
ಹಾಸನ[ಅ. 20] ಹಾಸನದ ಖಾಸಗಿ ಹೊಟೆಲ್ ನಲ್ಲಿ ತಂಗಿದ್ದ ಯುವತಿ ಅನುಮಾನಾಸ್ಪದ ರೀತಿ ಸಾವಿಗೀಡಾಗಿದ್ದು ಈ ಸಂಬಂಧ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಯುವತಿಯನ್ನು 23 ವರ್ಷದ ಭವಿತಾ ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಯುವತಿ 12 ದಿನಗಳಿಂದ ನಗರದ ಸರಾಯು ಹೊಟೆಲ್‌ನಲ್ಲಿ ರೂಂ ಮಾಡಿಕೊಂಡಿದ್ದಳು. ಭಾನುವಾರ ಬೆಳಗ್ಗೆ ಯುವತಿ ಶವ ಹೋಟೆಲ್ ಹಿಂಭಾಗದ ದಾರಿಯಲ್ಲಿ ಪತ್ತೆಯಾಗಿತ್ತು.
ಟೆಸ್ಟಿ ಚಿಪ್ಸ್ ತಿಂದವನ ನಾಲಿಗೆಯೇ ಸುಟ್ಟಿ ಹೋಯ್ತು
ಭವಿತಾ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾಳು. ಕೈ ಮೇಲೆ ಪುನೀತ್ ಎಂದು ಬರೆಸಿಕೊಂಡಿದ್ದಾಳೆ ಎಂಬುದು ಪರಿಶೀಲನೆ ವೇಳೆ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಕೆಯ ಪಾಲಕರು ಆಕೆಯ ಶವವನ್ನು ಗುರುತು ಹಿಡಿದಿದಿದ್ದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಯುವತಿ ಮೈ ಮೇಲೆ ಯಾವುದೇ ಗಾಯದ ಗುರುತಿಲ್ಲ. ಆದ್ದರಿಂದ, ಹೋಟೆಲ್‌ನಿಂದ ಜಿಗಿದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲು ಸಾಧ್ಯವಿಲ್ಲ ಎಂದಿರುವ ಪೊಲೀಸರು ಹೊಟೆಲ್ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ.
ಕೊಲೆ ಮಾಡಿ ಎಸೆದಿರುವ ಶಂಕೆ ಇದ್ದು ಯುವತಿಯ ಪ್ರಿಯಕರ ಪುನೀತ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಗಳ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಭವಿತಾ ಪೋಷಕರಿಂದ ದೂರು ದಾಖಲಾಗಿದೆ.