ಕೆಲವೊಂದು ಇಲಾಖೆಗಳಲ್ಲಿ 50 % ಪರ್ಸೆಂಟೇಜ್ ಕೊಡಬೇಕು ಅಂತಾರೆ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ ಜೊತೆಗೆ ಯಾತ್ರಿ ನಿವಾಸಕ್ಕೆ ಕೊಟ್ಟ ಅನುದಾನ ಬಳಕೆ ಮಾಡೋಕೆ ಬಿಡ್ತಿಲ್ಲ ಎಂದು ಆರೋಪಿಸಿದ್ದಾರೆ.
ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ( ಏ.18) : 40% ಪರ್ಸೆಂಟೇಜ್ ವಿಚಾರವಾಗಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಶಿರಹಟ್ಟಿ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಅಕ್ಕಿ ಆಲೂರು ಗ್ರಾಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಮಠಗಳಿಗೆ ಅನುದಾನ ಬಿಡುಗಡೆಯಲ್ಲೂ ಪರ್ಸೆಂಟೇಜ್ ತಗೊಳ್ತಾರೆ.
ಪರ್ಸೆಂಟೇಜ್ ಕೇಳೋದು ಈ ಸರ್ಕಾರ ಅಷ್ಟೆ ಅಲ್ಲ. ಅದು ಹಿಂದಿನ ಸರ್ಕಾರಗಳಿಂದಲೂ ಇದೇ ಪದ್ದತಿ ಇದೆ. ಇದನ್ನು ಈ ಸರ್ಕಾರ ಅಷ್ಟೆ ಮಾಡ್ತಿಲ್ಲ. ಆದರೆ ಈ ಸರ್ಕಾರ ಪರ್ಸೆಟೆಂಜ್ ಸ್ವಲ್ಪ ಹೆಚ್ಚು ಮಾಡಿರಬಹುದು.
undefined
ಎಲ್ಲಾ ಸರ್ಕಾರಗಳು ಪರ್ಸಟೇಂಜ್ ತಗೋಳ್ತಾವೆ ಅನ್ನೋದು ಕೇವಲ ನನ್ನ ಆರೋಪ ಅಷ್ಟೇ ಅಲ್ಲ. ಇಡೀ ರಾಜ್ಯದ ಜನಾಂಗವೇ ಬಲ್ಲ ಆರೋಪ. ಯಾವುದೇ ಅನುದಾನ ಬಿಡುಗಡೆ ಮಾಡಿದರೆ ಎಂ.ಪಿಗೆ ಕೊಡಬೇಕು, ಎಂಎಲ್ ಎ ಗೆ ಕೊಡಬೇಕು, ಮಂತ್ರಿಗೆ ಕೊಡಬೇಕು, ಅಧಿಕಾರಿಗಳಿಗೆ ಕೊಡಬೇಕು ಅಂದರೆ ಕಾಮಗಾರಿ ಹೇಗೆ ಆಗುತ್ತವೆ?
CHIKKAMAGALURU ಕಾಂಗ್ರೆಸ್ ,ಬಿಜೆಪಿ ವಿರುದ್ದ ಗುಡುಗಿದ HDK
ಭ್ರಷ್ಟಾಚಾರ (Corruption) ಮಾಡೋದು, ಬಳಿಕ ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡೋದು ಸರಿಯಾದ ಕ್ರಮ ಅಲ್ಲ ಎಂದು ಕಿಡಿ ಕಾರಿದರು.ದಿಂಗಾಲೇಶ್ವರ ಮಠದ ಯಾತ್ರಿ ನಿವಾಸ ನಿರ್ಮಾಣದಲ್ಲಿ ಪರ್ಸೆಂಟೇಜ್ ಕೇಳಿದ್ದಾರೆ. ಸರ್ಕಾರದ ಅನುದಾನದಲ್ಲಿ ಮಠದ ಯಾತ್ರಿ ನಿವಾಸ ನಿರ್ಮಾಣ, ಸಮುದಾಯ ಭವನ ಕಟ್ಟೋದಿರಬಹುದು, ಎಲ್ಲಾ ವಿಚಾರದಲ್ಲಿ ಕಮಿಷನ್ ಕೇಳ್ತಾರೆ. ಅಧಿಕಾರಿಗಳು ನಾಚಿಗೆಗೆಟ್ಟು ಮುಲಾಜಿಲ್ಲದೇ ಪರ್ಸೆಂಟೇಜ್ ಕೊಡಲೇಬೇಕು ಅಂತ ಹೇಳೋದು ನೋಡಿದರೆ ರಾಜ್ಯದಲ್ಲಿ ಭ್ರಷ್ಟಾಚಾರ ಮೆರವಣಿಗೆಯಲ್ಲಿದೆ ಅನ್ನೋದು ಈ ಸಂದರ್ಭದಲ್ಲಿ ಹೇಳಲು ಇಚ್ಚಿಸುವೆ.
ಕಾಂಗ್ರೆಸ್, ಬಿಜೆಪಿ, ಇರಬಹುದು ಈಗ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಪಾಯಖಾನೆ ಬಿಲ್ ಕೊಡೋಕೆ ಸಾವಿರ ,ಎರಡು ಸಾವಿರ ಕೊಡಬೇಕು.ಇದನ್ನು ನಾವು ಯಾವಾಗಲೂ ಅನುಭವಿಸಿಕೊಂಡು ಬಂದಿದಿವಿ.ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಕೊಟ್ಟ ಅನುದಾನ,ಯಡಿಯೂರಪ್ಪ ಸಿಎಂ ಇದ್ದಾಗ ಕೊಟ್ಟ ಅನುದಾನ ಇವತ್ತಿಗೂ ಬಿಡುಗಡೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Santosh Patil Suicide Case ಆತ್ಮಹತ್ಯೆ ಮಾಡಿಕೊಂಡ ಲಾಡ್ಜಿನಲ್ಲಿ 2ನೇ ಸುತ್ತಿನ ತನಿಖೆ
ಯಾತ್ರಿ ನಿವಾಸಕ್ಕೆ ಕೊಟ್ಟ ಅನುದಾನ ಬಳಕೆ ಮಾಡೋಕೆ ಬಿಡ್ತಿಲ್ಲ: 75 ಲಕ್ಷ ರೂಪಾಯಿ ಅನುದಾನ ಯಾತ್ರಿ ನಿವಾಸಕ್ಕೆ ಬಿಡುಗಡೆ ಆಗಿದೆ. ಆದರೆ 27% ಪರ್ಸೆಂಟೇಜ್ ಹಣ ಕೊಟ್ಟರೆ ಮಾತ್ರ ಉಳಿದ ಹಣ ಬಿಡುಗಡೆ ಮಾಡ್ತೀವಿ ಅಂತ ಅಧಿಕಾರಿಗಳು ಹೇಳ್ತಾರೆ.ಕೆಲವೊಂದು ಇಲಾಖೆಯಲ್ಲಿ 50% ಕೊಡಬೆಕಾಗುತ್ತೆ ಅಂತ ಹೇಳ್ತಾರೆ.ಹಣ ಕೊಡದೇ ಇದ್ರೆ ಫೈಲ್ ಮೂವ್ ಆಗಲ್ಲ.30% ಕೊಟ್ಟಬಿಡ್ರಿ ಸ್ವಾಮೀಜಿ ನಾಳೇನೆ ಹಣ ಬಿಡುಗಡೆ ಆಗುತ್ತೆ ಅಂತಾರೆ.ರಾಜಕಾರಣಿಗಳು ಭ್ರಷ್ಟಾಚಾರ ಜೀವಂತ ಇಟ್ಟಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿ ಕಾರಿದರು