ಗ್ರಾಮದೊಳಗೆ ಕಾಡಾನೆಯ ಗಂಭೀರ ನಡಿಗೆ..! ಹೋಗಪ್ಪಾ ಹೋಗು ಎಂದ್ರು ಜನ

By Web DeskFirst Published Oct 8, 2019, 10:02 AM IST
Highlights

ಮೈಸೂರಿನಲ್ಲಿ ಆನೆಗಳ ಜಂಬೂ ಸವಾರಿಗೆ ಕೌಂಟ್‌ ಡೌನ್ ಆರಂಭ ಆಗುತ್ತಿದ್ದಂತೆ ಹಾಸನದ ಗ್ರಾಮವೊಂದಕ್ಕೆ ಕಾಡಾನೆಯೊಂದು ದೀಢೀರ್ ಲಗ್ಗೆ ಇಟ್ಟಿದೆ. ಒಂಟಿ ಕಾಡಾನೆ ಗಂಭೀರವಾಗಿ ಗ್ರಾಮದ ರಸ್ತೆಗಳಲ್ಲಿ ಓಡಾಡಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.

ಹಾಸನ(ಅ.08): ಮೈಸೂರಿನಲ್ಲಿ ಆನೆಗಳ ಜಂಬೂ ಸವಾರಿಗೆ ಕೌಂಟ್‌ ಡೌನ್ ಆರಂಭ ಆಗುತ್ತಿದ್ದಂತೆ ಹಾಸನದ ಗ್ರಾಮವೊಂದಕ್ಕೆ ಕಾಡಾನೆಯೊಂದು ದೀಢೀರ್ ಲಗ್ಗೆ ಇಟ್ಟಿದೆ. ಒಂಟಿ ಕಾಡಾನೆ ಗಂಭೀರವಾಗಿ ಗ್ರಾಮದ ರಸ್ತೆಗಳಲ್ಲಿ ಓಡಾಡಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.

ಗ್ರಾಮದೊಳಕ್ಕೆ ಬಂದು ಗಂಭೀರ ಹೆಜ್ಜೆ ಹಾಕಿದ ಕಾಡಾನೆಯನ್ನ ನೋಡಿ ಜನ ಆತಂಕದಲ್ಲಿದ್ದಾರೆ. ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಒಂಟಿ ಸಲಗನ ಸ್ಥಳೀಯರು ಭೀತಿಗೊಳಗಾಗಿದ್ದಾರೆ.

ಹಾಸನಾಂಬ : ದರ್ಶನೋತ್ಸವದ ಸಿದ್ಧತಾ ಕಾರ‍್ಯಕ್ಕೆ ಹಿನ್ನಡೆ?

ಗ್ರಾಮದ ಹೊರವಲಯದಿಂದ ಮೆಲ್ಲನೆ ಗ್ರಾಮದೊಳಗೆ ಬಂದ ಆನೆ ಗ್ರಾಮದ ರಸ್ತೆಗಳಲ್ಲಿ ಗಮ್ಮತ್ತಾಗಿ ಸುತ್ತು ಹಾಕಿದೆ. ನಂತರ ಕಾಫಿ ತೋಟಕ್ಕೂ ಪ್ರವೇಶಿಸಿದೆ. ನಾಯಿಗಳು ಬೊಗಳಿದರೂ ಒಂದಷ್ಟೂ ಹೆದರದ ಆನೆ ಆರಾಮವಾಗಿ ಗ್ರಾಮದಲ್ಲಿ ಓಡಾಡಿದೆ.

ಭಾರೀ ಮಳೆಗೆ ತತ್ತರಿಸಿದ ಮಲೆನಾಡು: ಹಲವೆಡೆ ಸಂಪರ್ಕ ಕಡಿತ

ಹೋಗಪ್ಪಾ ಹೋಗು ಎಂದು ಆನೆಯನ್ನು ಜನ ಊರಾಚೆ ಕಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ರಂಪ ಮಾಡದೆ ಸೈಲೆಂಟ್ ಆಗಿ ಬಂದ ಆನೆ ಹಾಗೇ ಹೊರಟು ಹೋಗಿದೆ.

click me!