ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದ ಅನರ್ಹ ಶಾಸಕ

By Web Desk  |  First Published Oct 20, 2019, 9:41 AM IST

ಶೀಘ್ರ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ನನ್ನ ಕ್ಷೇತ್ರದಲ್ಲಿ ಮತ್ತೆ ನಾನೇ ಅಭ್ಯರ್ಥಿ ಎಂದು ಅನರ್ಹ ಶಾಸಕರೋರ್ವರು ಹೇಳಿದ್ದಾರೆ.


ಹಾಸನ [ಅ.20]: ಶೀಘ್ರದಲ್ಲೇ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಹುಣಸೂರು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. 

ಹಾಸನಕ್ಕೆ ಭೇಟಿ ನೀಡಿ ಅಧಿದೇವತೆ ಹಾಸನಾಂಬೆ ದರ್ಶನ ಪಡೆದ ವಿಶ್ವನಾಥ್ ಕಷೇತ್ರದ ಮತದಾರರು ದಯಮಾಡಿ ಓಟ್ ನೀಡಿ ಎಂದು ಈ ವೇಳೆ ಮನವಿ ಮಾಡಿದರು. 

Tap to resize

Latest Videos

ಹಾಸನಾಂಬೆ ತಾಯಿ ಯಾವ ಕಡೆ ಆಶೀರ್ವಾದ ಮಾಡುತ್ತಾಳೋ ನೋಡೋಣ. ನನ್ನ ಕ್ಷೇತ್ರದಲ್ಲಿ ಬೇರೆಯವರು ನಿಲ್ಲುತ್ತಾರೆ ಎನ್ನುವುದು ಕಟ್ಟುಕಥೆ ಎಂದು ವಿಶ್ವನಾಥ್ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹುಣಸೂರು ನಾನು ಗೆದ್ದು ರಾಜೀನಾಮೆ ಕೊಟ್ಟ ಕ್ಷೇತ್ರ. ಹುಣಸೂರಲ್ಲಿ ನಾನೇ, ಇನ್ಯಾರು ಇಲ್ಲ ಎಂದು ಅನರ್ಹ ಶಾಸಕ ಎಚ್ ವಿಶ್ವನಾಥ್ ಹೇಳಿದರು.

click me!