ನಾಲ್ವರು ಸಹೋದರಿಯರು, ತಾಯಿಯ ಹತ್ಯೆಗೈದು ವಿಡಿಯೋ ಮಾಡಿದ ಯುವಕ ಸೆರೆ!

By Chethan Kumar  |  First Published Jan 1, 2025, 6:29 PM IST

ಮದ್ಯ, ಅಮಲು ಪದಾರ್ಥವನ್ನು ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರಿಗೆ ನೀಡಿ ಕತ್ತು ಹಿಸುಕಿ ಹಾಗೂ ಭೀಕರವಾಗಿ ಹತ್ಯೆಗೈದ ಘಟನೆ ನಡೆದಿದೆ. ಈ ಹತ್ಯೆಯನ್ನು ವಿಡಿಯೋ ಮಾಡಿ ಖುದ್ದು ಹರಿಬಿಟ್ಟ ಸೈಕೋ ದುರುಳನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಲಖನೌ(ಜ.01) ಹೊಸ ವರ್ಷ ಎಲ್ಲಾ ಸಂಕಷ್ಟಗಳು ದೂರವಾಗಿ ಹೊಸ ಹುರುಪು, ಹೊಸ ಬದುಕು ತರಲಿ ಎಂದು ಪ್ರಾರ್ಥಿಸುತ್ತಿದ್ದ ಕುಟುಂಬ ರಾತ್ರಿ ಬೆಳಗಾಗುವಷ್ಟರಲ್ಲಿ ಹೆಣವಾಗಿದೆ. ಯುವಕನೊಬ್ಬ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರಿಗೆ ಅವರಿಗೆ ಗೊತ್ತಿಲ್ಲದಂತೆ ಅಮಲು ಆಹಾರ ನೀಡಿ ಹತ್ಯೆಗೈದ ಭೀಕರ ಘಟನೆ ಉತ್ತರ ಪ್ರದೇಶದ ಲಖೌನದಲ್ಲಿ ನಡೆದಿದೆ. ಖಾಸಗಿ ಹೊಟೆಲ್‌ನಲ್ಲಿ ತನ್ನದೇ ಕುಟುಂಬವನ್ನು ಹತ್ಯೆ ಮಾಡಿದ್ದಾನೆ. ಈ ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿದ್ದಾನೆ. ಈ ಘಟನೆ ಸಂಬಂಧ 24 ವರ್ಷ ಅರ್ಷದ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ತಾಯಿ ಹಾಗೂ ನಾಲ್ವರು ಸಹೋದರಿಯ ಹತ್ಯಾ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೆಂತಾ ಘಟನೆ ಎಂದು ಜನ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದರು. ಕಾರಣ ಅತ್ಯಂತ ಭೀಕರವಾಗಿ ಈ ಹತ್ಯೆ ನಡೆದಿತ್ತು. ಈ ಹತ್ಯೆಗೆ ಈತ ನೀಡಿದ ಕಾರಣಗಳು ಹೋಲಿಕೆಯಾಗುತ್ತಿಲ್ಲ. ಆದರೆ ಪೊಲೀಸ್ ತನಿಖೆ ಆರಂಭಗೊಂಡಿದೆ.ತನ್ನ ನೆರೆಹೊರೆಯವರು, ಸ್ಥಳೀಯ ಮುಸ್ಲಿಮರು ಕಿರುಕುಳದಿಂದ ಈ ರೀತಿ ಮಾಡಿದ್ದೇನೆ ಎಂದು ಅರ್ಷದ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. 

Tap to resize

Latest Videos

ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

ತನ್ನ ಸಹೋದರಿಯನ್ನು ಹೈದರಾಬಾದ್‌ಗೆ ಮಾರಾಟ ಮಾಡಲು ಮುಂದಾಗಿದ್ದರು. ನಮ್ಮ ಜಮೀನಿನ ಮೇಲೆ ಹಲವು ಸ್ಥಳೀಯ ಮುಸ್ಲಿಮರು ಕಣ್ಣಿಟ್ಟಿದ್ದರು. ಇದರಿಂದ ಪ್ರತಿ ದಿನ ಕಿರುಕುಳ ಎದುರಿಸುವಂತಾಗಿತ್ತು. ಈ ಎಲ್ಲಾ ಸಮಸ್ಯೆಗೆ ಮುಕ್ತಿ ಹಾಡಲು  ಈ ಕೃತ್ಯ ಎಸಗಿರುವುದಾಗಿ ಅರ್ಷದ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಪೊಲೀಸರಿಗೆ ಈತನ ಹೇಳಿಕೆ ಹಾಗೂ ಕೃತ್ಯಕ್ಕೆ ಹೋಲಿಕೆ ಸಿಗುತ್ತಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಅಗ್ರಾ ನಿವಾಸಿಯಾಗಿರುವ ಅರ್ಷದ್ ತನ್ನ ಕುಟುಂಬವನ್ನೇ ಹತ್ಯೆಗೈದಿದ್ದಾನೆ. ಈ ಕೃತ್ಯದಲ್ಲಿ ಅರ್ಷದ್ ತಂದೆ ಬದರ್ ಕೂಡ ಭಾಗಿಯಾಗಿರುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಬದರ್ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹೀಗಾಗಿ ಇದು ನೆರೆಹೊರೆಯವರ ಕಿರುಕುಳ, ಜಮೀನು ವಿವಾದಕ್ಕೆ ಸೀಮಿತವಾಗಿಲ್ಲ ಅನ್ನೋ ಅನುಮಾನ ಪೊಲೀಸರನ್ನು ಬಲವಾಗಿ ಕಾಡುತ್ತಿದೆ. ಈತ ವಿಡಿಯೋದಲ್ಲಿ ಹಲವು ವಿಚಾರ ಹೇಳಿಕೊಂಡಿದ್ದಾನೆ. ಆಗ್ರಾದಲ್ಲಿರುವ ತಮ್ಮ ಆಸ್ತಿಯ ಮೇಲೆ ನೆರೆಹೊರೆಯವರು ಕಣ್ಣಿಟ್ಟಿದ್ದು, ತಂಗಿಯರನ್ನು ಹೈದರಾಬಾದ್‌ಗೆ ಮಾರಲು ಸಂಚು ರೂಪಿಸಿದ್ದರು. ಇದರಿಂದ ನೊಂದು ಅವರನ್ನೆಲ್ಲಾ ಕೊಂದೆ’ ಎಂದು ಹೇಳಿದ್ದಾನೆ. ನನ್ನ ಜಮೀನು ಕಬಳಿಸಲು ಹಲವರು ಸಂಚು ರೂಪಿಸಿದ್ದರು. ಹೀಗಾಗಿ ನಾವು ಹಿಂದೂ ಧರ್ಮಕ್ಕೆ ಮತಾಂತರವಾಗಿ, ಮನೆ ಜಾಗದಲ್ಲಿ ದೇಗುಲ ನಿರ್ಮಿಸಲು ಉದ್ದೇಶಿಸಿದ್ದೆವು ಎಂದು ಅರ್ಷದ್‌ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಅರ್ಷದ್ ಕೃತ್ಯಕ್ಕೆ ಅಮಾಯಕ ಐದು ಜೀವಗಳು ಬಲಿಯಾಗಿದೆ. ತಾಯಿ  ಆಸ್ಮಾ, ಸಹೋದರಿಯರಾದ ಆಲಿಯಾ (9), ಅಲಿಶಾ (19), ಅಕ್ಸಾ (16), ರಹಮೀನ್‌ (18) ಮೃತ ದುರ್ದೈವಿಗಳು. ಅರ್ಷದ್ ಬಂಧಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಕೆಲ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ. ಇದೀಗ ಪೊಲೀಸರ ಒಂದು ತಂಡ ಅರ್ಷದ್ ಆಗ್ರಾ ನಿವಾಸಕ್ಕೆ ತೆರಳಿದೆ. ಇಲ್ಲಿ ನಿಜಕ್ಕೂ ಜಮೀನು ವ್ಯಾಜ್ಯ ನಡೆದಿತ್ತಾ? ಸ್ಛಳೀಯ ಮುಸ್ಲಿಮರು ಕಿರುಕುಳ ನೀಡಿದ್ದರೇ? ಅನ್ನೋದು ಪರಿಶೀಲಿಸಲು ಮುಂದಾಗಿದ್ದಾರೆ. 

ಈ ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅರ್ಶದ್ ಕೃತ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ನೆರೆಹೊರೆಯವ ಕಿರುಕುಳ ಕುರಿತು ದೂರು ನೀಡಬೇಕಿತ್ತು. ಕುಟುಂಬವನ್ನು ರಕ್ಷಿಸಿಕೊಳ್ಳುವ ಬದಲು ಕುಟಂಬವನ್ನೇ ನಿರ್ನಾಮ ಮಾಡಿರುವುದು ಎಷ್ಟು ಸರಿ? ಇದು ಯಾವ ರೀತಿಯ ನ್ಯಾಯ ಎಂದು ಹಲವರು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕೃತ್ಯಕ್ಕೆ ಭಾರಿ ಖಂಡನೆ ವ್ಯಕ್ತವಾಗುತ್ತಿದೆ.

ಮೂರನೇ ಹೆಣ್ಣು ಮಗು ಹುಟ್ಟಿದ್ದಕ್ಕೆ ಪೆಟ್ರೋಲ್ ಸುರಿದ ಪತ್ನಿಗೆ ಬೆಂಕಿ ಇಟ್ಟ ಗಂಡ

click me!