ಮೊಯಿನ್ ಅಲಿ ಇಂದು ಯಾಕೆ ಆಡಿಲ್ಲ ಗೊತ್ತಾ..?

Published : Jun 08, 2019, 06:21 PM IST
ಮೊಯಿನ್ ಅಲಿ ಇಂದು ಯಾಕೆ ಆಡಿಲ್ಲ ಗೊತ್ತಾ..?

ಸಾರಾಂಶ

ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೊಯಿನ್ ಅಲಿ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಅಲಿ ತಂಡದಿಂದ ಹೊರಗುಳಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಲಂಡನ್[ಜೂ.08]: 12ನೇ ಆವೃತ್ತಿಯ ಐಸಿಸಿ ಏಕದಿನ ಟೂರ್ನಿಗೆ ಇಂಗ್ಲೆಂಡ್ ತಂಡ ಆತಿಥ್ಯ ವಹಿಸಿದ್ದು, ಚೊಚ್ಚಲ ವಿಶ್ವಕಪ್ ಗೆಲ್ಲುವ ಛಲದೊಂದಿಗೆ ಇಯಾನ್ ಮಾರ್ಗನ್ ತಂಡ ಕಣಕ್ಕಿಳಿದಿದೆ.

ಭಾರತ ಸೇರಿ 9 ತಂಡಗಳನ್ನು ಎಚ್ಚರಿಸಿದ ಪಾಕ್ ನಾಯಕ!

ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 104 ರನ್ ಗಳ ಜಯ ಸಾಧಿಸಿದ್ದ ಇಂಗ್ಲೆಂಡ್, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು 14 ರನ್ ಗಳ ಆಘಾತಕಾರಿ ಸೋಲು ಕಂಡಿತ್ತು. ಇದೀಗ ಬಾಂಗ್ಲಾದೇಶದ ವಿರುದ್ದ ಕಣಕ್ಕಿಳಿದಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೊಯಿನ್ ಅಲಿ ಕಣಕ್ಕಿಳಿಯದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಆದರೆ ಅಲಿಗೆ ವಿಶ್ರಾಂತಿ ಆಗಲಿ ಅಥವಾ ತಂಡದಿಂದ ಡ್ರಾಫ್ ಆಗಲಿ ಮಾಡಿಲ್ಲ.

ಹಾಗಾದರೆ ಅಲಿ ಯಾಕೆ ಆಡಿಲ್ಲ..?
ಮೊಯಿನ್ ಅಲಿ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿದಿರುವುದಕ್ಕೆ ಬೇರೆಯದ್ದೇ ಕಾರಣವಿದೆ. ಅಲಿ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿರುವುದರಿಂದ ಪಿತೃತ್ವ ರಜೆಯ ಮೇಲೆ ತಂಡದಿಂದ ಹೊರಗುಳಿದಿದ್ದಾರೆ. ಅಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಹಾಗೂ ಪಾಕಿಸ್ತಾನ ವಿರುದ್ಧ 3 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಅಲ್ಲದೆ ಬ್ಯಾಟಿಂಗ್’ನಲ್ಲೂ ತಂಡಕ್ಕೆ ನೆರವಾಗಬಲ್ಲರು.   

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!