ಐಸಿಸಿ ಭಾರತದ ಅಭಿಮಾನಿಯಂತೆ ವರ್ತಿಸುತ್ತಿದೆ-ಕ್ರಿಕೆಟ್ ಸಂಸ್ಥೆ ಕಾಲೆಳೆದ ಟ್ವಿಟರಿಗರು!

By Web DeskFirst Published Jun 5, 2019, 6:03 PM IST
Highlights

ಐಸಿಸಿ ಕ್ರಿಕೆಟ್ ಸಂಸ್ಥೆ ಇತ್ತೀಚೆಗೆ ಟೀಂ ಇಂಡಿಯಾ ಹಾಗೂ ಬಿಸಿಸಿಐ ಅಭಿಮಾನಿಯಂತೆ ವರ್ತಿಸುತ್ತಿದೆ ಎಂದು ಟ್ವಿಟರಿಗರು ಗರಂ ಆಗಿದ್ದಾರೆ. ಅಷ್ಟಕ್ಕೂ ಐಸಿಸಿ ಮೇಲೆ ಈ ಟೀಕೆ ಕೇಳಿಬಂದಿದ್ದು ಯಾಕೆ? ಇಲ್ಲಿದೆ ವಿವರ.

ದುಬೈ(ಜೂ.05): ವಿಶ್ವಕಪ್ ಟೂರ್ನಿ ಕಾವೇರುತ್ತಿದ್ದಂತೆ ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ. ಇದೀಗ ವಿರಾಟ್ ಕೊಹ್ಲಿಯನ್ನು ರಾಜನಂತೆ ಚಿತ್ರಿಸಿದ ಪೋಸ್ಟ್ ಹಾಕಿದ್ದಾರೆ. ಇಂಗ್ಲೆಂಡ್ ರಾಜನಂತಿರುವ ಫೋಟೋ ಹಾಕಲಾಗಿದೆ. ಈ ಪೋಸ್ಟ್‌ಗೆ ಟ್ವಿಟರಿಗರು ಐಸಿಸಿ ಕಾಲೆಳೆದಿದ್ದಾರೆ. 

 

👑 pic.twitter.com/cGY12LaV3H

— ICC (@ICC)

 

ಐಸಿಸಿ ಕ್ರಿಕೆಟ್ ಸಂಸ್ಥೆ ಟೀಂ ಇಂಡಿಯಾ ಅಭಿಮಾನಿಯಂತೆ ವರ್ತಿಸುತ್ತಿದೆ ಎಂದು ಟ್ವಿಟರಿಗರು ಗರಂ ಆಗಿದ್ದಾರೆ. 10 ತಂಡಗಳು ಹೋರಾಟ ನಡೆಸುತ್ತಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಫೋಟೋ ಮಾತ್ರ ಹಾಕಿರುವುದು ಸರಿಯಲ್ಲ. ಇದರಿಂದ ಇತರ 9 ತಂಡಗಳು ಕಡೆಗಣಿಸಿದಂತೆ ಎಂದಿದ್ದಾರೆ. ಇಷ್ಟೇ ಅಲ್ಲ ಐಸಿಸಿ ಸಂಸ್ಥೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ.

 

The and the must get a room

— Moshe Medalie (@moshemedalie)

 

ICC acting like Indian team fan. BCCI > ICC

— Tushar 🇮🇳🏏 (@mainlycricket)

 

click me!