ಹಾಸನದಿಂದ ಪ್ರಜ್ವಲ್ ಫಿಕ್ಸ್, ಈಗಲೇ ಮತಯಾಚನೆ ಶುರುಹಚ್ಚಿಕೊಂಡ ತಾಯಿ

Published : Feb 28, 2019, 05:24 PM ISTUpdated : Feb 28, 2019, 05:26 PM IST
ಹಾಸನದಿಂದ ಪ್ರಜ್ವಲ್ ಫಿಕ್ಸ್, ಈಗಲೇ ಮತಯಾಚನೆ ಶುರುಹಚ್ಚಿಕೊಂಡ ತಾಯಿ

ಸಾರಾಂಶ

ಲೋಕಸಭಾ ಚುನಾವಣೆ ದೂರ ಇರುವಾಗಲೇ ಪುತ್ರನ ಪರ ತಾಯಿ ಮತ ಯಾಚನೆ ಆರಂಭ ಮಾಡಿದ್ದಾರೆ.  ಪುತ್ರ ಪ್ರಜ್ವಲ್ ಪರ  ತಾಯಿ ಭವಾನಿ ರೇವಣ್ಣ ಮತಯಾಚನೆ ಆರಂಭಿಸಿದ್ದಾರೆ.

ಹಾಸನ[ಫೆ.28]  ಹಾಸನ ಕ್ಷೇತ್ರರದಲ್ಲಿ ಪ್ರಜ್ವಲ್ ರೇವಣ್ಣ ಪರ ತಾಯಿ ಭವಾನಿ ಮತ ಯಾಚನೆ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಗೆ ಮತಹಾಕಿ ಆಶಿರ್ವದಿಸಿ ಎಂದು ಮನವಿ ಮಾಡಿದ್ದಾರೆ.

ಜೆಡಿಎಸ್ ಕ್ರೈಸ್ತ ಅಲ್ಪಸಂಖ್ಯಾತರ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮತಯಾಚನೆ  ಮಾಡಿದ ಭವಾನಿ , ಪ್ರಜ್ವಲ್ ಎಂಪಿ ಕ್ಯಾಂಡಿಡೇಟ್ ಎಂದು ದೇವೇಗೌಡರು ಈಗಾಗಲೇ ತಿಳಿಸಿದ್ದಾರೆ. ಪ್ರಜ್ವಲ್ ವಯಸ್ಸಿನಲ್ಲಿ ಕಿರಿಯ ,ರಾಜಕೀಯ ಅನುಭವ ಹೊಂದಿದ್ದಾನೆ. ಅವರ ತಂದೆ, ಚಿಕ್ಕಪ್ಪ, ತಾತ ಹೇಳೋದನ್ನ ತಿಳಿದುಕೊಂಡು ಕಾರ್ಯಕರ್ತರ ಮನ ಗೆದ್ದಿದ್ದಾನೆ. ನಿನ್ನೆ ಮೊನ್ನೆ ಬಂದು ನನಗೆ ಸೀಟ್ ಕೊಡಿ ಎಲೆಕ್ಷನ್ ಗೆ ನಿಲ್ತಿನಿ  ಎಂದು ಕೇಳುವವನಲ್ಲ ಎಂದರು. 

ಪುತ್ರ ಆಯ್ತು, ಈಗ ಸರ್ಕಾರಿ ಕಾರಿನಲ್ಲಿ ಪತ್ನಿಯ ದರ್ಬಾರ್! ಅಯ್ಯೋ ರೇವಣ್ಣ...

ಇಲ್ಲಿ ಜನರೇ ಪ್ರಜ್ವಲ್ ನಿಲ್ಸಿ ಅಂತಿದ್ದಾರೆ, ಹೀಗಾಗಿ ದೇವೇಗೌಡರು ಆಶೀರ್ವದಿಸಿ ಪ್ರಜ್ವಲ್ ಹೆಸರು ಸೂಚಿಸಿದ್ದಾರೆ. ಚುನಾವಣೆಯಲ್ಲಿ ಎಲ್ಲರ ಮನೆಗೆ ಬಂದು ಓಟ್ ಕೇಳೋದು ಕಷ್ಟವಾಗುತ್ತೆ. ಈ ಸಂದರ್ಭದಲ್ಲಿ ನಿಮ್ಮನ್ನು ಕೇಳುತ್ತಿದ್ದೇನೆ ಎಂದು ಕ್ರೈಸ್ತ ಬಾಂಧವರಲ್ಲಿ ಮತಯಾಚಿಸಿದ ಭವಾನಿ ರೇವಣ್ಣ. ಪ್ರಜ್ವಲ್ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿದ್ದಾನೆ ಎಂದು ಹೇಳಿದರು.

 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ