ಹೊಸ ಜೆರ್ಸಿಗೆ ಕೊಹ್ಲಿ ನೀಡಿದ ಮಾರ್ಕ್ ಇದು...!

By Web DeskFirst Published Jun 29, 2019, 4:41 PM IST
Highlights

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಈ ಜೆರ್ಸಿಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ತುಟಿಬಿಚ್ಚಿದ್ದಾರೆ. ಅಷ್ಟಕ್ಕೂ ಕೊಹ್ಲಿ ಏನಂದ್ರು ಅನ್ನೋದನ್ನು ನೀವೊಮ್ಮೆ ನೋಡಿಬಿಡಿ...

ವಿಶ್ವಕಪ್ ಪಂದ್ಯದ ಪ್ರತಿಕ್ಷಣದ ಸ್ಕೋರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

ಬರ್ಮಿಂಗ್’ಹ್ಯಾಮ್[ಜೂ.29]: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದು, ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಜೆರ್ಸಿ ಬಗ್ಗೆ ತುಟಿ ಬಿಚ್ಚಿದ್ದಾರೆ.

Here’s the skipper with the new Orange! pic.twitter.com/dZxodt4Ljw

— Vikrant Gupta (@vikrantgupta73)

ವಿರೋಧದ ನಡುವೆ ಟೀಂ ಇಂಡಿಯಾ ಕೇಸರಿ ಜರ್ನಿ ಅನಾವರಣ!

ಜೆರ್ಸಿ ನನಗೆ ನಿಜಕ್ಕೂ ತುಂಬಾನೆ ಇಷ್ಟವಾಯಿತು. ನೋಡುವುದಕ್ಕೂ ಸುಂದರವಾಗಿದೆ. ನಾನು ಈ ಜೆರ್ಸಿಗೆ 10ಕ್ಕೆ 8 ಅಂಕ ನೀಡುತ್ತೇನೆಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ಹಾಗೂ ಭಾರತದ ಜೆರ್ಸಿ ಬಣ್ಣ ಒಂದೇ ಆಗಿರುವುದರಿಂದ ಭಾರತ ತನ್ನ ತವರಿನಾಚೆಯ ಪಂದ್ಯದಲ್ಲಿ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.

ಟೀಂ ಇಂಡಿಯಾ ಆರೇಂಜ್ ಜರ್ಸಿ-ಟ್ವಿಟರ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ!

ಇಂಗ್ಲೆಂಡ್ ಪ್ರದರ್ಶನದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ತವರಿನ ಲಾಭ ಬಳಸಿಕೊಂಡು ಇಂಗ್ಲೆಂಡ್ ಭರ್ಜರಿ ಪ್ರದರ್ಶನ ತೋರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾನು ಈ ಮೊದಲೇ ಹೇಳಿದಂತೆ ತವರಿನಲ್ಲಿ ಆಡುವಾಗ ಉಂಟಾಗುವ ಒತ್ತಡ ತಂಡದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಎಂದಿದ್ದಾರೆ.  

ಭಾರತ-ಇಂಗ್ಲೆಂಡ್ ನಡುವಿನ ಪಂದ್ಯವು ಜೂನ್ 30ರಂದು ಬರ್ಮಿಂಗ್ ಹ್ಯಾಮ್’ನ ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆಯಲಿದ್ದು, ಇಂಗ್ಲೆಂಡ್ ಪಾಲಿಗೆ ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ.
 

click me!