ವಿಶ್ವಕಪ್ 2019: ಆಫ್ಘನ್ನರಿಗೆ ಸವಾಲಿನ ಗುರಿ ನೀಡಿದ ಕೆರಿಬಿಯನ್ನರು

By Web DeskFirst Published Jul 4, 2019, 6:52 PM IST
Highlights

ವಿಶ್ವಕಪ್ ಟೂರ್ನಿಯ 42ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಸ್ಟ್ ಇಂಡೀಸ್ 311 ರನ್ ಬಾರಿಸಿದ್ದು, ಆಫ್ಘಾನಿಸ್ತಾನಕ್ಕೆ ಕಠಿಣ ಗುರಿ ನೀಡಿದೆ. ಈ ಪಂದ್ಯದ ಕುರಿತಾದ ವಿವರ ಇಲ್ಲಿದೆ ನೋಡಿ...

ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲೀಡ್ಸ್[ಜು.04]: ಎವಿನ್ ಲೆವಿಸ್[58], ಶಾಯ್ ಹೋಪ್[77], ನಿಕೋಲಸ್ ಪೂರನ್[58] ಆಕರ್ಷಕ ಅರ್ಧಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು 311 ರನ್ ಬಾರಿಸಿದ್ದು, ಆಫ್ಘಾನಿಸ್ತಾನಕ್ಕೆ ಕಠಿಣ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಕೊನೆಯ ವಿಶ್ವಕಪ್ ಪಂದ್ಯದಲ್ಲಿ ಗೇಲ್ ಕೇವಲ 7 ರನ್ ಬಾರಿಸಿ ನಿರಾಸೆ ಅನುಭವಿಸಿದರು. ಆದರೆ ಎರಡನೇ ವಿಕೆಟ್’ಗೆ ಜತೆಯಾದ ಎವಿನ್ ಲೆವೀಸ್-ಶಾಯ್ ಹೋಪ್ 88 ರನ್ ಗಳ ಜತೆಯಾಟವಾಡಿದರು. ಲೆವಿಸ್ 58 ರನ್ ಬಾರಿಸಿ ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರೆ, ಶಾಯ್ ಹೋಪ್ 77 ರನ್ ಸಿಡಿಸಿ ನಬೀ ಬೌಲಿಂಗ್’ನಲ್ಲಿ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು.  ಇನ್ನು 5ನೇ ವಿಕೆಟ್’ಗೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರನ್ ಹಾಗೂ ಜೇಸನ್ ಹೋಲ್ಡರ್ ಜೋಡಿ 105 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು 300ರ ಸಮೀಪ ಕೊಂಡ್ಯೊಯ್ದರು. ಪೂರನ್ 43 ಎಸೆತಗಳಲ್ಲಿ 58 ರನ್ ಬಾರಿಸಿದರೆ, ನಾಯಕ ಹೋಲ್ಡರ್ ಕೇವಲ 34 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್ ಗಳ ನೆರವಿನಿಂದ 45 ರನ್ ಚಚ್ಚಿದರು.

ಆಫ್ಘಾನಿಸ್ತಾನ ಪರ ದೌಲತ್ ಜದ್ರಾನ್ 2 ವಿಕೆಟ್ ಪಡೆದರೆ, ಸಯ್ಯದ್ ಶಿರ್ಜಾದ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬೀ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡೀಸ್: 311/6

ಶಾಯ್ ಹೋಪ್: 77

ದೌಲತ್ ಜದ್ರಾನ್: 73/2

click me!