ನಮ್ಮೆಜಮಾನ್ರಂದ್ರೆ ಕಡಿಮೆ ಅಲ್ಲ .. ರೇವಣ್ಣಗೆ ಪತ್ನಿ ಫುಲ್ ಮಾರ್ಕ್ಸ್

Published : Feb 06, 2019, 11:25 PM ISTUpdated : Feb 06, 2019, 11:38 PM IST
ನಮ್ಮೆಜಮಾನ್ರಂದ್ರೆ ಕಡಿಮೆ ಅಲ್ಲ .. ರೇವಣ್ಣಗೆ ಪತ್ನಿ ಫುಲ್ ಮಾರ್ಕ್ಸ್

ಸಾರಾಂಶ

ಪತಿಗೆ ಪತ್ನಿ ಶಹಭಾಸ್ ನೀಡಿದ್ದಾರೆ. ನಮ್ಮೆಜಮಾನರು ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಭವಾನಿ ರೇವಣ್ಣ ಹಾಡಿ ಹೊಗಳಿದ್ದಾರೆ.

ಹಾಸನ[ಫೆ.06]  ಸಚಿವ ರೇವಣ್ಣ‌ ರವರು ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ.  ಪತಿ ರೇವಣ್ಣ ಕಾರ್ಯವನ್ನು ಪತ್ನಿ ಭವಾನಿ ರೇವಣ್ಣ ಕೊಂಡಾಡಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಬಿಡುವಿಲ್ಲದೆ ಕೆಲಸ ನಡೆಯುತ್ತಿದೆ. ರಾಜ್ಯವೇ ಒಂದು ಕಣ್ಣಾದ್ರೆ ಹಾಸನವೇ ಒಂದು ಕಣ್ಣು ಎಂದು ಜನರು ಮಾತನಾಡ್ತಾರೆ. ಅದಕ್ಕೆ ತಕ್ಕದಾಗಿ ರೇವಣ್ಣರವರೂ ಕೂಡ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ.

 ಹಾಸನ ಸಮೀಪದ‌ ಚಿಕ್ಕಹೊನ್ನೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತಿಯ ಗುಣಗಾನ ಮಾಡಿದ ಭವಾನಿ,  ರೇವಣ್ಣ ಅವರು ಯಾವಾಗಲೂ ದೊಡ್ಡ ಕೆಲಸದ ಬಗ್ಗೆಯೇ ಯೋಚನೆ ಮಾಡ್ತಾರೆ.  ಚಿಕ್ಕ ಚಿಕ್ಕ‌ಕೆಲಸಗಳನ್ನ ಮಾಡಿಸೋಣ ಮಾಡಿಸೋಣ ಅಂತಾರೆ ಆದ್ರೆ ಯಾವುದನ್ನೂ ನಿರ್ಲಕ್ಷ್ಯ ಮಾಡಲ್ಲ.  ಆಗಲ್ಲ ಎನ್ನೋ ಪದವೇ ಅವರ ಬಳಿ ಇಲ್ಲಾ ಎಂದರು.

ಎಚ್‌ಡಿಕೆ ಬಜೆಟ್‌ಗೆ ರೇವಣ್ಣ ಮುಹೂರ್ತ!: ಬಜೆಟ್ ಮಂಡನೆ ಸಮಯ ಬದಲು

ರೇವಣ್ಣರವರು ಹಾಸನದ ಚನ್ನರಾಯಪಟ್ಟಣ ಕ್ರಾಸ್ ಆದ್ರು ಅಂದ್ರೆ,ಯಾವುದೋ ಫೈಲ್ ಹಿಡಿದು ಬೆಂಗಳೂರಿಗೆ ಹೊರಟಿದ್ದಾರೆ ಎಂದರ್ಥ. ಆ ಕಡೆಯಿಂದ ನೆಲಮಂಗಲ ಬಿಟ್ರು ಅಂದ್ರೆ ಕೆಲಸ ಮಾಡಿಸಿಕೊಂಡು ವಾಪಸ್ ಬರ್ತಿದ್ದಾರೆ ಅಂತಾ ಯೋಚನೆ ಮಾಡ್ತೀವಿ. ಅವರು  ಆಕಸ್ಮಾತ್ ಬೆಂಗಳೂರಿನಲ್ಲಿ ಉಳಿದಿದ್ದಾರೆ ಅಂದ್ರೆ ಹೋದ ಕೆಲಸಕ್ಕೆ ಸಂಬಂಧ ಪಟ್ಟ ಸಚಿವರೊ,ಅಧಿಕಾರಿಯೋ ಸಿಕ್ಕಿಲ್ಲ ಎಂದರ್ಥ ಎಂದರು.

ಅವರಿಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲ ಇದೆ. ಕೆಲಸ ಮಾಡೋದ್ರಲ್ಲಿ ರೇವಣ್ಣರವರು ಯಾವತ್ತೂ ಮೊದಲ ಸ್ಥಾನಕ್ಕೆ ಬರ್ತಾರೆ ಎಂದು ಗುಣಗಾನ  ಚಿಕ್ಕಹೊನ್ನೇನಹಳ್ಳಿಯ ಗ್ರಾಮ ಸ್ವರಾಜ್ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ನಂತರ ಭವಾನಿ ರೇವಣ್ಣ ಪತಿಯನ್ನು ಹಾಡಿ ಹೊಗಳಿದರು.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ