ಶತಕ ಸಿಡಿಸಿ ದಾಖಲೆ ಬರೆದ ಡೇವಿಡ್ ವಾರ್ನರ್!

Published : Jul 07, 2019, 12:42 AM IST
ಶತಕ ಸಿಡಿಸಿ ದಾಖಲೆ ಬರೆದ ಡೇವಿಡ್ ವಾರ್ನರ್!

ಸಾರಾಂಶ

ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಸೌತ್ ಆಫ್ರಿಕಾ ವಿರುದ್ದ ಅಬ್ಬರಿಸಿದ ವಾರ್ನರ್ ಸೆಂಚುರಿ ದಾಖಲಿಸಿದ್ದಾರೆ. 

ಮ್ಯಾಂಚೆಸ್ಟರ್(ಜು.06): ಸೌತ್ ಆಫ್ರಿಕಾ ವಿರುದ್ದದ ಅಂತಿಮ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಆಕರ್ಷಕ ಶತಕ ಸಿಡಿಸಿದ್ದಾರೆ. ಸೌತ್ ಆಫ್ರಿಕಾದ ನೀಡಿದ 326 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಸಂಕಷ್ಟದಲ್ಲಿ ಸಿಲುಕಿದ ಆಸ್ಟ್ರೇಲಿಯಾ ತಂಡಕ್ಕೆ ವಾರ್ನರ್ ಶತಕ ಹೊಸ ಚೈತನ್ಯ ನೀಡಿತು. ಈ ಸೆಂಚುರಿ ಮೂಲಕ ವಾರ್ನರ್ ಏಕದಿನ ಕ್ರಿಕೆಟ್‌ನಲ್ಲಿ 17ನೇ ಶತಕ  ಪೂರೈಸಿದ್ದಾರೆ.

 

ವಾರ್ನರ್ 100 ಎಸೆತದಲ್ಲಿ ಶತಕ ಪೂರೈಸಿದರು. ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್ 3ನೇ ಶತಕ ಸಿಡಿಸಿದರು. 2019ರ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ ವಾರ್ನರ್ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 5 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. 

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!