ಹಾಸನಾಂಬಾ ದೇವಿ ದರ್ಶನ ಪಡೆದ ಡಿಕೆಶಿ ಪತ್ನಿ-ಮಗಳು

Published : Oct 25, 2019, 11:03 PM ISTUpdated : Oct 25, 2019, 11:24 PM IST
ಹಾಸನಾಂಬಾ ದೇವಿ ದರ್ಶನ ಪಡೆದ ಡಿಕೆಶಿ ಪತ್ನಿ-ಮಗಳು

ಸಾರಾಂಶ

ಹಾಸನಾಂಬಾ ದೇವಿಯ ದರ್ಶನ ಪಡೆದ ಡಿಕೆಶಿ ಪತ್ನಿ, ಪುತ್ರಿ/ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ/ ಶನಿವಾರ ಡಿಕೆ ಶಿವಕುಮಾರ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ

ಹಾಸನ[ಅ. 25] ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕ ನಂತರ ಮನೆಯವರು ನಮಗೆ ಈಗಲೇ ದೀಪಾವಳಿ ಎಂದು ಹೇಳಿದ್ದರು. ಇದೀಗ ಡಿಕೆಶಿ ಪತ್ನಿ ಉಷಾ ಮತ್ತು ಮಗಳು ಐಶ್ವರ್ಯಾ ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ.

ಹಾಸನಾಂಬೆ ಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಪತ್ನಿ ಮತ್ತು ಮಗಳು ಆಶೀರ್ವಾದ ಪಡೆದುಕೊಂಡಿದ್ದಾರೆ. ಇಡಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಡಿಕೆ ಶಿವಕುಮಾರ್ 51 ದಿನಗಳ ಜೈಲು ವಾಸ ಅನುಭವಿಸಿ ದೆಹಲಿ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ.

ಡಿಕೆಶಿಗೆ ತೀರಿಸಲಾಗದಷ್ಟು ಸಾಲ ಕೊಟ್ಟವರು ಯಾರು?

ಡಿಕೆ ಶಿವಕುಮಾರ್ ದೆಹಲಿಯಲ್ಲೇ ಇದ್ದು ಶನಿವಾರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ನಾನು ಸಹಾಯ ಮಾಡದೇ ಇರುವವರು ಅನೇಕ ಜನ ಮುಂದೆ ಬಂದು ಸಹಾಯ ಮಾಡಿದ್ದಾರೆ. ಪ್ರೀತಿ ತೋರಿಸಿದ್ದಾರೆ. ಅವರ ಋಣದ ಸಾಲದ ಹೊರೆ ನನ್ನ ಮೇಲಿದೆ. ಅದನ್ನು ಹೇಗೆ ತೀರಿಸುವುದು? ಎಂದು ಡಿಕೆಶಿ ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದರು.

51 ದಿನಗಳ ಕಾಲ ಜೈಲಿನಲ್ಲಿದ್ದ ಡಿಕೆಶಿ ದೆಹಲಿ ಹೈಕೋರ್ಟ್ ಜಾಮೀನು ನೀಡಿದ ನಂತರ ಹೊರಬಂದಿದ್ದರು. ನನಗೆ ಬೆನ್ನು ನೋವು ಸಹ ಕಾಡುತ್ತಿದೆ. ರಾಜಕಾರಣದ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಹೇಳಿದ್ದರು.

ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕ ಬಗ್ಗೆ ಅವರ ತಾಯಿ ಗೌರಮ್ಮ ಪ್ರತಿಕ್ರಿಯೆ ನೀಡಿದ್ದರು. ದೇವರನ್ನು ನಂಬಿದ್ದಕ್ಕೆ ಒಳ್ಳೆಯದಾಗಿದೆ, ಮಗ ಬಿಡುಗಡೆಯಾಗಿರುವುದು ಸಂತಸ  ತಂದಿದೆ ಎಂದಿದಿದ್ದರು. ಗಣೇಶ ಹಬ್ಬಕ್ಕೆ ಮಗ ಇರಲಿಲ್ಲ. ಈಗ ದೀಪಾವಳಿಗೆ ಬರುತ್ತಿದ್ದಾನೆ. ನನ್ನ ಮಗ ವೀರ, ಶೂರ ಅಳುವ ಪ್ರಶ್ನೆಯೇ ಇಲ್ಲ ಎಂದಿದ್ದರು.

PREV
click me!

Recommended Stories

ಹಾಸನದ 7ನೇ ತರಗತಿ ಬಾಲಕ ಏಷ್ಯನ್ ಬುಕ್‌ ಆಫ್ ರೆಕಾರ್ಡ್, ಕಣ್ಣು ಮುಚ್ಚಿಕೊಂಡೇ 1 ನಿಮಿಷದಲ್ಲಿ 8 ಕ್ಯೂಬ್ ಕಮಾಲ್!
ಬೇಲೂರು: ಕಾಡು ಮೊಲಕ್ಕೆ ಕಿವಿ ಚುಚ್ಚಿ ಚಿನ್ನದ ಓಲೆ ಹಾಕಿ ಮತ್ತೆ ಕಾಡಿಗೆ ಬಿಟ್ಟ ಜನ!