ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಪರಾಕ್ರಮದಿಂದ 11 ರನ್ ರೋಚಕ ಗೆಲುವು ಸಾಧಿಸಿದೆ. ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತ ಭಾರಿ ಮುಖಭಂಗದಿಂದ ತಪ್ಪಿಸಿಕೊಂಡಿದೆ.
ಸೌಥಾಂಪ್ಟನ್(ಜೂ.22): ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ 3 ಪಂದ್ಯದಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧದ ಗೆಲುವಿಗೆ ಹರಸಾಹಸ ಪಟ್ಟಿದೆ. ಬ್ಯಾಟ್ಸ್‌ಮನ್ ವೈಫಲ್ಯ ಅನುಭವಿಸಿದರೂ, ಬೌಲರ್‌ಗಳ ಪರಾಕ್ರಮದಿಂದ ಟೀಂ ಇಂಡಿಯಾ 11 ರನ್ ಗೆಲುವು ಸಾಧಿಸಿದೆ.
ಗೆಲುವಿಗೆ 225 ರನ್ ಟಾರ್ಗೆಟ್ ಪಡೆದ ಆಫ್ಘಾನಿಸ್ತಾನ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿತ್ತು. ಆದರೆ ಹಝ್ರತುಲ್ಹ ಝಜೈ 10 ರನ್ ಸಿಡಿಸಿ ಔಟಾದರು. ನಾಯಕ ಗುಲ್ಬಾದಿನ್ ನೈಬ್ ಹಾಗೂ ರಹಮತ್ ಶಾ ಜೊತೆಯಾಟ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮೂಡಿಸಿತು. ಗುಲ್‌ಬಾದಿನ್ 27 ರನ್ ಸಿಡಿಸಿ ಔಟಾಗೋ ಮೂಲಕ ಅಪಾಯದ ಸೂಚನೆ ನೀಡಿದ್ದ ಜೊತೆಯಾಟಕ್ಕೆ ಬ್ರೇಕ್ ಬಿತ್ತು.
undefined
ರಹಮತ್ ಶಾ 36 ರನ್ ಕಾಣಿಕೆ ನೀಡಿದರು. ಹಶ್ಮತುಲ್ಹಾ ಶಾಹಿದಿ 21 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಅಸ್ಗರ್ ಅಫ್ಘಾನ್ ವಿಕೆಟ್ ಪತನಗೊಂಡಿತು. ಆದರೆ ಮೊಹಮ್ಮದ್ ನಬಿ ಹಾಗೂ ನಝಿಬುಲ್ಲಾ ಝರ್ದಾನ್ ಜೊತೆಯಾಟ ಅಫ್ಘಾನ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿತು. ನಝಿಬುಲ್ಲಾ ಜರ್ದಾನ್ 21 ರನ್ ಸಿಡಿಸಿ ಔಟಾದರು. ಆದರೆ ಮೊಹಮ್ಮದ್ ನಬಿ ಹೋರಾಟ ಮುಂದುವರಿಸಿದರು.
ನಬಿ ಹಾಗೂ ರಶೀದ್ ಖಾನ್ ಬ್ಯಾಟಿಂಗ್ ಟೀಂ ಇಂಡಿಯಾ ತಲೆನೋವು ಹೆಚ್ಚಿಸಿತು. ಅಂತಿಮ 30 ಎಸೆತದಲ್ಲಿ ಅಫ್ಘಾನ್ ಗೆಲುವಿಗೆ 40 ರನ್ ಅವಶ್ಯಕತೆ ಇತ್ತು. ಇತ್ತ ಟೀಂ ಇಂಡಿಯಾಗೆ 4 ವಿಕೆಟ್ ಬೇಕಿತ್ತು. ಗೆಲುವಿನತ್ತ ಮುನ್ನಗ್ಗುತ್ತಿದ್ದ ಅಫ್ಘಾನಿಸ್ತಾನಕ್ಕೆ ಯಜುವೇಂದ್ರ ಚಾಹಲ್ ಶಾಕ್ ನೀಡಿದರು. ರಶೀದ್ ಖಾನ್ 14 ರನ್ ಸಿಡಿಸಿ ಔಟಾದರು.
ಮೊಹಮ್ಮದ್ ನಬಿ ಬ್ಯಾಟಿಂಗ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಇಕ್ರಂ ಅಲಿ ಖಿಲ್ ಕೂಡ ಉತ್ತಮ ಸಾಥ್ ನೀಡಿದರು. ಅಂತಿಮ 6 ಎಸೆತದಲ್ಲಿ ಅಫ್ಘಾನ್ ಗೆಲುವಿಗೆ 16 ರನ್ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿ ಸಿಡಿಸಿದ ನಬಿ, ಹಾಫ್ ಸೆಂಚುರಿ ಪೂರೈಸಿದರು.
ಮರು ಎಸೆತದಲ್ಲೇ ನಬಿ ವಿಕೆಟ್ ಪತನಗೊಂಡಿತು. ನಂತ್ರ ಬಂದ ಅಫ್ತಾಬ್ ಅಲಂ ಕ್ಲೀನ್ ಬೋಲ್ಡ್ ಆದರು. ಹೀಗಾಗಿ ಅಫ್ಘಾನ್ ಗೆಲುವಿಗೆ 2 ಎಸೆತದಲ್ಲಿ 12 ರನ್ ಬೇಕಿತ್ತು. ಮರು ಎಸೆತದಲ್ಲೇ ಮುಜೀಬ್ ಯುಆರ್ ರಹಮಾನ್ ವಿಕೆಟ್ ಕಬಳಿಸೋ ಮೂಲಕ ಶಮಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದರು. ಈ ಮೂಲಕ ಆಫ್ಘಾನಿಸ್ತಾನ 49.5 ಓವರ್‌ಗಳಲ್ಲಿ 213 ರನ್‌ಗೆ ಆಲೌಟ್ ಆಯಿತು. ಭಾರತ 11 ರನ್ ರೋಚಕ ಗೆಲುವು ಸಾಧಿಸಿತು.