
ಪಾಟ್‌ಶೆಫ್‌ಸ್ಟ್ರೋಮ್: ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ನ (Womens Junior World Cup) ಸೆಮಿಫೈನಲ್‌ಗೆ ಭಾರತ ಪ್ರವೇಶಿಸಿದೆ. ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ, ದಕ್ಷಿಣ ಕೊರಿಯಾ ವಿರುದ್ಧ 3-0 ಗೋಲುಗಳ ಸುಲಭ ಗೆಲುವು ದಾಖಲಿಸಿ, 2ನೇ ಬಾರಿಗೆ ಅಂತಿಮ 4ರ ಸುತ್ತಿಗೇರಿತು. ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಜಯಿಸಿದ್ದ ಭಾರತ, ಕ್ವಾರ್ಟರ್ ಫೈನಲ್‌ನಲ್ಲೂ ತನ್ನ ಲಯ ಮುಂದುವರಿಸಿತು. ಮುಮ್ತಾಜ್ ಖಾನ್(11ನೇ ನಿಮಿಷ), ಲಾಲ್ರಿನ್ಡಿಕಿ (15ನೇ ನಿಮಿಷ) ಹಾಗೂ ಸಂಗೀತಾ ಕುಮಾರಿ (41ನೇ ನಿಮಿಷ) ಭಾರತ ಪರ ಗೋಲು ಬಾರಿಸಿದರು.
2013ರಲ್ಲಿ ಕಂಚಿನ ಪದಕ ಜಯಿಸಿದ್ದು ಭಾರತದ ಈ ವರೆಗಿನ ಶ್ರೇಷ್ಠ ಸಾಧನೆ ಎನಿಸಿದ್ದು, ತಂಡ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಭಾನುವಾರ ನಡೆಯಲಿರುವ ಸೆಮೀಸ್‌ನಲ್ಲಿ ಭಾರತಕ್ಕೆ ನೆದರ್‌ಲೆಂಡ್‌್ಸ ಎದುರಾಗಲಿದೆ. ನೆದರ್‌ಲೆಂಡ್ಸ್ ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5-0ಯಿಂದ ಜಯಿಸಿತು.
ಪ್ರೊ ಲೀಗ್: ಭಾರತಕ್ಕೆ ಜಯ
ಭುವನೇಶ್ವರ: ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ (Pro League Hockey Team) ಭಾರತ ಮಹಿಳಾ ತಂಡ (Indian Women's Hockey Team) 5ನೇ ಗೆಲುವು ದಾಖಲಿಸಿದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಶುಕ್ರವಾರ ನಡೆದ ನೆದರ್‌ಲೆಂಡ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 2-1 ಗೋಲುಗಳಲ್ಲಿ ಜಯಿಸಿತು. ಭಾರತ ಪರ ನೇಹಾ(10ನೇ ನಿಮಿಷ), ಸೋನಿಕಾ(27ನೇ ನಿ.,) ಗೋಲು ಗಳಿಸಿದರು.
ಕೊರಿಯಾ ಓಪನ್: ಸೆಮೀಸ್ ಪ್ರವೇಶಿಸಿದ ಸಿಂಧು, ಶ್ರೀಕಾಂತ್
ಸಿಂಚೊನ್(ದ.ಕೊರಿಯಾ): ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು (PV Sindhu) ಹಾಗೂ ಕಿದಂಬಿ ಶ್ರೀಕಾಂತ್ (Kidambi Srikanth) ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 21-10, 21-16ರಲ್ಲಿ ಜಯಗಳಿಸಿದರು.
Korea Open 2022: ಪಿವಿ ಸಿಂಧು, ಕಿದಂಬಿ ಶ್ರೀಕಾಂತ್ 2ನೇ ಸುತ್ತಿಗೆ ಲಗ್ಗೆ
ಬುಸಾನನ್ ವಿರುದ್ಧ ಸಿಂಧುಗಿದು ಒಟ್ಟಾರೆ 17ನೇ ಗೆಲುವು. ಪುರುಷರ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ಶ್ರೀಕಾಂತ್, ಕೊರಿಯಾದ ಸೊನ್ ವಾನ್ ವಿರುದ್ಧ 21-12, 18-21, 21-12 ಗೇಮ್‌ಗಳಲ್ಲಿ ಜಯಿಸಿದರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಸೆಮೀಸ್‌ಗೇರಲು ವಿಫಲವಾಯಿತು.
ರಾಷ್ಟ್ರೀಯ ಬಾಸ್ಕೆಟ್‌ಬಾಲ್: ಸೆಮೀಸ್‌ಗೆ ಕರ್ನಾಟಕ
ಚೆನ್ನೈ: 71ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಹರಾರಯಣ ವಿರುದ್ಧ ರಾಜ್ಯ ತಂಡ 82-65ರಲ್ಲಿ ಜಯ ಸಾಧಿಸಿತು. ಕರ್ನಾಟಕ ಪರ ಹರೀಶ್ 20, ಪ್ರತ್ಯಾನ್ಶು 14, ಅರವಿಂದ್ 11 ಅಂಕ ಗಳಿಸಿದರು. ಮಹಿಳೆಯರ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಕೇರಳ ವಿರುದ್ದ 79-83ರ ವೀರೋಚಿತ ಸೋಲು ಅನುಭವಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.