ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ಎಡವಟ್ಟುಗಳನ್ನು ಹೇಳಬೇಡಿ ಎಂದಿದ್ದ ಐಸಿಸಿಗೆ ಮೈಕಲ್ ಹೋಲ್ಡಿಂಗ್ ತಕ್ಕ ತಿರುಗೇಟು ನೀಡಿದ್ದಾರೆ. ಅಂಪೈರ್ ನಿರ್ಧಾರದ ಕುರಿತು ರೊಚ್ಚಿಗೆದ್ದಿದ್ದ ಮೈಕಲ್‌ಗೆ ಐಸಿಸ್ ನೊಟೀಸ್ ನೀಡಿತ್ತು. ಇದಕ್ಕೆ ಮೈಕಲ್ ಪ್ರತಿಕ್ರಿಯೆ ನೀಡಿದ್ದಾರೆ.
ಲಂಡನ್(ಜೂ.12): ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ತಪ್ಪುಗಳು ಇತರ ಟೂರ್ನಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚೆ ಇದೆ. ಇದೇ ತಪ್ಪನ್ನು ವೀಕ್ಷಕ ವಿವರಣೆಯಲ್ಲಿ ಇದೇ ತಪ್ಪನ್ನು ಎತ್ತಿ ತೋರಿಸಿದ ಕಮೆಂಟೇಟರ್, ವೆಸ್ಟ್ ಇಂಡೀಸ್ ಮಾಜಿ ವೇಗಿ ಮೈಕಲ್ ಹೋಲ್ಡಿಂಗ್‌ಗೆ ಐಸಿಸಿ ತಾಕೀತು ಮಾಡಿತ್ತು. ತಪ್ಪು ಹೇಳದಂತೆ ಸೂಚಿಸಿತ್ತು. ಇದಕ್ಕೆ ಮೈಕಲ್ ತಕ್ಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಮುುಂಬೈ ಇಂಡಿಯನ್ಸ್ ಕ್ರಿಕೆಟಿಗ ಮೇಲೆ ಗಂಭೀರ ಆರೋಪ- ನಿಷೇಧದ ಭೀತಿಯಲ್ಲಿ ವೇಗಿ !
undefined
ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಅಂಪೈರ್ ತಪ್ಪು ಪಂದ್ಯದ ಫಲಿತಾಂಶವನ್ನೇ ಬದಲಿಸಿತ್ತು. ವೀಕ್ಷಕ ವಿವರಣೆ ಮಾಡುತ್ತಿದ್ದ ಮೈಕಲ್ ಹೋಲ್ಡಿಂಗ್ ಅಂಪೈರ್ ತಪ್ಪು ನಿರ್ಧಾರಗಳನ್ನು ಬಿಚ್ಚಿಟ್ಟಿದ್ದರು. ಇದು ಐಸಿಸಿ ಕೆಂಗಣ್ಣಿಗೆ ಕಾರಣವಾಗಿತ್ತು. ಬಳಿಕ ಇ ಮೇಲ್ ಮೂಲಕ ಅಂಪೈರ್ ತಪ್ಪುಗಳನ್ನು ಹೇಳದಂತೆ ಐಸಿಸಿ ಸೂಚಿಸಿತ್ತು.
ಇದನ್ನೂ ಓದಿ: ಅಮ್ಮನ ಮಾತು ಕೇಳಿ ಕಿಮ್ ಶರ್ಮ ತಿರಸ್ಕರಿಸಿದ್ದ ಯುವರಾಜ್ ಸಿಂಗ್!
ಐಸಿಸಿ ಇಮೇಲ್‌ಗೆ ರೊಚ್ಚಿಗೆದ್ದ ಮೈಕಲ್ ಹೊಲ್ಡಿಂಗ್ ಸರಿಯಾಗಿ ತಿರುಗೇಟು ನೀಡಿದ್ದಾರೆ. ತಪ್ಪುಗಳನ್ನು ಹೇಳಬೇಡಿ ಎಂದು ತಾಕೀತು ಮಾಡುವುದಾದರೆ ನಾನು ಇಲ್ಲಿ ಇರಲು ಬಯಸುವುದಿಲ್ಲ. ನೀವೇ ಕರೆಯಿಸಿದ್ದೀರಿ. ಈಗ ನೀವು ಹೇಳಿ ನಾನಿಲ್ಲರಬೇಕೋ ಅಥವಾ ಮನೆ ಕಡೆ ಹೋಗಬೇಕೋ?. ನಿಮ್ಮ ಸೂಚನೆ ಪಾಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.