ಉಡುಪಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಗೆಲುವು ಮುಟ್ಟಿದೆ. ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ, ಎಲ್ಲೆಡೆ ತ್ರಿವರ್ಣ ಧ್ವಜಗಳಿಂದ ಅಲಂಕೃತಗೊಂಡಿದೆ
ಉಡುಪಿ (ಆ.14): ಉಡುಪಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಗೆಲುವು ಮುಟ್ಟಿದೆ. ನಾನಾ ರೀತಿಗಳಲ್ಲಿ ನಾನಾ ರೂಪಗಳಲ್ಲಿ ಜನರು ರಾಷ್ಟ್ರೀಯ ಹಬ್ಬಗಳನ್ನು ಮೂರು ದಿನಗಳ ಕಾಲ ಆಚರಿಸುತ್ತಿದ್ದಾರೆ. ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಹಲವಡೆ ವಿಭಿನ್ನ ರೀತಿಯಲ್ಲಿ ತ್ರಿವರ್ಣವನ್ನು ಸಂಭ್ರಮಿಸಲಾಗುತ್ತಿದೆ.
ಮಂಗಳೂರಿನಲ್ಲಿ ದಾಖಲೆ ಬರೆದ 900 ಕೆ.ಜಿ ತೂಕದ ತಿರಂಗ!
undefined
ಮೂರು ಬಣ್ಣಗಳಲ್ಲಿ ಕಂಗೊಳಿಸಿತು ಕನಕಗೋಪುರ: ದಕ್ಷಿಣ ಭಾರತದ ಪ್ರಸಿದ್ಧ ವೈಷ್ಣವ ಕ್ಷೇತ್ರ ಉಡುಪಿಯ ಶ್ರೀ ಕೃಷ್ಣ ಮಠ(Udupi Shri Krishna Mutt)ದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕನಕದಾಸರಿಗೆ ಶ್ರೀ ಕೃಷ್ಣದೇವರು ದರ್ಶನ ನೀಡಿದ ಕನಕನ ಕಿಂಡಿಯ ಮೇಲಿನ ಗೋಪುರ ತ್ರಿವರ್ಣಗಳ ಮೂಲಕ ಭಾರತ ದರ್ಶನ ಮಾಡಿಸುತ್ತಿದೆ. ರಥಬೀದಿಗೆ ಪ್ರದಕ್ಷಿಣೆ ಬರುವ ಜಾಗದಲ್ಲಿ ಕನಕ ಗೋಪುರವಿದ್ದು , ಎಸ್ ಕೆ ಪಿ ಎ ತಂಡದವರು ಗೋಪುರದ ಮೇಲೆ ತ್ರಿವರ್ಣದ ಬೆಳಕು ಹರಿಯ ಬಿಟ್ಟಿದ್ದಾರೆ. ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ದೇವರು ಕನಕದಾಸರಿಗೆ ದರ್ಶನ ನೀಡಿದ ಐತಿಹಾಸಿಕ ಮಹತ್ವದ ಈ ಸ್ಥಳದಲ್ಲಿ ದೇಶಪ್ರೇಮದ ಸೊಬಗು ಮೇಳೈಸಿದೆ.
ಕೃಷ್ಣ ಜನ್ಮಾಷ್ಟಮಿ ಆಚರಣೆ(Krishna Janmashtami)ಗಳ ಪ್ರಯುಕ್ತ, ಸಾವಿರಾರು ಜನರು ಅಷ್ಟಮಠಗಳ ರಥಬೀದಿಗೆ ಭೇಟಿ ನೀಡುತ್ತಿದ್ದು, ಈ ತ್ರಿವರ್ಣ ಸಂಭ್ರಮ ಎಲ್ಲರ ಗಮನ ಸೆಳೆಯುತ್ತಿದೆ.ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಈ ತ್ರಿವರ್ಣ ಸಂಭ್ರಮಕ್ಕೆ ಚಾಲನೆ ನೀಡಿದರು. ಕೃಷ್ಣಮಠದ ರಥ ಬೀದಿಯ ಸುತ್ತಲೂ ಇರುವ, ಅಷ್ಟ ಮಠಗಳಲ್ಲೂ ತ್ರಿವರ್ಣ ಧ್ವಜ ರಾರಾಜಿದುತ್ತಿದೆ.
Har Ghar Tiranga: ಏಕಾಂಗಿ ವೃದ್ಧನಿಗೆ ಮನೆ ನಿರ್ಮಿಸಿ ಕೊಟ್ಟ ANF ಸಿಬ್ಬಂದಿ
ಶಾಲೆಯಲ್ಲಿ ತ್ರಿವರ್ಣ ಸಮವಸ್ತ್ರ ಸಂಭ್ರಮ: ಸ್ವಾತಂತ್ರ್ಯ ಸಂಭ್ರಮಾಚರಣೆ ಅಮೃತ ಮಹೋತ್ಸವದ ಪ್ರಯುಕ್ತ ಉಡುಪಿ ಜಿಲ್ಲೆ, ಬೈಂದೂರು ವಲಯದ ಉಪ್ಪುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆ ನಡೆಸಲು ಆರಂಭಿಸಲಾಯಿತು. ಹರ್ ಘರ್ ತಿರಂಗಾ(Har Ghar Tiranga) ಎಂಬ ಪರಿಕಲ್ಪನೆಯನ್ನು ಶಾಲೆಯಲ್ಲಿ ಈ ದಿನ ಸುಮಾರು 570 ವಿದ್ಯಾರ್ಥಿಗಳು ವಿವಿಧ ಬಣ್ಣಗಳ ಸಮವಸ್ತ್ರ ಧರಿಸುವಂತೆ ಮಾಡಿ ಅಮೃತ ಮಹೋತ್ಸವದ ಸೂಚಕವಾಗಿ 75 ಎಂಬ ವಿಶಿಷ್ಟ ರೀತಿಯ ವಿನ್ಯಾಸದ ಜೋಡಣೆ ಮಾಡಲಾಯಿತು ಮತ್ತು ನೀಲಿ ಬಣ್ಣದ ಅಶೋಕ ಚಕ್ರ ತಿರುಗುವುದರೊಂದಿಗೆ ತ್ರಿವರ್ಣ ಧ್ವಜ ಹಾರಾಡುವ ರೀತಿಯಲ್ಲಿ ವಿದ್ಯಾರ್ಥಿಗಳ ಚಲನೆಯನ್ನು ನಡೆಸಿ ಸಂಭ್ರಮಿಸಲಾಯಿತು.
ಕಡಲತಡಿಯಲ್ಲಿ ಮರಳು ಶಿಲ್ಪ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಹರ್ ಘರ್ ತಿರಂಗಾ ಸಂಭ್ರಮವನ್ನು ಕರಾವಳಿಯ ಕಲಾವಿದರು ಕೂಡ ಆಚರಿಸುತ್ತಿದ್ದಾರೆ. ಜಿಲ್ಲಾಧಿಕಾರಿಯವರ ಕರೆಯಂತೆ ಮನೆ ಮನೆಗಳಲ್ಲಿ ತ್ರಿವರ್ಣ ದ್ವಜದ ಆಚರಣೆಯ ಸಂಭ್ರಮದ ಸಲುವಾಗಿ "ಸ್ಯಾಂಡ್ ಥೀo" ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್. ರವರಿಂದ ಮಲ್ಪೆ ಕಡಲ ಕಿನಾರೆಯಲ್ಲಿ ರಚಿಸಲ್ಪಟ್ಟ "ವಂದೇ ಮಾತರಂ" ದ್ಯೇಯದ ಮರಳು ಶಿಲ್ಪಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಮರಳಿನ ಕಣ ಕಣಗಳನ್ನು ಜೋಡಿಸಿ, ಮಾಡೊರುವ ಈ ಕಲಾಕೃತಿಯಲ್ಲಿ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರೈಸುವ ಚಿತ್ರಣವಿದೆ. ವಂದೇ ಮಾತರಂ ಸಂದೇಶದೊಂದಿಗೆ ಕಡಲ ತೀರಕ್ಕೆ ಬರುವ ಪ್ರವಾಸಿಗರನ್ನು ಈ ಸುಂದರ ಕಲಾಕೃತಿ ಗಮನ ಸೆಳೆಯುತ್ತಿದೆ.