ಭಾರೀ ಮಳೆ: ಹಾವೇರಿ ಬಳಿ ನೀರಿನಲ್ಲಿ ಮುಳುಗಿದ ಖಾಸಗಿ ಬಸ್

By Web Desk  |  First Published Oct 21, 2019, 8:59 AM IST

ಭಾನುವಾರ ರಾತ್ರಿಯಿಡಿ ಸುರಿದ ಭಾರೀ  ಮಳೆ| ನೀರಿನಲ್ಲಿ ಮುಳುಗುತ್ತಿದ್ದ ಖಾಸಗಿ ಬಸ್ ನಲ್ಲಿದ್ದ 30 ಜನ ಪ್ರಯಾಣಿಕರ ರಕ್ಷಣೆ|  ಸವಣೂರು ತಾಲೂಕಿನ ಎಲವಿಗಿ ಗ್ರಾಮದಲ್ಲಿ ನಡೆದ ಘಟನೆ| ಬೆಂಗಳೂರಿನಿಂದ ಗದಗ ಜಿಲ್ಲೆಗೆ ಹೋಗುತ್ತಿದ್ದ ಖಾಸಗಿ ಬಸ್| ತಡರಾತ್ರಿ  ಭಾರೀ ಮಳೆ ಸುರಿದ ಪರಿಣಾಮ ಎಲವಿಗಿ ಗ್ರಾಮದವ ರೇಲ್ವೆ ಬ್ರಿಡ್ಜ್ ಬಳಿ ಮಳೆ ನೀರಲ್ಲಿ ಬಸ್ ಮುಳುಗಡೆ| ಸವಣೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೋಣಿ ಮೂಲಕ 30 ಜನರ ರಕ್ಷಣೆ|


ಹಾವೇರಿ[ಅ.21]: ಭಾನುವಾರ ರಾತ್ರಿಯಿಡಿ ಸುರಿದ ಭಾರೀ  ಮಳೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಖಾಸಗಿ ಬಸ್ ನಲ್ಲಿದ್ದ 30 ಜನ ಪ್ರಯಾಣಿಕರನ್ನು ರಕ್ಷಣೆ ಮಾಡಿದ ಘಟನೆ ಸವಣೂರು ತಾಲೂಕಿನ ಎಲವಿಗಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. 

ಖಾಸಗಿ ಬಸ್ ಬೆಂಗಳೂರಿನಿಂದ ಗದಗ ಜಿಲ್ಲೆಗೆ ಹೋಗುತ್ತಿತ್ತು, ತಡರಾತ್ರಿ  ಭಾರೀ ಮಳೆ ಸುರಿದ ಪರಿಣಾಮ ಎಲವಿಗಿ ಗ್ರಾಮದವ ರೇಲ್ವೆ ಬ್ರಿಡ್ಜ್ ಬಳಿ ಮಳೆ ನೀರಲ್ಲಿ ಬಸ್ ಮುಳುಗುತ್ತಿತ್ತು. ಈ ವೇಳೆ ಸವಣೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೋಣಿ ಮೂಲಕ 30 ಜನರನ್ನು ರಕ್ಷಣೆ ಮಾಡಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದರಿಂದ ಬಸ್ ನಲ್ಲಿ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮ್ಮ ಜೀವ ರಕ್ಷಣೆ ಮಾಡಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ. 

click me!