ವಿಶ್ವಕಪ್ 2019: ಶ್ರೀಲಂಕಾಗೆ 335 ರನ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

By Web DeskFirst Published Jun 15, 2019, 6:40 PM IST
Highlights

ಶ್ರೀಲಂಕಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ 334 ರನ್ ಸಿಡಿಸಿದೆ. ಲಂಕಾ ಬೌಲಿಂಗ್ ಹಾಗೂ ಆಸೀಸ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ. 

ಓವಲ್(ಜೂ.15): ನಾಯಕ ಆರೋನ್ ಫಿಂಚ್ ಭರ್ಜರಿ ಶತಕ ಹಾಗೂ ಸ್ಟೀವ್ ಸ್ಮಿತ್ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 334 ರನ್ ಸಿಡಿಸಿದೆ. ಈ ಮೂಲಕ ಲಂಕಾ ಇದೀಗ ಗೆಲುವಿಗೆ 335 ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾಗೆ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 80 ರನ್ ಜೊತೆಯಾಟ ನೀಡಿದರು. ವಾರ್ನರ್ 26 ರನ್ ಸಿಡಿಸಿ ಔಟಾದರು. ಆದರೆ ಫಿಂಚ್ ಆರ್ಭಟ ಮುಂದುವರಿಯಿತು. ಉತ್ತ ಉಸ್ಮಾನ್ ಖವಾಜ ಕೂಡ ನೆರವಾಗಲಿಲ್ಲ. ಆದರೆ ಸ್ಟೀವ್ ಸ್ಮಿತ್ ಜೊತೆ ಸೇರಿದ ಫಿಂಚ್ ಉತ್ತಮ ಇನ್ನಿಂಗ್ಸ್ ಕಟ್ಟಿದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಿಂಚ್ ಸೆಂಚುರಿ ದಾಖಲಿಸಿದರು. ಶತಕದ ಬಳಿಕವೂ ಫಿಂಚ್ ಅಬ್ಬರ ಮುಂದುವರಿಯಿತು. ಫಿಂಚ್ 132 ಎಸೆತದಲ್ಲಿ 153 ರನ್ ಸಿಡಿಸಿ ಔಟಾದರು. ಅರ್ಧಶತಕ ಸಿಡಿಸಿ ಆಸರೆಯಾಗಿದ್ದ ಸ್ಮಿತ್ 73 ರನ್ ಸಿಡಿಸಿ ಔಟಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಿದರು. ಆದರೆ ಶಾನ್ ಮಾರ್ಶ್ ಹಾಗೂ ಅಲೆಕ್ಸ್ ಕ್ಯಾರಿ ಬಹುಬೇಗನೆ ಔಟಾದರು. ಮ್ಯಾಕ್ಸ್‌ವೆಲ್ ಅಜೇಯ 46 ರನ್ ಸಿಡಿಸೋ ಮೂಲಕ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 334 ರನ್ ಸಿಡಿಸಿತು. 

click me!