ನ್ಯೂಜಿಲೆಂಡ್ ಹೊರದಬ್ಬಿ ಸೆಮೀಸ್ ಪ್ರವೇಶಿಸಲು ಪಾಕಿಸ್ತಾನ ಏನು ಮಾಡಬೇಕು?

By Web DeskFirst Published Jul 3, 2019, 11:27 PM IST
Highlights

2019ರ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನ ಮುಂದಿರುವ ದಾರಿಗಳೇನು? ನ್ಯೂಜಿಲೆಂಡ್ ತಂಡವನ್ನ ಹೊರದಬ್ಬಿ ಸೆಮಿಫೈನಲ್ ಲಗ್ಗೆ ಇಡಲು ಪಾಕಿಸ್ತಾನಕ್ಕೆ ಸಾಧ್ಯವಿದೆಯಾ? ಪಾಕ್ ಮುಂದಿರುವ ಆಯ್ಕೆ ವಿವರ ಇಲ್ಲಿದೆ.

ಲಂಡನ್(ಜು.03): ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿದ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಸೋಲು ಅನುಭವಿಸಿದ ನ್ಯೂಜಿಲೆಂಡ್ ಕೂಡ ಸೆಮೀಸ್ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ ನ್ಯೂಜಿಲೆಂಡ್ ಗೆಲುವು ಪಾರ್ಥಿಸಿದ್ದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ಸಣ್ಣ ಅವಕಾಶವಿದೆ. 

ಪಾಕಿಸ್ತಾನ ತಂಡ ಸದ್ಯ 8 ಪಂದ್ಯ ಆಡಿ 9 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಜುಲೈ 5 ರಂದು ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಲಿದೆ.  ನ್ಯೂಜಿಲೆಂಡ್ ಹೊರದಬ್ಬಿ ಪಾಕಿಸ್ತಾನ ಸೆಮೀಸ್ ಪ್ರವೇಶಿಸಲು ಪಾಕ್ ಏನು ಮಾಡಬೇಕು ಅನ್ನೋ ವಿವರ ಇಲ್ಲಿದೆ.

ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನ ಮುಂದಿರುವ ದಾರಿ:

ಬಾಂಗ್ಲಾ ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 311 ರನ್‌ಗಳಿಂದ ಗೆಲುವು ಸಾಧಿಸಬೇಕು
ಬಾಂಗ್ಲಾ ವಿರುದ್ಧ ಪಾಕಿಸ್ತಾನ 350 ರನ್ ಸಿಡಿಸಿದರೆ, 311 ರನ್‌ಗಳಿಂದ ಗೆಲುವು ಸಾಧಿಸಬೇಕು
ಬಾಂಗ್ಲಾ ವಿರುದ್ಧ ಪಾಕಿಸ್ತಾನ  400 ರನ್ ಸಿಡಿಸಿದರೆ,  316 ರನ್‌ಗಳಿಂದ ಗೆಲುವು ಸಾಧಿಸಬೇಕು
ಬಾಂಗ್ಲಾ ವಿರುದ್ಧ ಪಾಕಿಸ್ತಾನ  321 ರನ್ ಸಿಡಿಸಿದರೆ, 321 ರನ್‌ಗಳಿಂದ ಗೆಲ್ಲಬೇಕು

ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ, ಒಂದು ಎಸೆತ ಎಸೆಯುವ ಮುನ್ನವೇ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.

ಹೀಗಾಗಿ ಪಾಕಿಸ್ತಾನದ ಸೆಮಿಪೈನಲ್ ಕನಸು ನುಚ್ಚುನೂರಾಗಿದೆ.

click me!