉ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹಲವು ವರ್ಷಗಳ ದೇಶ ಸೇವೆ ಸಲ್ಲಿಸಿರುವ ಗಂಗಾಧರ ಗೌಡರ ಸ್ಥಳೀಯರಿಂದ ಅಪಾರ ಗೌರವದಿಂದ ಕಾಣುತ್ತಿದ್ದರು.

ದುರ್ದೈವ ಇಂದು  ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆ ಸ್ಷೇಷನ್ ಅಮೃತ ಸರೋವರ ಬಳಿ ನಡೆದ  ಧ್ವಜಾರೋಹಣ ಕಾರ್ಯಕ್ರಮ. ದ್ವಜಾರೋಹಣ ವೇಳೆ ಧ್ವಜ ವಂದನೆಯ ಮಾಹಿತಿ ನೀಡುತ್ತಿದ್ದರು.ಈ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾದ ಮಾಜಿ ಸೈನಿಕ. ತಕ್ಷಣ ಆಸ್ಪತ್ರಗೆ ರವಾನಿಸಿದ್ರೂ ಮಾರ್ಗ ಮಧ್ಯೆ ಮಾಜಿ ಸೈನಿಕ ಸಾವು.

click me!