ಜಯಕಿಶನ್ ತಬ್ಬಿಕೊಂಡು ಕ್ಷಮೆ ಕೇಳಿದ ಡೇವಿಡ್ ವಾರ್ನರ್!

Published : Jun 20, 2019, 08:28 PM IST
ಜಯಕಿಶನ್ ತಬ್ಬಿಕೊಂಡು ಕ್ಷಮೆ ಕೇಳಿದ ಡೇವಿಡ್ ವಾರ್ನರ್!

ಸಾರಾಂಶ

ಆಸ್ಟ್ರೇಲಿಯಾ ಸ್ಪೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, 23ರ ಹರೆಯದ ಜಯಕಿಶನ್ ತಬ್ಬಿಕೊಂಡು ಕ್ಷಮೆ ಕೇಳಿದ್ದಾರೆ. ಆಸಿಸ್ ಕ್ರಿಕೆಟಿಗ ವಾರ್ನರ್ ಜಯಕಿಶನ್ ಬಳಿ ಕ್ಷಮೆ ಕೇಳಿದ್ದು ಯಾಕೆ? ಅಷ್ಟಕ್ಕೂ ಯಾರು ಈ ಜಯಕಿಶನ್? ಇಲ್ಲಿದೆ ವಿವರ.  

ಓವಲ್(ಜೂ.20): ವಿಶ್ವಕಪ್ ಆರಂಭಕ್ಕೂ ಮುನ್ನ ಜಯಕಿಶನ್ ಪ್ಲಾಹ ಹೆಸರು ಬಹುತೇಕ ಯಾರು ಕೇಳಿರಲಿಲ್ಲ. ವಿಶ್ವಕಪ್ ಅಭ್ಯಾಸದ ವೇಳೆ ಭಾರತೀಯ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಜಯಕಿಶನ್ ಹೆಸರು ಸದ್ದು ಮಾಡಿತು. ಆಸ್ಟ್ರೇಲಿಯಾ ಅಭ್ಯಾಸದ ವೇಳೆ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೊಡೆದ ಬಾಲ್ ನೇರವಾಗಿ ಜಯಕಿಶನ್ ತಲೆಗೆ ಬಡಿದು ಅಲ್ಲೇ ಕುಸಿದು ಬಿದ್ದಿದರು. ಇದೀಗ ಇದೇ ಜಯಕಿಶನ್ ಭೇಟಿಯಾದ ಡೇವಿಡ್ ವಾರ್ನರ್ ತಬ್ಬಿಕೊಂಡು ಕ್ಷಮೆ ಯಾಚಿಸಿದ್ದಾರೆ.

 

ಇದನ್ನೂ ಓದಿ: ಭಾರತ ವಿರುದ್ಧದ ಸೋಲು-ಪಾಕ್ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡ?

ಇಂಗ್ಲೆಂಡ್ ಕ್ಲಬ್ ಕ್ರಿಕೆಟರ್ ಆಗಿರುವ ಜಯಕಿಶನ್, ವಿಶ್ವಕಪ್ ತಂಡದ ಅಭ್ಯಾಸದಲ್ಲಿ ನೆರವಾಗಿದ್ದಾನೆ. ಬ್ಯಾಟ್ಸ್‌ಮನ್‌ಗಳಿಗೆ ನೆಟ್ ಬೌಲಿಂಗ್ ಮಾಡುತ್ತಿದ್ದ ಜಯಕಿಶನ್, ಡೇವಿಡ್ ವಾರ್ನರ್‌ಗೂ ಬೌಲಿಂಗ್ ಮಾಡಿದ್ದಾನೆ. ಆದರೆ ವಾರ್ನರ್ ಹೊಡೆದ ಬಾಲ್ ತಲೆಗೆ ಬಡಿದು ಆಸ್ಪತ್ರೆ ಸೇರಿದ್ದ. ಗಂಭೀರ ಗಾಯಗೊಂಡಿದ್ದ ಜಯಕಿಶನ್ ಸದ್ಯ ಅಲ್ಪ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ.

 

ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಜಯಕಿಶನ್‌ಗೆ ಓವಲ್ ಕ್ರೀಡಾಂಗಣಕ್ಕೆ ಆಗಮಿಸುವಂತೆ ವಾರ್ನರ್ ಆಹ್ವಾನಿಸಿದ್ದರು. ಹೀಗಾಗಿ ಓವಲ್ ಕ್ರೀಡಾಂಗಣಕ್ಕೆ ಆಗಮಿಸಿದ ಜಯಕಿಶನ್‌ನ್ನು ವಾರ್ನರ್ ಸೇರಿದಂತೆ ಆಸೀಸ್ ಕ್ರಿಕೆಟಿಗರು ಭೇಟಿಯಾಗಿದ್ದಾರೆ.  ಆಸ್ಪತ್ರೆಗೆ ತೆರಳಿ ಜಯಕಿಶನ್ ಭೇಟಿಯಾದ ವಾರ್ನರ್, ತಬ್ಬಿಕೊಂಡು ಕ್ಷಮೆ ಕೇಳಿದ್ದಾರೆ. 

 

ಇದನ್ನೂ ಓದಿ: ಪಾಕ್ ವಿರುದ್ಧ ಭರ್ಜರಿ ಗೆಲವು-ಟ್ರೆಂಡ್ ಆಯ್ತು ಕೊಹ್ಲಿ ಸೈನ್ಯದ ಮಲ್ಹಾರಿ ಡ್ಯಾನ್ಸ್!

ಆಸ್ಟ್ರೇಲಿಯಾ ಕ್ರಿಕೆಟಿಗರು ಸಹಿ ಮಾಡಿದ ಜರ್ಸಿಯನ್ನು ವಾರ್ನರ್ ಉಡುಗೊರೆಯಾಗಿ ಜಯಕಿಶನ್‌ಗೆ ನೀಡಿದ್ದಾರೆ. ಇಷ್ಟೇ ಅಲ್ಲ ಜಯಕಿಶನ್ ಕುಟುಂಬಕ್ಕೆ ವಿಶ್ವಕಪ್ ಪಂದ್ಯ ವೀಕ್ಷಿಸಲು ಟಿಕೆಟ್ ನೀಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಸೇರಿದಂತೆ ಹಲವು ಭಾರತೀಯ ಕ್ರಿಕೆಟಿಗರಿಗೂ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದಾರೆ. 

 

ಜಯಕಿಶನ್ ತಂದೆ ಪರ್ವಿಂದರ್ ಕುಮಾರ್ ಪ್ಲಾಹ ಹುಟ್ಟಿದ್ದು ಕೀನ್ಯಾದಲ್ಲಿ. ಬಳಿಕ ಪಂಜಾಬ್‌ನ ಚಂಡೀಘಡಕ್ಕೆ ಮರಳಿದ್ದಾರೆ. ಚಂಡೀಘಡ ದರ್ಶನ ಪ್ಲಾಹ ಮದುವೆಯಾದ ಪರ್ವಿಂದರ್, ಇಂಗ್ಲೆಂಡ್‌‍ಗೆ ತೆರಳಿದರು. ಹೀಗಾಗಿ ಜಯಕಿಶನ್ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಇಂಗ್ಲೆಂಡ್‌ನಲ್ಲಿ.  ಸದ್ಯ ಇಂಗ್ಲೆಂಡ್ ಕ್ಲಬ್ ತಂಡದ ಪರ ಆಡುತ್ತಿರುವ ಜಯಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟಿಟರ್ ಆಗೋ ಕನಸು ಕಟ್ಟಿಕೊಂಡಿದ್ದಾರೆ.
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!