ನ್ಯೂಜಿಲೆಂಡ್‌ಗೆ 306 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್; ಆತಂಕದಲ್ಲಿ ಪಾಕ್!

By Web DeskFirst Published Jul 3, 2019, 6:56 PM IST
Highlights

ಗೆದ್ದ ತಂಡಕ್ಕೆ ನೇರವಾಗಿ ಸೆಮಿಫೈನಲ್ ಅವಕಾಶ. ಸೋತರೆ ಇತರ ತಂಡದ ಫಲಿತಾಂಶ ಮೇಲೆ ಅವಲಂಬಿತ. ಇದಕ್ಕಾಗಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಕಠಿಣ ಹೋರಾಟ ನೀಡುತ್ತಿದೆ. ಇದೀಗ ನ್ಯೂಜಿಲೆಂಡ್ ತಂಡಕ್ಕೆ ಆತಿಥೇಯ ಇಂಗ್ಲೆಂಡ್ 306 ರನ್ ಟಾರ್ಗೆಟ್ ನೀಡಿದೆ. 

ಚೆಸ್ಟರ್ ಲೆ ಸ್ಟ್ರೀಟ್(ಜು.03): ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಕ್ಕಾಗಿ ಹೋರಾಡುತ್ತಿದೆ. ಜಾನಿ ಬೈರ್‌ಸ್ಟೋ ಶತಕ ಹಾಗೂ ಜೇಸನ್ ರಾಯ್ ಹಾಫ್ ಸೆಂಚುರಿ ಸಿಡಿಸಿದರೂ ಇಂಗ್ಲೆಂಡ್ ನಿರೀಕ್ಷಿತ ಗುರಿ ನೀಡಲು ವಿಫಲವಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‍‌ಗಳ ವೈಫಲ್ಯದಿಂದ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 305 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋ ಸ್ಫೋಟಕ ಆರಂಭ ನೀಡಿದರು. ರಾಯ್ 60 ರನ್ ಕಾಣಿಕೆ ನೀಡಿದರು. ಇತ್ತ ಬೈರ್‌ಸ್ಟೋ ಅಬ್ಬರ ಮುಂದುವರಿಯಿತು. ಆದರೆ ಜೂ ರೂಟ್ 24 ರನ್ ಸಿಡಿಸಿ ಔಟಾದರು. ನ್ಯೂಜಿಲೆಂಡ್ ಬೌಲರ್‌ಗಳನ್ನು ಚೆಂಡಾಡಿದ ಬೈರ್‌ಸ್ಟೋ ಸೆಂಚುರಿ ಸಿಡಿಸಿದರು. ಬೈರ್‌ಸ್ಟೋ 106 ರನ್ ಸಿಡಿಸಿ ಔಟಾದರು.

ಜೋಸ್ ಬಟ್ಲರ್, ಹಾಗೂ ಬೆನ್ ಸ್ಟೋಕ್ಸ್ ಅಬ್ಬರಿಸಲಿಲ್ಲ. ನಾಯಕ ಇಯಾನ್  ಮಾರ್ಗನ್ 40 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು. ಆದಿಲ್ ರಶೀದ್ 16 ರನ್ ಸಿಡಿಸಿ ಔಟಾದರು.   ಲಿಯಾಮ್ ಪ್ಲಕೆಂಟ್  ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 305 ರನ್ ಸಿಡಿಸಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದರೆ, ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಹೀಗಾಗಿ ಪಾಕಿಸ್ತಾನ ತಂಡ ಹಾಗೂ ಅಭಿಮಾನಿಗಳು ನ್ಯೂಜಿಲೆಂಡ್ ಗೆಲುವಿಗೆ ಪ್ರಾರ್ಥಿಸುತ್ತಿದ್ದಾರೆ.

click me!