ವಿಶ್ವಕಪ್ 2019: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್

By Web DeskFirst Published Jun 14, 2019, 2:37 PM IST
Highlights

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

ಸೌಥಾಂಪ್ಟನ್(ಜೂ.14): ವಿಶ್ವಕಪ್ ಟೂರ್ನಿಯಲ್ಲಿಂದು ಆತಿಥೇಯ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ವೆಸ್ಟ್ ಇಂಡೀಸ್ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. ಇವಿನ್ ಲಿವಿಸ್, ಆ್ಯಂಡ್ರೆ ರಸೆಲ್ ಹಾಗೂ ಶ್ಯಾನನ್ ಗೆಬ್ರಿಯಲ್ ತಂಡ ಸೇರಿಕೊಂಡಿದ್ದಾರೆ.

 

has opted to bowl first in Southampton. 🏏

FOLLOW ▶️ https://t.co/HmtembPBxn pic.twitter.com/w55F6BP5jD

— Cricket World Cup (@cricketworldcup)

 

ಇಂಗ್ಲೆಂಡ್ ಆಡಿದ 3 ಲೀಗ್ ಪಂದ್ಯದಲ್ಲಿ 2 ರಲ್ಲಿ ಗೆಲುವು ಸಾಧಿಸಿದರೆ, ಪಾಕಿಸ್ತಾನ ವಿರುದ್ಧ ಮುಗ್ಗರಿಸಿದೆ. ಈ ಮೂಲಕ  4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇತ್ತ ವೆಸ್ಟ್ ಇಂಡೀಸ್, 3 ಪಂದ್ಯದಲ್ಲಿ 1 ಗೆಲುವು 1 ಸೋಲು ಹಾಗೂ 1 ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಹೀಗಾಗಿ 3 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

 

Here's how the standings look before in Southampton.

How much will this change after the game? 👀 pic.twitter.com/2f2i1IBgh2

— Cricket World Cup (@cricketworldcup)
click me!