ಹಾವೇರಿಯ ಗುತ್ತಲದಲ್ಲಿ ರೇಣುಕಾಚಾರ್ಯರ ಮೂರ್ತಿಯ ತೆಪ್ಪೋತ್ಸವ

By Web Desk  |  First Published Oct 9, 2019, 8:30 AM IST

ಜಗದ್ಗುರು ಶ್ರೀರೇಣುಕಾಚಾರ್ಯರ ಮೂರ್ತಿಯ ತೆಪ್ಪೋತ್ಸವ ದೊಡ್ಡ ಹೊಂಡದಲ್ಲಿ ನೆರವೇರಿತು| ಸಂಪ್ರದಾಯದ ಪೂಜೆ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು| ಉತ್ತಮ ಮಳೆಯಿಂದಾಗಿ ಹೊಂಡದಲ್ಲಿನ ನೀರಿನ ಪ್ರಮಾಣ ಹೆಚ್ಚಿದ್ದರಿಂದ ತೆಪ್ಪೋತ್ಸವ ಕಳೆ ತುಂಬಿತ್ತು| ತೆಪ್ಪೋತ್ಸವ ನಿಧಾನವಾಗಿ ಹೊಂಡವನ್ನು ಒಂದು ಸುತ್ತು ಹಾಕಿದ್ದನ್ನು ಅನೇಕರು ಕಣ್ಣ ತುಂಬಿಕೊಂಡರು| 


ಗುತ್ತಲ(ಅ.9): ವಿಜಯ ದಶಮಿಯ ಅಂಗವಾಗಿ ಪುರಾತನ ಚಂದ್ರಶೇಖರ ದೇವಸ್ಥಾನದಿಂದ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಮೂರ್ತಿಯ ತೆಪ್ಪೋತ್ಸವ ಮಂಗಳವಾರ ಸಂಜೆ ಪಟ್ಟಣದ ದೊಡ್ಡ ಹೊಂಡದಲ್ಲಿ ನೆರವೇರಿತು.

ಪ್ರತಿ ವರ್ಷದಂತೆ ವಿಜಯ ದಶಮಿ ಅಂಗವಾಗಿ ನಡೆಯುವ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಅನೇಕರು ಕಾತುರದಿಂದ ಕಾಯುತ್ತಿದ್ದರು. ಸಂಜೆ ಸಂಪ್ರದಾಯದ ಪೂಜೆ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ತಮ ಮಳೆಯಿಂದಾಗಿ ಹೊಂಡದಲ್ಲಿನ ನೀರಿನ ಪ್ರಮಾಣ ಹೆಚ್ಚಿದ್ದರಿಂದ ತೆಪ್ಪೋತ್ಸವ ಕಳೆ ತುಂಬಿತ್ತು. ತೆಪ್ಪೋತ್ಸವ ನಿಧಾನವಾಗಿ ಹೊಂಡವನ್ನು ಒಂದು ಸುತ್ತು ಹಾಕಿದ್ದನ್ನು ಅನೇಕರು ಕಣ್ಣ ತುಂಬಿಕೊಂಡರು. ಈ ವೇಳೆ ಜೈಘೋಷಗಳನ್ನು ಹಾಕಲಾಯಿತು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹದೇವಯ್ಯ ಚಿಕ್ಕಮಠ, ತಿರಕಪ್ಪ ವಟ್ನಳ್ಳಿ, ಶೇಖಪ್ಪ ಹಾವೇರಿ, ಷಣ್ಮುಖಪ್ಪ ಕುರವತ್ತಿಗೌಡರ, ಈರಣ್ಣ ಹುಳ್ಳಿಕೊಪ್ಪಿ, ಪ್ರಶಾಂತ ಕಾಳೆ, ಗಿರೀಶ ಕುಂಬಾರ, ಆನಂದ ಇಟಗಿ, ಗಂಗಾಧರ ಅಗಸಿಬಾಗಿಲದ, ಪ್ರಕಾಶ ಹೊನ್ನಮ್ಮನವರ, ಪ್ರಭು ಹೊನ್ನಮ್ಮನವರ ಹಾಗೂ ಮಂಜುನಾಥ ಯರವಿನತಲಿ ಸೇರಿದಂತೆ ಅನೇಕ ಮುಸ್ಲಿಂ ಸಮಾಜದ ಬಾಂಧವರು, ಮಹಿಳೆಯರು, ಮಕ್ಕಳು ಸಹ ಈ ಸಂದರ್ಭದಲ್ಲಿದ್ದರು.
 

click me!