ರೋಹಿತ್ ಶರ್ಮಾ ಸೆಂಚುರಿ; ಬಾಂಗ್ಲಾಗೆ 315 ರನ್ ಗುರಿ

By Web DeskFirst Published Jul 2, 2019, 6:50 PM IST
Highlights

ಬಾಂಗ್ಲಾದೇಶ ವಿರುದ್ಧ ರನ್ ಮಳೆ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಹೊರತು ಪಡಿಸಿದರೆ ಇತರ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಹೀಗಾಗಿ ಟೀಂ 314 ರನ್ ಸಿಡಿಸಿತು. 

ಬರ್ಮಿಂಗ್‌ಹ್ಯಾಮ್(ಜು.02): ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಕೆಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಆರಂಭಿಕರ ಹೊರತು ಪಡಿಸಿದರೆ ರಿಷಬ್ ಪಂತ್ ಹೋರಾಟ ನೀಡಿದರೆ ಇತರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ. ಹೀಗಾಗಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 314 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಜೊತೆಯಾಟದಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ರೋಹಿತ್ ಶರ್ಮಾ ಆಕರ್ಷಕ ಸೆಂಚುರಿ ಸಿಡಿಸಿದರು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ 4 ಶತಕ ಸಿಡಿಸಿದ ಸಾಧನೆ ಮಾಡಿದರು.

ಸೆಂಚುರಿ ಸಿಡಿಸಿದ ಬೆನ್ನಲ್ಲೇ ರೋಹಿತ್ ಶರ್ಮಾ ಔಟಾದರು. ರೋಹಿತ್ 104 ರನ್ ಸಿಡಿಸಿ ನಿರ್ಗಮಿಸಿದರು. ರೋಹಿತ್ ಹಾಗೂ ರಾಹುಲ್ ಮೊದಲ ವಿಕೆಟ್‌ಗೆ 180 ರನ್ ಜೊತೆಯಾಟ ನೀಡಿದರು. ರೋಹಿತ್ ಬೆನ್ನಲ್ಲೇ ಹಾಫ್ ಸೆಂಚರಿ ಸಿಡಿಸಿದ ರಾಹುಲ್ ಕೂಡ ಔಟಾದರು. ರಾಹುಲ್ 77 ರನ್ ಸಿಡಿಸಿ ಔಟಾದರು. 

ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಉತ್ತಮ ಜೊತೆಯಾಟ ನೀಡೋ ಸೂಚನೆ ನೀಡಿದರು. ಆದರೆ ಕೊಹ್ಲಿ 26 ರನ್ ಸಿಡಿಸಿ ಔಟಾದರು. ಪಂತ್ ಹೋರಾಟ ಮುಂದುವರಿಸಿದರು. ಹಾರ್ಧಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. ಇತ್ತ ಪಂತ್ 48 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. 

ಸ್ಲೋ ಬ್ಯಾಟಿಂಗ್ ನಡೆಸುತ್ತಿದ್ದಾರೆ ಅನ್ನೋ ಟೀಕೆಗೆ ಗುರಿಯಾಗಿರುವ ಎಂ.ಎಸ್.ಧೋನಿ ಕೊಂಚ ವೇಗವಾಗಿ ಬ್ಯಾಟ್ ಬೀಸಿದರು.  15 ವರ್ಷದ ಕ್ರಿಕೆಟ್‌ ಕರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಇಳಿದ ದಿನೇಶ್ ಕಾರ್ತಿಕ್ ಗಮನಸೆಳೆಯಲಿಲ್ಲ. ಕಾರ್ತಿಕ್ 8 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು. ಧೋನಿ 35 ರನ್ ಸಿಡಿಸಿ ಔಟಾದರು.  ಭುವನೇಶ್ವರ್ ಕುಮಾರ್ 2 ರನ್ ಸಿಡಿಸಿ ರನೌಟ್ ಆದರು.  ಮೊಹಮ್ಮದ್ ಶಮಿ ವಿಕೆಟ್ ಕೈಚೆಲ್ಲೋ ಮೂಲಕ ಮೂಲಕ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 314 ರನ್ ಸಿಡಿಸಿತು. 

click me!