ಹಾಲಿನ ದರ ಏರಿಕೆ : ದೀಪಾವಳಿ ಗಿಫ್ಟ್ ನೀಡಿದ ರೇವಣ್ಣ

By Kannadaprabha NewsFirst Published Oct 26, 2019, 2:51 PM IST
Highlights

ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಪರ್ ಗಿಫ್ಟ್ ನೀಡಿದ್ದಾರೆ. ಹಾಸನದಲ್ಲಿ ಹಾಲಿನ ದರ ಏರಿಕೆ ಮಾಡಿ ಹಾಲು ಉತ್ಪಾದಕರಿಗೆ ದೀಪಾವಳಿ ಕೊಡುಗೆ ನೀಡಿದ್ದಾರೆ. 

ಹಾಸನ [ಅ. 26]: ದೇಶದಲ್ಲಿ 10 ಕೋಟಿ ಹಾಲು ಉತ್ಪಾದಕರಿದ್ದಾರೆ. ಈ ನಿಟ್ಟಿನಲ್ಲಿ ಹೊರ ದೇಶದಿಂದ ಹಾಲು ಉತ್ಪನ್ನ, ಆಮದಿಗೆ ಅವಕಾಶ ನೀಡಬಾರದು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. 

ಹಾಸನ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ, ಹಾಸನದಲ್ಲಿ ಮಾತನಾಡಿ ಕೇಂದ್ರ ಸರ್ಕಾರ RCEP ಒಪ್ಪಂದಕ್ಕೆ ಸಹಿಹಾಕಲು ಮುಂದಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದರು. 

ರಾಜ್ಯ ಸರ್ಕಾರ ಕೂಡಲೇ ಆರ್ ಸಿಇಪಿ ಒಪ್ಪಂದದ ವಿರುದ್ಧ ಕೂಡಲೇ ನಿರ್ಣ ಮಾಡಿ ಕೇಂದ್ರಕ್ಕೆ ಕಳುಹಿಸಬೇಕು. ವಿಧಾಸನೆಯಲ್ಲಿ ಚರ್ಚಿಸಲು ಅಧಿವೇಶನ ಕರೆಯಬೇಕು. ರಾಜ್ಯದಿಂದ ನಿಯೋ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಬೇಕು. ಹೀಗೆ ಮಾಡದಿದ್ದಲ್ಲಿ ಶ್ವೇತ ಕ್ರಾಂತಿ ಹರಿಕಾರ ವರ್ಗೀಸ್ ಕುರಿಯನ್ ಆರಂಭಿಸಿರುವ ಹಾಲು ಒಕ್ಕೂಟಗಳು ಮುಚ್ಚಲಿವೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೀಪಾವಳಿ ಗಿಫ್ಟ್ : ಇನ್ನು ಇದೇ ವೇಳೆ ಪ್ರತೀ ಲೀಟರ್ ಹಾಲಿನ ಮೇಲೆ1 ರು. ಹೆಚ್ಚಳ ಮಾಡಿ ಆದೇಶ ನೀಡಿದರು. ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ಹಾಲು ಉತ್ಪಾದಕರಿಗೆ ಬಂಪರ್ ಗಿಫ್ಟ್ ನೀಡಿದರು.

ಹಾಸನ ಹಾಲು ಒಕ್ಕೂಟಕ್ಕೆ 40 ಕೋಟಿ ರು. ಲಾಭವಾಗಿದೆ.  2019-20ರ ಸೆಪ್ಟೆಂಬರ್ ವರೆಗೆ 40 ಕೋಟಿ ರು. ಲಾಭಗಳಿಸಿದೆ. ಲಾಭದ ಪ್ರಮಾಣವನ್ನು ರೈತರಿಗೆ ನೀಡುತ್ತೇವೆ ಎಂದು ರೇವಣ್ಣ ಹೇಳಿದರು.

click me!